ETV Bharat / sports

ವನಿತೆಯರ ಐಪಿಎಲ್​ಗೆ ಹೆದರಿ ಪಾಕಿಸ್ತಾನ ಮಹಿಳಾ ಟಿ20 ಲೀಗ್‌ ದಿನಾಂಕ ಮುಂದೂಡಿಕೆ

author img

By

Published : Jan 16, 2023, 5:25 PM IST

ಭಾರತದಲ್ಲಿ ವನಿತೆಯರ ಐಪಿಎಲ್​ಗೆ ಭರ್ಜರಿ ತಯಾರಿ - ಭಾರತದ ಮಹಿಳಾ ಐಪಿಎಲ್​ ಸಮಯದಲ್ಲೇ ಆಯೋಜನೆಗೊಂಡಿದ್ದ ಪಾಕಿಸ್ತಾನ ಮಹಿಳಾ ಟಿ20 ಲೀಗ್‌ ದಿನಾಂಕ ಮುಂದೂಡಿಕೆ.

Pakistan Womens t20 league postpond
ಪಾಕಿಸ್ತಾನ ಮಹಿಳಾ ಟಿ20 ಲೀಗ್‌

ನವದೆಹಲಿ: ಭಾರತದ ಟಿ20 ಮಾದರಿಯ ದೇಶೀಯ ಟೂರ್ನಿ ಐಪಿಎಲ್​ ವಿಶ್ವದಾದ್ಯಂತ ಅತ್ಯಂತ ಯಶಸ್ವಿ ಲೀಗ್​ ಆಗಿದೆ. ಈ ವರ್ಷದಿಂದ ಮಹಿಳಾ ಐಪಿಎಲ್​ ಕೂಡ ಆರಂಭವಾಗಲಿದೆ. ಮುಂದಿನ ತಿಂಗಳು ಮಹಿಳಾ ಐಪಿಎಲ್​ನ ಬೃಹತ್​ ಹರಾಜು ನಡೆಯಲಿದೆ. ಭಾರತದ ವನಿತೆಯರ ಐಪಿಎಲ್​ ತಯಾರಿ ಕಂಡ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಅಲ್ಲಿನ ಮಹಿಳಾ ಟಿ20 ಲೀಗ್‌ನ್ನು ಮುಂದುಡುತ್ತಿದೆ.

ಐಪಿಎಲ್ 2023ಕ್ಕೂ ಮುನ್ನ ಈ ಬಾರಿ ಮಹಿಳಾ ಐಪಿಎಲ್ ನಡೆಯಲಿದೆ. ಮೊದಲ ವನಿತೆಯರ ಐಪಿಎಲ್​ಗೆ ಜನರು ಕಾತರದಿಂದ ಕಾಯುತ್ತಿದ್ದಾರೆ. ಪಾಕಿಸ್ತಾನ ಮಹಿಳಾ ಟಿ20 ಲೀಗ್‌ನ ಮೊದಲ ಸೀಸನ್ ಮಾರ್ಚ್‌ನಲ್ಲಿ ನಡೆಯಬೇಕಿತ್ತು. ಆದರೆ, ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮಾರ್ಚ್‌ನಲ್ಲಿ ಬದಲಾಗಿ ಸೆಪ್ಟೆಂಬರ್‌ನಲ್ಲಿ ನಡೆಸುವ ಸಾಧ್ಯತೆಯನ್ನು ವ್ಯಕ್ತಪಡಿಸಿದೆ. ಭಾರತದಲ್ಲಿ ಮಾರ್ಚ್ ತಿಂಗಳಿನಲ್ಲಿ ಮಹಿಳಾ ಐಪಿಎಲ್ ನಡೆಯಲಿರುವುದರಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಹೊಸ ಆಡಳಿತದ ಹೊಸ ನಿರ್ಧಾರ: ರಮೀಜ್ ರಾಜಾ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದಾಗ ಹೊಸ ಮ್ಯಾನೇಜ್‌ಮೆಂಟ್‌ನ ಹೊಸ ನಿರ್ಧಾರವಾಗಿ ಮಹಿಳಾ ಟಿ 20 ಲೀಗ್ ಪ್ರಾರಂಭಿಸಲಾಯಿತು. ಆದರೆ, ಈ ಹಿಂದೆ ಪಾಕಿಸ್ತಾನದಲ್ಲಿ ದಂಗೆ ನಡೆದಿತ್ತು. ರಮೀಜ್ ಬದಲಿಗೆ ನಜಮ್ ಸೇಥಿ ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತರು. ಇದೀಗ ಪಾಕಿಸ್ತಾನದ ಹೊಸ ಮ್ಯಾನೇಜ್‌ಮೆಂಟ್ ಸೆಪ್ಟೆಂಬರ್‌ನಲ್ಲಿ ಮಹಿಳಾ ಟಿ20 ಲೀಗ್ ಆಯೋಜಿಸಲು ನಿರ್ಧರಿಸಿದೆ. ಈ ಮೊದಲು ಲೀಗ್‌ನಲ್ಲಿ 4 ತಂಡಗಳು ಆಡಲಿದೆ ಎನ್ನಲಾಗಿತ್ತು, ಈಗ ಮೊದಲ ಸೀಸನ್ 5 ತಂಡಗಳೊಂದಿಗೆ ಆಯೋಜಿಸಲಾಗುವುದು ಎಂದು ವರದಿಯಾಗಿದೆ.

ಶೀಘ್ರವೇ ಐಪಿಎಲ್​ ಆಟಗಾರ್ತಿಯರ ಹರಾಜು: ಶೀಘ್ರದಲ್ಲೇ ಮಹಿಳಾ ಐಪಿಎಲ್ 2023 ಸೀಸನ್‌ಗಾಗಿ ಆಟಗಾರ್ತಿಯರ ಹರಾಜು ಪ್ರಕ್ರಿಯೆ ನಡೆಯಲಿದೆ. ಮಹಿಳಾ ಐಪಿಎಲ್ ಋತುವಿನ ವೇಳಾಪಟ್ಟಿ ಕೂಡ ಇನ್ನೂ ಬಿಡುಗಡೆಯಾಗಿಲ್ಲ. ಹಾಗೇ ಆಟಗಾರ್ತಿಯರ ಪಟ್ಟಿಯನ್ನು ತಿಳಿಸಿಲ್ಲ. ಮಹಿಳಾ ಲೀಗ್ ಈ ವರ್ಷದ ಮಾರ್ಚ್ 3 ರಿಂದ 26 ರವರೆಗೆ ನಡೆಯುವ ಸಾಧ್ಯತೆಯಿದೆ. ಈ ಋತುವಿನಲ್ಲಿ ಒಟ್ಟು 22 ಪಂದ್ಯಗಳು ನಡೆಸಲು ಯೋಜಿಸಲಾಗಿದೆ.

ಇದೇ ಜನವರಿ 25 ರಂದು ಮಹಿಳಾ ಇಂಡಿಯನ್​ ಪ್ರೀಮಿಯರ್​ ಲೀಗ್​ನ 5 ಫ್ರಾಂಚೈಸಿ ಅನಾವರಣ ಆಗಲಿದೆ. ಮಹಿಳಾ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ಒಟ್ಟು 5 ಫ್ರಾಂಚೈಸಿಗಳು ತಂಡ ಖರೀದಿಗೆ ಮುಂದೆ ಬಂದಿವೆ.

ಮಹಿಳಾ ಟಿ20 ಚಾಲೆಂಜ್: ಈ ಹಿಂದೆ ಭಾರತದಲ್ಲಿ ಮಹಿಳಾ ಟಿ-20 ಚಾಲೆಂಜ್ ಪಂದ್ಯಾವಳಿಯನ್ನು ಆಡಿಸಲಾಗಿತ್ತು. ಇದರಲ್ಲಿ ಒಟ್ಟು 3 ತಂಡಗಳು ಭಾಗವಹಿಸಿದ್ದವು. ಕೇವಲ 5 ಪಂದ್ಯಗಳಿಗೆ ಸೀಮಿತವಾಗಿದ್ದ ಟೂರ್ನಿ ಇದಾಗಿತ್ತು. ಮಹಿಳಾ ಐಪಿಎಲ್ ಕುರಿತು ಬಿಸಿಸಿಐ ನೀಡಿದ ಮಾಹಿತಿ ಪ್ರಕಾರ, ಡಬ್ಲ್ಯುಐಪಿಎಲ್- 2023 ದೇಶೀಯ ಮತ್ತು ಅಂತಾರಾಷ್ಟ್ರೀಯ ಆಟಗಾರ್ತಿಯರು ಭಾಗವಹಿಸಲಿದ್ದಾರೆ.

ಪ್ರತೀ ತಂಡಕ್ಕೂ ಎರಡು ಪಂದ್ಯಗಳಿದ್ದು, ಪುರುಷರ ಐಪಿಎಲ್​ ರೀತಿ ಒಂದು ಫ್ರಾಂಚೈಸಿಗಳ ಎದುರಾಳಿ ತಂಡದ ಮೈದಾನದಲ್ಲಿ ಮತ್ತೊಂದು ತವರು ನೆಲದಲ್ಲಿ ಆಯೋಜನೆ ಮಾಡುವುದು ಕಷ್ಟವಾಗಲಿದೆ. ಆದ್ದರಿಂದ ಮೊದಲ 10 ಪಂದ್ಯಗಳನ್ನು ಒಂದು ಮೈದಾನದಲ್ಲಿ ಹಾಗೂ ಉಳಿದ 10 ಪಂದ್ಯಗಳನ್ನು ಇನ್ನೊಂದು ಮೈದಾನದಲ್ಲಿ ನಡೆಸಲು ಯೋಜಿಸಲಾಗಿದೆ.

ಇದನ್ನೂ ಓದಿ: ವಯಾಕಾಮ್​ 18 ಸಂಸ್ಥೆಗೆ ಮಹಿಳಾ ಐಪಿಎಲ್​ ಪ್ರಸಾರದ ಹಕ್ಕು.. ₹951 ಕೋಟಿ ರೂಪಾಯಿಗೆ ಬಿಡ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.