ರಾವಲ್ಪಿಂಡಿ (ಪಾಕಿಸ್ತಾನ) : ಇಲ್ಲಿನ ರಾವಲ್ಪಿಂಡಿ ಮೈದಾನದಲ್ಲಿ ಪಾಕ್ ವಿರುದ್ಧ ದಶಕದ ಬಳಿಕ ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯವಾಡುತ್ತಿದೆ. ಹೊಸ ಇತಿಹಾಸ ಬರೆಯಲು ಸಿದ್ಧವಾಗಿದೆ. ಬಾಬರ್ ಅಜಾಮ್ ನೇತೃತ್ವದ ತಂಡ ಟಾಮ್ ಲಾಥಮ್ ತಂಡವನ್ನು ಇಂದು ಎದುರಿಸುತ್ತಿದೆ. 2003ರ ಬಳಿಕ ಇದೇ ಮೊದಲ ಬಾರಿಗೆ ಪಾಕ್ ನೆಲದಲ್ಲಿ ನ್ಯೂಜಿಲೆಂಡ್ ಏಕದಿನ ಪಂದ್ಯವಾಡುತ್ತಿದೆ.
ಇದಕ್ಕೂ ಮೊದಲು ಪಾಕಿಸ್ತಾನದಲ್ಲಿ ನ್ಯೂಜಿಲೆಂಡ್ ತಂಡ 19 ಬಾರಿ ಪಾಕ್ ತಂಡವನ್ನ ಎದುರಿಸಿ ಕೇವಲ 3 ಬಾರಿ ಜಯದಾಖಲಿಸಿದೆ. ಆದರೆ, 2019ರಲ್ಲಿ ನಡೆದ ವಿಶ್ವಕಪ್ನಲ್ಲಿ ಉಭಯ ತಂಡಗಳು ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಆದರೆ, ಇಲ್ಲಿಯೂ ಪಾಕ್ ತಂಡ ಆರು ವಿಕೆಟ್ಗಳಿಂದ ಜಯ ದಾಖಲಿಸಿತ್ತು.
ಕೇನ್ ವಿಲಿಯಮ್ಸನ್, ಟ್ರೆಂಟ್ ಬೌಲ್ಟ್, ಕೈಲ್ ಜೆಮೀಸನ್ ತಂಡದಿಂದ ಹೊರಗುಳಿದಿದಾರೆ. ಆದರೆ, ಟಾಮ್ ಲಾಥಮ್ ಸೇರಿ ಮಧ್ಯಮ ಕ್ರಮಾಂಕದ ಆಟಗಾರರು ಫಾರ್ಮ್ನಲ್ಲಿದಾರೆ. ಪಾಕ್ಗೆ ಕಠಿಣ ಸವಾಲು ನೀಡಲು ಸಿದ್ಧವಾಗಿದ್ದಾರೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ಇಂದು 3 ಗಂಟೆಗೆ ಆರಂಭವಾಗಲಿದೆ.
ಇದನ್ನೂ ಓದಿ: ಏಕದಿನ ವಿಶ್ವಕಪ್ ವೇಳೆ ಬದಲಾಗುತ್ತಾ ವಿರಾಟ್ ನಾಯಕತ್ವ..? ಬಿಸಿಸಿಐ ಮುಂದಿರುವ ಸವಾಲುಗಳಿವು!