ಡರ್ಹಮ್: ಕೋವಿಡ್ ಪಾಸಿಟಿವ್ ಪಡೆದಿದ್ದ ಬೌಲಿಂಗ್ ಕೋಚ್ ಭರತ್ ಅರುಣ್ ಜೊತೆ ಸಂಪರ್ಕದಲ್ಲಿದ್ದ ಕಾರಣ ಕಳೆದ ಒಂದು ವಾರ ಐಸೊಲೇಸನ್ನಲ್ಲಿದ್ದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಮತ್ತು ಮೀಸಲು ಓಪನರ್ ಅಭಿಮನ್ಯು ಈಶ್ವರನ್ ಶುಕ್ರವಾರ ಡರ್ಹಮ್ನಲ್ಲಿರುವ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಈಗಾಗಲೇ ಶುಬ್ಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ವೇಗದ ಬೌಲರ್ ಆವೇಶ್ ಖಾನ್ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದಾರೆ. ಈಶ್ವರನ್ ಬ್ಯಾಕ್ಅಪ್ ಆರಂಭಿಕನಾಗಿ ತಂಡಕ್ಕೆ ಸೇರಿಕೊಳ್ಳುವ ಸಾಧ್ಯತೆಯಿದೆ. ಅವರನ್ನು ಮೀಸಲು ಆಟಗಾರನಾಗಿ ಆವೇಶ್ ಖಾನ್, ಪ್ರಸಿಧ್ ಕೃಷ್ಣ ಜೊತೆಗೆ ಆಯ್ಕೆ ಮಾಡಲಾಗಿತ್ತು.
-
Hello @RishabhPant17, great to have you back 😀#TeamIndia pic.twitter.com/aHYcRfhsLy
— BCCI (@BCCI) July 21, 2021 " class="align-text-top noRightClick twitterSection" data="
">Hello @RishabhPant17, great to have you back 😀#TeamIndia pic.twitter.com/aHYcRfhsLy
— BCCI (@BCCI) July 21, 2021Hello @RishabhPant17, great to have you back 😀#TeamIndia pic.twitter.com/aHYcRfhsLy
— BCCI (@BCCI) July 21, 2021
ಇನ್ನು ಕೋವಿಡ್ 19 ಟೆಸ್ಟ್ನಲ್ಲಿ ಪಾಸಿಟಿವ್ ಪಡೆದಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಈಗಾಗಲೇ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಆಗಸ್ಟ್ 4 ರಿಂದ ಆರಂಭವಾಗಲಿರುವ ಸರಣಿಯ ಮೊದಲ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಪಂತ್ ನಿರ್ವಹಿಸಲಿದ್ದಾರೆ. ಆದರೆ ಆರಂಭಿಕನಾಗಿ ರೋಹಿತ್ ಶರ್ಮಾ ಜೊತೆಗೆ ಕನ್ನಡಿಗರಾದ ರಾಹುಲ್ ಅಥವಾ ಮಯಾಂಕ್ ಅಗರ್ವಾಲ್ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯುವ ಸಾಧ್ಯತೆಯಿದೆ.
ಇದನ್ನೂ ಓದಿ:ಒಲಿಂಪಿಕ್ಸ್ ಫುಟ್ಬಾಲ್: ರಿಚರ್ಲಿಸನ್ ಹ್ಯಾಟ್ರಿಕ್ ಗೋಲು, 4-2 ರಿಂದ ಜರ್ಮನಿ ಮಣಿಸಿದ ಬ್ರೆಜಿಲ್