ETV Bharat / sports

ಕೋವಿಡ್ ನಿಯಮ ಉಲ್ಲಂಘನೆ: ಪಿಎಸ್​ಎಲ್​ನಿಂದ ವೇಗಿ ನಸೀಮ್ ಔಟ್ - ಪಿಎಸ್​ಎಲ್​ನಿಂದ ವೇಗಿ ನಸೀಮ್ ಔಟ್

ಪಿಎಸ್‌ಎಲ್‌ಗಾಗಿ ಬುಧವಾರ ಅಬುಧಾಬಿಗೆ ಪ್ರಯಾಣಿಸಲಿರುವ ಆಟಗಾರರು ಮತ್ತು ಟೀಮ್​ನ ಎಲ್ಲಾ ಸದಸ್ಯರು ಹೋಟೆಲ್‌ಗೆ ತಲುಪಿದ ಬಳಿಕ ಕೋವಿಡ್ ನೆಗೆಟಿವ್ ರಿಪೋರ್ಟ್ ಸಲ್ಲಿಸಬೇಕು. ಆದರೆ ಈ ರಿಪೋರ್ಟ್ 48 ಗಂಟೆಗಿಂತ ಮುಂಚಿನದ್ದಾಗಿರಬಾರದು. ಅಂದರೆ ಹೋಟೆಲ್‌ಗೆ ಬಂದ ಬಳಿಕ ಪರೀಕ್ಷಿಸಿ 48 ಗಂಟೆಯೊಳಗೆ ಬಂದ ರಿಪೋರ್ಟ್ ಆಗಿರಬೇಕು ಅನ್ನೋದು ನಿಯಮ.

ನಸೀಮ್ ಶಾ
ನಸೀಮ್ ಶಾ
author img

By

Published : May 25, 2021, 10:38 AM IST

ಕರಾಚಿ: ಕೋವಿಡ್-19 ನಿಯಮವನ್ನು ಉಲ್ಲಂಘಿಸಿದ್ದರಿಂದ ಪಾಕ್ ವೇಗಿ ನಸೀಮ್ ಅವರನ್ನು ಪಾಕಿಸ್ತಾನ್ ಸೂಪರ್ ಲೀಗ್‌ (ಪಿಎಸ್‌ಎಲ್‌) ಟೂರ್ನಿಯಿಂದ ಹೊರಗಿಟ್ಟಿದೆ.

ಅಬುಧಾಬಿಯಲ್ಲಿ ಮುಂದಿನ ತಿಂಗಳು ಪಾಕಿಸ್ತಾನ್ ಸೂಪರ್ ಲೀಗ್‌ನ ಉಳಿದ ಪಂದ್ಯಗಳು ನಡೆಯಲಿವೆ. ಮೇ 24 ಲಾಹೋರ್‌ಗೆ ಬಂದಿಳಿದಿದ್ದ 19ರ ಹರೆಯದ ನಸೀಮ್ ಶಾ ಕೋವಿಡ್ ನೆಗೆಟಿವ್ ರಿಪೋರ್ಟ್ ಸಲ್ಲಿಸಿದ್ದರು. ಇದು ಅವಧಿ ಮೀರಿದ ರಿಪೋರ್ಟ್ ಆಗಿದ್ದು, ಹೀಗಾಗಿ ಅವರನ್ನು ಟೂರ್ನಿಯಿಂದ ಹೊರಗಿಡಲಾಗಿದೆ ಎಂದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.

ಶಾ ಅವರನ್ನೂ ಕೂಡಲೇ ಪ್ರತ್ಯೇಕವಾಗಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಹೋಟೆಲ್‌ನಿಂದ ಬಿಡುಗಡೆ ಮಾಡುವ ಮುನ್ನ ಪ್ರತ್ಯೇಕ ಮಹಡಿಯಲ್ಲಿ ನಸೀಮ್‌ಗೆ ಐಸೊಲೇಶನ್‌ಗೆ ಸೂಚಿಸಲಾಗಿದೆ ಎಂದು ಪಿಸಿಬಿ ಹೇಳಿದೆ. ಪಿಸಿಬಿ ಜೂನ್ 5 ರಂದು ಅಬುಧಾಬಿಯಲ್ಲಿ ಪಿಎಸ್ಎಲ್ -6 ಅನ್ನು ಪುನರಾರಂಭಿಸಲು ಯೋಜಿಸಿದೆ, ಆದರೆ ಇನ್ನೂ ವೇಳಾಪಟ್ಟಿ ಪ್ರಕಟಿಸಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.