ETV Bharat / sports

ಪಂತ್ 100, ಭಾರತ 198ಕ್ಕೆ ಆಲೌಟ್​: ದಕ್ಷಿಣ ಆಫ್ರಿಕಾಗೆ 212 ರನ್​ ಗುರಿ - ಭಾರತ ದಕ್ಷಿಣ ಆಫ್ರಿಕಾ ಟೆಸ್ಟ್​ ದಾಖಲೆ

3ನೇ ದಿನ 2ನೇ ಇನ್ನಿಂಗ್ಸ್​ನಲ್ಲಿ ಭಾರತ ತಂಡ ಹರಿಣಗಳ ವೇಗಿಗಳ ದಾಳಿಗೆ ತತ್ತರಿಸಿ ಕೇವಲ 198 ರನ್​ಗಳಿಗೆ ಆಲೌಟ್​ ಆಯಿತು. ರಿಷಭ್ ಪಂತ್ ಏಕಾಂಗಿ ಹೋರಾಟ ನಡೆಸಿ 139 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್​ಗಳ ನೆರವಿನಿಂದ 100 ರನ್​ಗಳಿಸಿ ಅಜೇಯರಾಗುಳಿದರು.

Pant makes 100, India set South Africa 212-run target to win 3rd Test
ದಕ್ಷಿಣ ಆಫ್ರಿಕಾಗೆ 212 ರನ್​ಗಳ ಗುರಿ
author img

By

Published : Jan 13, 2022, 7:14 PM IST

Updated : Jan 13, 2022, 7:33 PM IST

ಕೇಪ್​ಟೌನ್​: ವಿಕೆಟ್ ಕೀಪರ್​, ಬ್ಯಾಟರ್​ ರಿಷಭ್ ಪಂತ್ ಅಜೇಯ ಶತಕದ ಹೊರತಾಗಿಯೂ ಭಾರತ ತಂಡ 3ನೇ ಟೆಸ್ಟ್​ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ 212 ರನ್​ಗಳ ಸಾಧಾರಣ ಗುರಿ ನೀಡಿತು.

3ನೇ ದಿನ 2ನೇ ಇನ್ನಿಂಗ್ಸ್​ನಲ್ಲಿ ಭಾರತ ತಂಡ ಹರಿಣಗಳ ವೇಗಿಗಳ ದಾಳಿಗೆ ತತ್ತರಿಸಿ ಕೇವಲ 198 ರನ್​ಗಳಿಗೆ ಆಲೌಟ್​ ಆಯಿತು. ರಿಷಭ್ ಪಂತ್ ಏಕಾಂಗಿ ಹೋರಾಟ ನಡೆಸಿ 139 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್​ಗಳ ನೆರವಿನಿಂದ 100 ರನ್​ಗಳಿಸಿ ಅಜೇಯರಾಗಿ ಉಳಿದುಕೊಂಡರು.

ಇವರನ್ನು ಹೊರೆತುಪಡಿಸಿದರೆ ನಾಯಕ ವಿರಾಟ್ ಕೊಹ್ಲಿ 143 ಎಸೆತಗಳಲ್ಲಿ 29 ರನ್​ಗಳಿಸಿದ್ದೇ ತಂಡದ 2ನೇ ಗರಿಷ್ಠ ಸ್ಕೋರ್​ ಆಗಿತ್ತು. ಉಳಿದ ಯಾವೊಬ್ಬ ಬ್ಯಾಟರ್​ 10ರ ಗಡಿದಾಟುವಲ್ಲಿ ವಿಫಲರಾದರು.

ಕೆಎಲ್ ರಾಹುಲ್​ 10, ಮಯಾಂಕ್ ಅಗರ್ವಾಲ್ 7, ಪೂಜಾರ 9, ರಹಾನೆ 1, ರವಿಚಂದ್ರನ್ ಅಶ್ವಿನ್​ 7, ಶಾರ್ದೂಲ್ ಠಾಕೂರ್​ 5, ಬುಮ್ರಾ 2, ಉಮೇಶ್ ಯಾದವ್​ ಮತ್ತು ಶಮಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

ದಕ್ಷಿಣ ಅಫ್ರಿಕಾ ಪರ ಮಾರ್ಕೊ ಜಾನ್ಸನ್​ 36ಕ್ಕೆ 4, ಕಗಿಸೊ ರಬಾಡ 53ಕ್ಕೆ3, ಲುಂಗಿ ಎಂಗಿಡಿ 21ಕ್ಕೆ 3 ವಿಕೆಟ್ ಪಡೆದು ಭಾರತ ತಂಡವನ್ನು 200ರ ಗಡಿಯೊಳಗೆ ನಿಯಂತ್ರಿಸಿದರು.

ಸಂಕ್ಷಿಪ್ತ ಸ್ಕೋರ್​:

ಭಾರತ ಮೊದಲ ಇನ್ನಿಂಗ್ಸ್​ 223 ಆಲೌಟ್; ಕೊಹ್ಲಿ 79, ಕಗಿಸೊ ರಬಾಡ 73ಕ್ಕೆ4, ಮಾರ್ಕೊ ಜಾನ್ಸನ್​ 55ಕ್ಕೆ3

ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್​ 210 ಆಲೌಟ್​; ಕೀಗನ್ ಪೀಟರ್ಸನ್​ 72, ಜಸ್ಪ್ರೀತ್ ಬುಮ್ರಾ 42ಕ್ಕೆ5, ಶಮಿ 39ಕ್ಕೆ2

ಭಾರತ 2ನೇ ಇನ್ನಿಂಗ್ಸ್​ 198 ಆಲೌಟ್; ರಿಷಭ್ ಪಂತ್ ಅಜೇಯ 100, ಮಾರ್ಕೊ ಜಾನ್ಸನ್​ 36ಕ್ಕೆ4, ಕಗಿಸೊ ರಬಾಡ 53ಕ್ಕೆ3, ಎಂಗಿಡಿ 21ಕ್ಕೆ3)

ಇದನ್ನೂ ಓದಿ:ಅವರಿಬ್ಬರಿಗೋಸ್ಕರ ಇನ್ನೆಷ್ಟು ದಿನ ಯುವಕರನ್ನ ಹೊರಗಿಡ್ತೀರಾ?: ರಹಾನೆ-ಪೂಜಾರ ಆಟಕ್ಕೆ ನೆಟ್ಟಿಗರ ಅಸಮಾಧಾನ

Last Updated : Jan 13, 2022, 7:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.