ETV Bharat / sports

ನೋಬಾಲ್​ ವಿವಾದ.. ಅಂಪೈರ್​ ತೀರ್ಪಿಗೆ ಪಿಸಿಬಿ ಮುಖ್ಯಸ್ಥ ರಮೀಜ್​ ರಾಜಾ ಆಕ್ಷೇಪ - ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ

ಟಿ20 ವಿಶ್ವಕಪ್​ನ ಪಾಕಿಸ್ತಾನ- ಭಾರತ ನಡುವಿನ ಪಂದ್ಯದಲ್ಲಿ ನೋಬಾಲ್​ ವಿವಾದ ಉಂಟಾಗಿದೆ. ಅಂಪೈರ್​ ನೀಡಿದ ತೀರ್ಪಿನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ಕೇಳಿಬಂದಿದೆ. ಪಿಸಿಬಿ ಅಧ್ಯಕ್ಷ ರಮೀಜ್​ ರಾಜಾ ಕೂಡ ಇದನ್ನು ಟೀಕಿಸಿದ್ದಾರೆ.

pcb-chief-ramiz-raja-after-pakistans-loss-to-india
ಅಂಪೈರ್​ ತೀರ್ಪಿಗೆ ಪಿಸಿಬಿ ಮುಖ್ಯಸ್ಥ ರಮೀಜ್​ ರಾಜಾ ಆಕ್ಷೇಪ
author img

By

Published : Oct 23, 2022, 10:42 PM IST

ಇಸ್ಲಾಮಾಬಾದ್(ಪಾಕಿಸ್ತಾನ): ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಕೊನೆಯ ಓವರ್​ ವಿವಾದದ ಕಿಡಿ ಹೊತ್ತಿಸಿದೆ. ಮೊಹಮದ್​ ನವಾಜ್ ಎಸೆದ ಓವರ್​ನ 4ನೇ ಬಾಲ್​ ವಿಕೆಟ್​ಗೂ ಮೇಲಿದ್ದ ಕಾರಣ ಅಂಪೈರ್​ ಎರಾಸ್ಮಸ್​ ನೋಬಾಲ್ ನೀಡಿದರು. ಇದರಿಂದ ಭಾರತಕ್ಕೆ ಹೆಚ್ಚುವರಿ ಎಸೆತ ಸಿಕ್ಕಿತು. ಕೊನೆಯಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು ಸದೆಬಡಿದು ಜಯ ಸಾಧಿಸಿತು.

ಅಂಪೈರ್​ ನೀಡಿದ ನೋಬಾಲ್​ ತೀರ್ಪು ಈಗ ಚರ್ಚೆಗೆ ಕಾರಣವಾಗಿದೆ. ಆ ಚೆಂಡು ಬ್ಯಾಟ್​ಗೆ ಸಮಾನಾಂತರವಾಗಿದ್ದು, ನೋಬಾಲ್​ ನೀಡಿದ್ದು ತಪ್ಪು ನಿರ್ಧಾರ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಲಾಗಿದೆ.

ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಅಧ್ಯಕ್ಷ ರಮೀಜ್​ ರಾಜಾ ಕೂಡ ಅಂಪೈರ್​ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, "ಈ ಆಟ ಅತಿ ಕ್ರೂರ ಮತ್ತು ಅನ್ಯಾಯದಿಂದ ಕೂಡಿತ್ತು" ಎಂದು ಟೀಕಿಸಿದ್ದಾರೆ. ಇದೇ ವೇಳೆ ತಮ್ಮ ತಂಡದ ಆಟಗಾರರ ಹೋರಾಟವನ್ನು ಶ್ಲಾಘಿಸಿದ್ದಾರೆ.

ಇದೊಂದು ಅದ್ಭುತ ಪ್ರದರ್ಶನ. ನೀವು ಕೆಲವೊಮ್ಮೆ ಗೆಲ್ಲಬಹುದು, ಕೆಲವೊಮ್ಮೆ ಸೋಲಬಹುದು. ಆದರೆ, ನಿಮ್ಮ ಆಟ ಮಾತ್ರ ಮಾದರಿ. ಎಲ್ಲರಿಗೂ ಗೊತ್ತಿರುವ ಹಾಗೆ ಈ ಆಟ ಅತಿ ಕ್ರೂರ ಮತ್ತು ಅನ್ಯಾಯದಿಂದ ಕೂಡಿತ್ತು. ಪಾಕಿಸ್ತಾನ ತಂಡ ಉತ್ತಮ ಹೋರಾಟ ನಡೆಸಿತು ಎಂದು ಟ್ವೀಟ್ ಮಾಡಿದ್ದಾರೆ.

  • A classic! You win some you lose some and as we all know this game can be cruel and unfair .#TeamPakistan couldn’t have given more with bat and ball. Very proud of the effort!

    — Ramiz Raja (@iramizraja) October 23, 2022 " class="align-text-top noRightClick twitterSection" data=" ">

ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಟ: ಇನ್ನು, ಅಂಪೈರ್​ ನಿರ್ಧಾರಕ್ಕೆ ಪಾಕ್​ ಅಭಿಮಾನಿಗಳಿಂದ ಭಾರಿ ವಿರೋಧ ವ್ಯಕ್ತವಾದರೆ, ಭಾರತೀಯ ಅಭಿಮಾನಿಗಳು ಸೋಲು ಒಪ್ಪಿಕೊಳ್ಳುವುದನ್ನು ಕಲಿತುಕೊಳ್ಳಿ ಎಂದು ಚಾಟಿ ಬೀಸಿದ್ದಾರೆ. ವಿರಾಟ್​ ಕೊಹ್ಲಿ ಹೊಡೆದ ವಿವಾದಿತ ನೋಬಾಲ್​ ಎಸೆತದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಬಾಲ್​ ವಿಕೆಟ್​ಗೆ ಸಮಾನಾಂತರವಾಗಿದೆ. ಅದು ಹೇಗೆ ನೋಬಾಲ್​ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಭಾನುವಾರದ ಪಂದ್ಯದ ನಿಜವಾದ ಶತ್ರು ಎಂದರೆ ಅಂಪೈರ್​ ಎರಾಸ್ಮಸ್​ ಎಂದು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ಇನ್ನು, ಪಂದ್ಯದಲ್ಲಿ ಭಾರತ ಪಾಕಿಸ್ತಾನ ನೀಡಿದ 160 ರನ್​ಗಳ ಸವಾಲನ್ನು ವಿರಾಟ್​ ಕೊಹ್ಲಿಯ ಸಾಹಸ ಮತ್ತು ಹಾರ್ದಿಕ್​ ಪಾಂಡ್ಯಾರ ಆಲ್​ರೌಂಡ್​ ಆಟದಿಂದ ಗೆದ್ದು 2 ಪಾಯಿಂಟ್​ ಪಡೆದುಕೊಂಡಿತು.

ಓದಿ: ಮೆಲ್ಬರ್ನ್​ನಲ್ಲಿ ವಿರಾಟ ಪರ್ವ.. ಪಾಕ್​ ಸವಾಲು ಗೆದ್ದ 'ಕಿಂಗ್​ ಕೊಹ್ಲಿ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.