ETV Bharat / sports

ಕೆಕೆಆರ್​ಗೆ ಆಘಾತ : ಮೊದಲು ಮಾರ್ಗನ್, ಇದೀಗ ಮತ್ತೊಬ್ಬ ವಿದೇಶಿ ಸ್ಟಾರ್ ಐಪಿಎಲ್​ಗೆ ಅಲಭ್ಯ

ಸಿಡ್ನಿ ಹೆರಾಲ್ಡ್ ವರದಿಯಂತೆ, ಪ್ಯಾಟ್​ ಕಮಿನ್ಸ್​ ತಾವೂ ಐಪಿಎಲ್​ನ 2ನೇ ಭಾಗಕ್ಕೆ ಅಲಭ್ಯರಾಗುವುದಾಗಿ ತಿಳಿಸಿದ್ದಾರೆ. ಆದರೆ, ಇದಕ್ಕೆ ಯಾವುದೇ ಕಾರಣ ನೀಡಿಲ್ಲ. ಇದರಿಂದ ಕೆಕೆಆರ್​ಗೆ ದೊಡ್ಡ ಹೊಡೆತ ಬಿದ್ದಿದೆ. ನಾಯಕ ಮತ್ತು ಸ್ಟಾರ್​ ಬೌಲರ್​ ಇಲ್ಲದೆ ಕೆಕೆಆರ್ ಕಣಕ್ಕಿಳಿಯಬೇಕಿದೆ..

ಐಪಿಎಲ್ 2021 ಯುಎಇ
ಐಪಿಎಲ್ 2021 ಯುಎಇ
author img

By

Published : May 30, 2021, 3:55 PM IST

ಮುಂಬೈ : ಸೆಪ್ಟೆಂಬರ್​ನಲ್ಲಿ ಯುಎಇನಲ್ಲಿ ನಡೆಯಲಿರುವ ಐಪಿಎಲ್​ನ 2ನೇ ಭಾಗಕ್ಕೆ ಆಸ್ಟ್ರೇಲಿಯಾದ ವೇಗಿ ಪ್ಯಾಟ್​ ಕಮ್ಮಿನ್ಸ್​ ಭಾಗವಹಿಸದಿರಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಈಗಾಗಲೇ ಇಂಗ್ಲೆಂಡ್ ಆಟಗಾರರು ಟೂರ್ನಿಗೆ ಅಲಭ್ಯರಾಗಲಿದ್ದಾರೆ.

ಪ್ಯಾಟ್ ಕಮ್ಮಿನ್ಸ್​ ಕೆಕೆಆರ್ ತಂಡದಲ್ಲಿದ್ದರು. ಈಗಾಗಲೇ ಇಂಗ್ಲೆಂಡ್​ ಬೋರ್ಡ್​ ಐಪಿಎಲ್ ದ್ವಿತೀಯಾರ್ಧಕ್ಕೆ ತಮ್ಮ ಆಟಗಾರರನ್ನು ಕಳುಹಿಸದಿರಲು ನಿರ್ಧರಿಸಿದೆ.

ದ್ವಿಪಕ್ಷೀಯ ಸರಣಿ ಇರುವುದರಿಂದ ನ್ಯೂಜಿಲ್ಯಾಂಡ್ ಆಟಗಾರರು ಕೂಡ ಅಲಭ್ಯರಾಗಲಿದ್ದಾರೆ. ಇದೀಗ ಆಸ್ಟ್ರೇಲಿಯಾ ಆಟಗಾರರು ಕೂಡ ಯುಎಇಯಲ್ಲಿ ನಡೆಯಲಿರುವ ಶ್ರೀಮಂತ ಕ್ರಿಕೆಟ್​ ಲೀಗ್​ಗೆ ಆಗಮಿಸುವುದು ಅನುಮಾನ ಎನ್ನಲಾಗುತ್ತಿದೆ.

ಪ್ಯಾಟ್ ಕಮಿನ್ಸ್​
ಪ್ಯಾಟ್ ಕಮಿನ್ಸ್​

ಸಿಡ್ನಿ ಹೆರಾಲ್ಡ್ ವರದಿಯಂತೆ, ಪ್ಯಾಟ್​ ಕಮಿನ್ಸ್​ ತಾವೂ ಐಪಿಎಲ್​ನ 2ನೇ ಭಾಗಕ್ಕೆ ಅಲಭ್ಯರಾಗುವುದಾಗಿ ತಿಳಿಸಿದ್ದಾರೆ. ಆದರೆ, ಇದಕ್ಕೆ ಯಾವುದೇ ಕಾರಣ ನೀಡಿಲ್ಲ. ಇದರಿಂದ ಕೆಕೆಆರ್​ಗೆ ದೊಡ್ಡ ಹೊಡೆತ ಬಿದ್ದಿದೆ. ನಾಯಕ ಮತ್ತು ಸ್ಟಾರ್​ ಬೌಲರ್​ ಇಲ್ಲದೆ ಕೆಕೆಆರ್ ಕಣಕ್ಕಿಳಿಯಬೇಕಿದೆ.

ಅಲ್ಲದೆ ಆಸ್ಟ್ರೇಲಿಯಾ, ವೆಸ್ಟ್​ ಇಂಡೀಸ್ ಮತ್ತು ಬಾಂಗ್ಲಾದೇಶಗಳ ಪ್ರವಾಸ ಕೈಗೊಳ್ಳಲಿದೆ. ಒಂದುವರೆ ತಿಂಗಳ ಪ್ರವಾಸ ಮುಗಿದ ನಂತರ ಟಿ20 ವಿಶ್ವಕಪ್​ಗೂ ಮುನ್ನ ಕ್ರಿಕೆಟಿಗರಿಗೆ ವಿಶ್ರಾಂತಿ ಅಗತ್ಯವಿದೆ ಎಂಬ ಕಾರಣಕ್ಕೆ ಐಪಿಎಲ್​ನಲ್ಲಿ ಆಡಲು ಅವಕಾಶ ನೀಡುತ್ತಿಲ್ಲ ಎಂದು ಸಿಡ್ನಿ ಹೆರಾಲ್ಡ್ ವರದಿ ಮಾಡಿದೆ.

ಪ್ರಸ್ತುತ ಪ್ಯಾಟ್ ಕಮ್ಮಿನ್ಸ್ ಮಾತ್ರ ಹೊರಗುಳಿಯುವುದಾಗಿ ನಿರ್ಧರಿಸಿದ್ದಾರೆ. ಒಂದು ವೇಳೆ ಸಿಎ ತನ್ನ ನಿರ್ಧಾರಕ್ಕೆ ಬದ್ದವಾದರೆ 17 ಆಸ್ಟ್ರೇಲಿಯನ್ ಕ್ರಿಕೆಟಿಗರು ಟೂರ್ನಿಯನ್ನು ತಪ್ಪಿಸಿಕೊಳ್ಳಲಿದ್ದಾರೆ.

ಇದನ್ನು ಓದಿ:IPL ಪುನಾರಾರಂಭ : ಸಿಪಿಎಲ್ ಒಂದು ವಾರ ಬೇಗ ಆರಂಭಿಸಲು ವಿಂಡೀಸ್ ಮಂಡಳಿಗೆ ಬಿಸಿಸಿಐ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.