ETV Bharat / sports

ಬಿಸಿಸಿಐಗೆ ದೂರು : 2022ರ ಐಪಿಎಲ್ ಆವೃತ್ತಿಯಿಂದ​ ರಾಹುಲ್, ರಶೀದ್ ಖಾನ್​ ಹೊರ ಬೀಳುವ ಭೀತಿ?

ಈಗಾಗಲೇ ಕೆ ಎಲ್​ ರಾಹುಲ್​ ತಾವೂ ರಿಟೈನ್​ಗೆ ಲಭ್ಯರಿರುವುದಿಲ್ಲ. ಹರಾಜಿಗೆ ಹೋಗುವುದಾಗಿ ಪಂಜಾಬ್​ಗೆ ತಿಳಿಸಿದ್ದರೆ, ರಶೀದ್​ ತಮ್ಮನ್ನು ಮೊದಲ ಆಟಗಾರನಾಗಿ ರಿಟೈನ್ ಮಾಡಿಕೊಳ್ಳಬೇಕೆಂದು ಹೈದರಾಬಾದ್​ಗೆ ಬೇಡಿಕೆಯಿಟ್ಟಿದ್ದಾರೆ. ಬಿಸಿಸಿಐ ನಿಯಮದ ಪ್ರಕಾರ ಮೊದಲ ಆಟಗಾರನಾಗಿ ರಿಟೈನ್ ಮಾಡಕೊಳ್ಳುವ ಆಟಗಾರ 14-16 ಕೋಟಿ ರೂ. ಪಡೆಯಲಿದ್ದಾರೆ. ರಾಹುಲ್ ಪ್ರಸ್ತುತ 11, ರಶೀದ್​ 9 ಕೋಟಿ ಪಡೆಯುತ್ತಿದ್ದಾರೆ..

PBKS, SRH complain to BCCI against Lucknow
ಕೆಎಲ್ ರಾಹುಲ್ ರಶೀದ್ ಖಾನ್
author img

By

Published : Nov 29, 2021, 7:50 PM IST

ಕಾನ್ಪುರ : ಮುಂದಿನ ಐಪಿಎಲ್​ಗೆ ಫ್ರಾಂಚೈಸಿಗಳು ರಿಟೈನ್ ಆಟಗಾರರನ್ನು ಘೋಷಿಸುವ ಮುನ್ನವೇ ನೂತನ ಲಖನೌ ಫ್ರಾಂಚೈಸಿ ತಮ್ಮ ಆಟಗಾರರನ್ನು ಸೆಳೆದುಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಪಂಜಾಬ್ ಕಿಂಗ್ಸ್ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ಫ್ರಾಂಚೈಸಿಗಳು ಬಿಸಿಸಿಐಗೆ ಮೌಖಿಕ ದೂರು ನೀಡಿವೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಬಿಸಿಸಿಐ ನಿಯಮದ ಪ್ರಕಾರ ಡಿಸೆಂಬರ್​ 30ರೊಳಗೆ ಎಲ್ಲಾ ಫ್ರಾಂಚೈಸಿಗಳು ತಮ್ಮ ರೀಟೈನ್ ಆಟಗಾರರ ಪಟ್ಟಿಯನ್ನು ಸಲ್ಲಿಸಿದ ನಂತರ ಲಖನೌ ಮತ್ತು ಆಹ್ಮದಾಬಾದ್​ ಫ್ರಾಂಚೈಸಿಗಳು ತಲಾ ಮೂರು ಆಟಗಾರರನ್ನು ನೇರವಾಗಿ ಖರೀದಿಸಬಹುದಾಗಿದೆ.

ಆದರೆ, ಇನ್ನೂ ಫ್ರಾಂಚೈಸಿಗಳು ಆಟಗಾರರ ರಿಟೈನ್ ಮಾಡಿಕೊಳ್ಳುವ ಮುನ್ನವೇ ಲಖನೌ ಹಣದ ಆಮಿಷವೊಡ್ಡಿ ತಮ್ಮ ತಂಡದ ಪರ ಆಡಲು ಆಟಗಾರರನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಪಂಜಾಬ್ ಕಿಂಗ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗಳು ಲಖನೌ ವಿರುದ್ಧ ದೂರು ನೀಡಿವೆ.

ವರದಿಯ ಪ್ರಕಾರ ಪಂಜಾಬ್ ಕಿಂಗ್ಸ್ ತಂಡದ ಕೆ ಎಲ್ ರಾಹುಲ್ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡದ ಸ್ಟಾರ್ ಸ್ಪಿನ್ನರ್​ ರಶೀದ್​ ಖಾನ್​ರನ್ನು ತನ್ನತ್ತ ಸೆಳೆಯಲು ಲಖನೌ ಫ್ರಾಂಚೈಸಿ ಪ್ರಯತ್ನಸಿದೆ ಎನ್ನಲಾಗಿದೆ.

ನಾವು ಈ ವಿಷಯದಲ್ಲಿ ಇನ್ನೂ ಯಾವುದೇ ಲಿಖಿತ ದೂರನ್ನು ಸ್ವೀಕರಿಸಿಲ್ಲ. ಆದರೆ, ಎರಡೂ ಫ್ರಾಂಚೈಸಿಗಳು ತಮ್ಮ ತಂಡದ ಆಟಗಾರರನ್ನು ಸೆಳೆಯಲು ಪ್ರಯತ್ನಿಸುತ್ತಿವೆ ಎಂದು ಲಖನೌ ತಂಡದ ವಿರುದ್ಧ ಮೌಖಿಕ ದೂರು ನೀಡಿವೆ.

ನಾವು ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದೇವೆ ಮತ್ತು ತಪ್ಪಿತಸ್ಥರೆಂದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಬಲ ಪೈಪೋಟಿ ಇದ್ದಾಗ, ಅಂತಹ ವಿಷಯಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಪ್ರಸ್ತುತ ಫ್ರಾಂಚೈಸಿಗಳು ತಮ್ಮ ತಂಡವನ್ನು ಸಮತೋಲನದಲ್ಲಿಡಲು ಪ್ರಯತ್ನಿಸುತ್ತಿರುವಾಗ ಈ ರೀತಿಯ ವರ್ತನೆ ಮಾಡುವುದು ಅನ್ಯಾಯ ಎಂದು ಅಧಿಕಾರಿ ಪ್ರತಿಷ್ಠಿತ ಕ್ರೀಡಾ ವೆಬ್​ಸೈಟ್​ ಇನ್​ಸೈಡ್​ ಸ್ಪೋರ್ಟ್​ಗೆ ತಿಳಿಸಿದ್ದಾರೆ.

ಈಗಾಗಲೇ ಕೆ ಎಲ್​ ರಾಹುಲ್​ ತಾವೂ ರಿಟೈನ್​ಗೆ ಲಭ್ಯರಿರುವುದಿಲ್ಲ. ಹರಾಜಿಗೆ ಹೋಗುವುದಾಗಿ ಪಂಜಾಬ್​ಗೆ ತಿಳಿಸಿದ್ದರೆ, ರಶೀದ್​ ತಮ್ಮನ್ನು ಮೊದಲ ಆಟಗಾರನಾಗಿ ರಿಟೈನ್ ಮಾಡಿಕೊಳ್ಳಬೇಕೆಂದು ಹೈದರಾಬಾದ್​ಗೆ ಬೇಡಿಕೆಯಿಟ್ಟಿದ್ದಾರೆ.

ಬಿಸಿಸಿಐ ನಿಯಮದ ಪ್ರಕಾರ ಮೊದಲ ಆಟಗಾರನಾಗಿ ರಿಟೈನ್ ಮಾಡಕೊಳ್ಳುವ ಆಟಗಾರ 14-16 ಕೋಟಿ ರೂ. ಪಡೆಯಲಿದ್ದಾರೆ. ರಾಹುಲ್ ಪ್ರಸ್ತುತ 11, ರಶೀದ್​ 9 ಕೋಟಿ ಪಡೆಯುತ್ತಿದ್ದಾರೆ.

ನಿಷೇಧದ ಭೀತಿ : 2010ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ರವೀಂದ್ರ ಜಡೇಜಾ ತಮ್ಮನ್ನ ಖರೀದಿಸುವಂತೆ ಕೆಲವು ಫ್ರಾಂಚೈಸಿಗಳ ಜೊತೆ ಮಾತನಾಡಿದ ಕಾರಣ ಅವರನ್ನು ಒಂದು ಆವೃತ್ತಿಯಲ್ಲಿ ನಿಷೇಧಿಸಲಾಗಿತ್ತು. ಒಂದು ವೇಳೆ ರಾಹುಲ್​-ರಶೀದ್​ ವಿರುದ್ಧದ ಆರೋಪ ಸಾಬೀತಾದರೆ ಇವರಿಬ್ಬರೂ ಸಹಾ ನಿಷೇಧಕ್ಕೊಳಗಾಗುವ ಸಾಧ್ಯತೆಯಿದೆ.

ಇದನ್ನೂ ಓದಿ:5 ದಿನ ಕ್ರಿಕೆಟ್ ರಸದೌತಣ ನೀಡಿದ ಪಿಚ್​ ತಯಾರಿಸಿದ್ದಕ್ಕೆ ಸಿಬ್ಬಂದಿಗೆ ₹35,000 ನೀಡಿದ ರಾ'ವಾಲ್‌' ದ್ರಾವಿಡ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.