ETV Bharat / sports

ಕೋವಿಡ್ ಹೋರಾಟಕ್ಕೆ ಪಾಂಡ್ಯ ಬ್ರದರ್ಸ್ ಸಾಥ್​: ಗ್ರಾಮೀಣ ಪ್ರದೇಶಕ್ಕೆ 200 ಆಕ್ಸಿಜನ್ ಕಾನ್ಸಂಟ್ರೇಟರ್ಸ್ ನೆರವು - ಹಾರ್ದಿಕ್ ಪಾಂಡ್ಯ

ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ತಮ್ಮ ಕುಟುಂಬದ ಪರವಾಗಿ 200 ಆಕ್ಸಿಜನ್ ಕಾನ್ಸೆಂಟ್ರೇಟರ್​ಗಳನ್ನು ನೀಡುವುದಾಗಿ ತಿಳಿಸಿದ್ದಾರೆ.

ಪಾಂಡ್ಯ ಬ್ರದರ್ಸ್
ಪಾಂಡ್ಯ ಬ್ರದರ್ಸ್
author img

By

Published : May 1, 2021, 10:05 PM IST

ನವದೆಹಲಿ: ಭಾರತದಲ್ಲಿ ಎರಡನೇ ಹಂತದ ಕೊರೊನಾ ವ್ಯಾಪಕವಾಗಿದೆ. ನಿತ್ಯ 3 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸಾವಿರಾರು ಮಂದಿ ಆಕ್ಸಿಜನ್ ಕೊರತೆಯಿಂದಲೇ ಸಾವೀಗೀಡಾಗುತ್ತಿದ್ದಾರೆ. ಈ ಕಾರಣದಿಂದ ಸಿನಿಮಾ ನಟರು, ದೇಶ ವಿದೇಶದ ಕ್ರಿಕೆಟಿಗರು ಭಾರತದ ಜನತೆಯ ನೆರವಿಗೆ ತಮ್ಮ ಕೈಲಾದಂತಹ ನೆರವು ಘೋಷಿಸುತ್ತಿದ್ದಾರೆ. ಈ ಅಭಿಯಾನಕ್ಕೆ ಭಾರತ ತಂಡದ ಕ್ರಿಕೆಟಿಗರಾದ ಪಾಂಡ್ಯ ಸಹೋದರರು ಕೂಡ ಕೈಜೋಡಿಸಿದ್ದಾರೆ.

ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ತಮ್ಮ ಕುಟುಂಬದ ಪರವಾಗಿ 200 ಆಕ್ಸಿಜನ್ ಕಾನ್ಸೆಂಟ್ರೇಟರ್​ಗಳನ್ನು ನೀಡುವುದಾಗಿ ತಿಳಿಸಿದ್ದಾರೆ.

"ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ದೇಶವು ಅನುಭವಿಸುತ್ತಿರುವ ಕಷ್ಟವನ್ನು ನಾವೆಲ್ಲರೂ ಅರ್ಥಮಾಡಿಕೊಂಡಿದ್ದೇವೆ. ಇಂತಹ ಕಷ್ಟದ ಸಂದರ್ಭದಲ್ಲೂ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳು, ಮುಂಚೂಣಿ ಕಾರ್ಮಿಕರಿಗೆ ಕೃತಜ್ಞತೆಗಳನ್ನು ಅರ್ಪಿಸಬೇಕು" ಎಂದು ಪಾಂಡ್ಯ ಹೇಳಿದ್ದಾರೆ.

ಮಾತು ಮುಂದುವರಿಸಿ, ಕೃನಾಲ್ , ನಾನು ಮತ್ತು ನಮ್ಮ ತಾಯಿ ಒಟ್ಟಾರೆ ನಮ್ಮ ಕುಟುಂಬ ಈ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ಏನಾದರೂ ಸಹಾಯ ಮಾಡಬೇಕೆಂದು ನಿರ್ಧಿಸಿದ್ದು, 200 ಆಕ್ಸಿಜನ್ ಕಾನ್ಸೆಂಟ್ರೇಟರ್( ಆಮ್ಲಜನಕ ಸಾಂದ್ರಕ)​ಗಳನ್ನು ಅಗತ್ಯವಿರುವ ಭಾರತದ ಗ್ರಾಮೀಣ ಪ್ರದೇಶಗಳಿಗೆ ದಾನ ಮಾಡಲು ತೀರ್ಮಾನಿಸಿದ್ದೇವೆ" ಎಂದು ತಿಳಿಸಿದ್ದಾರೆ.

ಈಗಾಗಲೇ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಒಂದು ಕೋಟಿ ರೂಪಾಯಿಯನ್ನು ಆಕ್ಸಿಜನ್ ಕಾನ್ಸಂಟ್ರೇಟ್​ಗಳನ್ನು ಒದಗಿಸಲು ಸರ್ಕಾರಕ್ಕೆ ನೀಡಿದ್ದಾರೆ. ಭಾರತದ ಆರಂಭಿಕ ಬ್ಯಾಟ್ಸ್​ಮನ್ ಶಿಖರ್ ಧವನ್ 20 ಲಕ್ಷ, ಉನಾದ್ಕಟ್ ತಮ್ಮ ಐಪಿಎಲ್ ವೇತನದ ಶೇ 10 ರಷ್ಟನ್ನು ನೀಡುವುದಾಗಿ ಘೋಷಿಸಿದ್ದಾರೆ.

ಆಸ್ಟ್ರೇಲಿಯಾದ ಪ್ಯಾಟ್​ ಕಮಿನ್ಸ್ ಮತ್ತು ಬ್ರೆಟ್​ ಲೀ ಹಾಗೂ ವೆಸ್ಟ್​ ಇಂಡೀಸ್​ನ ನಿಕೋಲಸ್​ ಪೂರನ್ ಕೂಡ ಭಾರತದ ಪರಿಸ್ಥಿತಿಗೆ ಮರುಕ ವ್ಯಕ್ತಪಡಿಸಿ ದೇಣಿಗೆ ನೀಡಿದ್ದಾರೆ.

ಇದನ್ನು ಓದಿ:'ಮಿಷನ್​ ಆಕ್ಸಿಜನ್​'ಗೆ ಗಬ್ಬರ್​​ ಸಿಂಗ್​​​: 20 ಲಕ್ಷ ರೂ, IPLನಿಂದ ಬಂದ ಪ್ರಶಸ್ತಿ ಹಣ ನೀಡಲು ಮುಂದಾದ ಧವನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.