ಕರಾಚಿ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಆತಿಥೇಯ ಪಾಕ್ ತಂಡ 63ರನ್ಗಳ ಜಯ ದಾಖಲಿಸಿದ್ದು, ಈ ಮೂಲಕ ಚುಟುಕು ಕ್ರಿಕೆಟ್ನಲ್ಲಿ ಹೊಸದೊಂದು ದಾಖಲೆ ನಿರ್ಮಾಣ ಮಾಡಿದೆ.
ಕರಾಚಿಯ ರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್ಗಳಲ್ಲಿ ವಿಕೆಟ್ ಕೀಪರ್ ರಿಜ್ವಾನ್ ಹಾಗೂ ಹೈದರ್ ಅಲಿ ಭರ್ಜರಿ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 200ರನ್ಗಳಿಸಿತು. ಇದನ್ನು ಬೆನ್ನತ್ತಿದ್ದ ವೆಸ್ಟ್ ಇಂಡೀಸ್ ತಂಡ 19 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 137ರನ್ ಮಾತ್ರ ಗಳಿಸುವಲ್ಲಿ ಶಕ್ತವಾಯಿತು. ಈ ಮೂಲಕ ಪಾಕ್ ಟೀಂ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
-
Another feat for an OUTSTANDING team:
— Pakistan Cricket (@TheRealPCB) December 13, 2021 " class="align-text-top noRightClick twitterSection" data="
Pakistan have beaten their own record (17 wins) set in 2018! 👏👏👏#HumTouKhelainGey pic.twitter.com/29aJpUivxl
">Another feat for an OUTSTANDING team:
— Pakistan Cricket (@TheRealPCB) December 13, 2021
Pakistan have beaten their own record (17 wins) set in 2018! 👏👏👏#HumTouKhelainGey pic.twitter.com/29aJpUivxlAnother feat for an OUTSTANDING team:
— Pakistan Cricket (@TheRealPCB) December 13, 2021
Pakistan have beaten their own record (17 wins) set in 2018! 👏👏👏#HumTouKhelainGey pic.twitter.com/29aJpUivxl
ಹೊಸ ಇತಿಹಾಸ ಬರೆದ ಪಾಕ್
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯ ಗೆಲ್ಲುತ್ತಿದ್ದಂತೆ ಪಾಕಿಸ್ತಾನ ಚುಟುಕು ಕ್ರಿಕೆಟ್ನಲ್ಲಿ ಹೊಸದೊಂದು ದಾಖಲೆ ನಿರ್ಮಾಣ ಮಾಡಿದೆ. ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು 18 ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಸಾಧನೆ ಪಾಕಿಸ್ತಾನ ಮಾಡಿದ್ದು, ಈ ಹಿಂದೆ ಯಾವುದೇ ತಂಡಗಳು ಒಂದೇ ವರ್ಷದಲ್ಲಿ ಇಷ್ಟೊಂದು ಪಂದ್ಯಗಳಲ್ಲಿ ಗೆಲುವು ಸಾಧಿಸಿಲ್ಲ. ವಿಶೇಷವೆಂದರೆ 2017ರಲ್ಲಿ ಪಾಕ್ ತಂಡ ಒಂದೇ ವರ್ಷದಲ್ಲಿ 17 ಪಂದ್ಯಗಳಲ್ಲಿ ಜಯ ಸಾಧಿಸಿತ್ತು.
ವೆಸ್ಟ್ ಇಂಡೀಸ್ ವಿರುದ್ಧ ಇಂದು(ಡಿ.14) ಹಾಗೂ ನಾಡಿದ್ದು(ಡಿ.16) ಮತ್ತೆರೆಡು ಟಿ20 ಪಂದ್ಯಗಳಲ್ಲಿ ಪಾಕ್ ಭಾಗಿಯಾಗಲಿದ್ದು, ಇಲ್ಲೂ ಗೆಲ್ಲುವು ಸಾಧಿಸುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ.