ಕರಾಚಿ: ಟಿ20 ವಿಶ್ವಕಪ್ಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ. ಗಾಯಗೊಂಡಿರುವ ಫಖರ್ ಜಮಾನ್ ಕೈಬಿಡಲಾಗಿದ್ದು, ಇಬ್ಬರು ಹೊಸ ಪ್ರತಿಭೆಗಳಿಗೆ ಮಣೆ ಹಾಕಲಾಗಿದೆ. ಗಾಯಗೊಂಡು ಏಷ್ಯ ಕಪ್ನಿಂದ ಹೊರಗುಳಿದಿದ್ದ ವೇಗಿ ಶಾಹೀನ್ ಆಫ್ರಿದಿ ತಂಡ ಸೇರಿಕೊಂಡಿದ್ದಾರೆ.
ಹೊಸ ಪ್ರತಿಭೆ ಶಾನ್ ಮಸೂದ್ ಮತ್ತು ಉಸ್ಮಾನ್ ಖಾದಿರ್ಗೆ ಅವಕಾಶ ನೀಡಲಾಗಿದೆ. ಇಂಗ್ಲೆಂಡ್‌ನಲ್ಲಿ ನಡೆದ ವಿಟಾಲಿಟಿ ಬ್ಲಾಸ್ಟ್‌ನಲ್ಲಿ ಡರ್ಬಿಶೈರ್‌ನ ನಾಯಕತ್ವ ವಹಿಸಿದ್ದ ಮಸೂದ್, ಕೆಂಪು ಮತ್ತು ಬಿಳಿ ಬಾಲ್ ಮಾದರಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದು ಆತನಿಗೆ ತಂಡದ ಬಾಗಿಲು ತೆರೆಸಿದೆ.
-
Introducing our squad 🙌
— Pakistan Cricket (@TheRealPCB) September 15, 2022 " class="align-text-top noRightClick twitterSection" data="
🗒️ https://t.co/JnHpDOvXsS#T20WorldCup | #BackTheBoysInGreen pic.twitter.com/BbmTdtBfhk
">Introducing our squad 🙌
— Pakistan Cricket (@TheRealPCB) September 15, 2022
🗒️ https://t.co/JnHpDOvXsS#T20WorldCup | #BackTheBoysInGreen pic.twitter.com/BbmTdtBfhkIntroducing our squad 🙌
— Pakistan Cricket (@TheRealPCB) September 15, 2022
🗒️ https://t.co/JnHpDOvXsS#T20WorldCup | #BackTheBoysInGreen pic.twitter.com/BbmTdtBfhk
ಇದಲ್ಲದೇ, ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆಯುವ 7 ಪಂದ್ಯಗಳ ಟಿ20 ಸರಣಿಗೂ ತಂಡವನ್ನು ಪ್ರಕಟಿಸಲಾಗಿದೆ. ಗಾಯಗೊಂಡ ಫಖರ್ ಜಮಾನ್ ವಿಶ್ವಕಪ್ ಮತ್ತು ಇಂಗ್ಲೆಂಡ್ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಮೀಸಲು ಆಟಗಾರನಾಗಿ ಸೇರಿಸಿಕೊಳ್ಳಲಾಗಿದೆ.
ಮುಖ್ಯ ಆಯ್ಕೆಗಾರ ಮುಹಮ್ಮದ್ ವಾಸಿಂ ನೇತೃತ್ವದಲ್ಲಿ ಗುರುವಾರ ಲಾಹೋರ್‌ನ ಪಿಸಿಬಿ ಪ್ರಧಾನ ಕಚೇರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿ ಮತ್ತು ವಿಶ್ವಕಪ್ಗೆ ತಂಡ ಪ್ರಕಟಿಸಲಾಯಿತು.
ಪಾಕಿಸ್ತಾನದ ವಿಶ್ವಕಪ್ ತಂಡ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ನಸೀಮ್ ಜೂನಿಯರ್ ಶಾ, ಶಾಹೀನ್ ಶಾ ಆಫ್ರಿದಿ, ಶಾನ್ ಮಸೂದ್ ಮತ್ತು ಉಸ್ಮಾನ್ ಖಾದಿರ್.
ಮೀಸಲು ಆಟಗಾರರು: ಫಖರ್ ಜಮಾನ್, ಮೊಹಮ್ಮದ್ ಹ್ಯಾರಿಸ್ ಮತ್ತು ಶಹನವಾಜ್ ದಹಾನಿ.
ಇಂಗ್ಲೆಂಡ್ ವಿರುದ್ಧದ ಸರಣಿಗೆ ತಂಡ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಮೀರ್ ಜಮಾಲ್, ಅಬ್ರಾರ್ ಅಹ್ಮದ್, ಆಸಿಫ್ ಅಲಿ, ಹೈದರ್ ಅಲಿ, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್ ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಶಹನವಾಜ್ ದಹಾನಿ, ಶಾನ್ ಮಸೂದ್ ಮತ್ತು ಉಸ್ಮಾನ್ ಖಾದಿರ್.
ಓದಿ: ಗಲ್ಲಿ ಕ್ರಿಕೆಟ್ ಭಾಷೆಗೆ ನಕ್ಕ ವಿರಾಟ್ ಕೊಹ್ಲಿ..ಬಾಲ್ಯದ ನೆನಪುಗಳ ಮೆಲುಕು