ದುಬೈ: ಏಷ್ಯಾ ಕಪ್ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯ ಆರಂಭಗೊಳ್ಳಲು ಕೇವಲ ಎರಡು ದಿನ ಮಾತ್ರ ಬಾಕಿ. ಇದರ ಬೆನ್ನಲ್ಲೇ ಪಾಕ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ವೇಗದ ಬೌಲರ್ ಮೊಹಮ್ಮದ್ ವಾಸೀಂ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪಾಕ್ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿದೆ.
ಭಾರತ ವಿರುದ್ಧದ ಪಂದ್ಯಕ್ಕೋಸ್ಕರ ನೆಟ್ಸ್ನಲ್ಲಿ ಅಭ್ಯಾಸ ಮಾಡ್ತಿದ್ದ ವೇಳೆ ವೇಗದ ಬೌಲರ್ ಮೊಹಮ್ಮದ್ ವಾಸೀಂ ಬೆನ್ನು ನೋವಿನ ತೊಂದರೆಗೊಳಗಾಗಿದ್ದಾರೆ. ತಕ್ಷಣವೇ ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ. ನೋವಿನ ಗಂಭೀರತೆ ಹೆಚ್ಚಾಗಿರುವ ಕಾರಣ ವಿಶ್ರಾಂತಿ ಪಡೆದುಕೊಳ್ಳಲು ಸಲಹೆ ನೀಡಲಾಗಿದೆ. ಹೀಗಾಗಿ, ಮಹತ್ವದ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಹಸನ್ ಅಲಿಗೆ ಬುಲಾವ್ ನೀಡಲಾಗಿದ್ದು, ಮುಂದಿನ ಕೆಲ ದಿನಗಳಲ್ಲಿ ತಂಡ ಸೇರಿಕೊಳ್ಳಲಿದ್ದಾರೆ. ಮೊಹಮ್ಮದ್ ಮೇಲೆ ಪಾಕ್ ವೈದ್ಯಕೀಯ ತಂಡ ನಿಗಾ ಇಟ್ಟಿದೆ.
-
Wasim ruled out of Asia Cup, Hasan named as replacement
— PCB Media (@TheRealPCBMedia) August 26, 2022 " class="align-text-top noRightClick twitterSection" data="
Details here ⤵️https://t.co/wblUoVVGQw
">Wasim ruled out of Asia Cup, Hasan named as replacement
— PCB Media (@TheRealPCBMedia) August 26, 2022
Details here ⤵️https://t.co/wblUoVVGQwWasim ruled out of Asia Cup, Hasan named as replacement
— PCB Media (@TheRealPCBMedia) August 26, 2022
Details here ⤵️https://t.co/wblUoVVGQw
ಇದನ್ನೂ ಓದಿ: ಏಷ್ಯಾ ಕಪ್: 1992ರಿಂದ ಇಲ್ಲಿವರೆಗೂ ಪಾಕ್ ವಿರುದ್ಧ ಭಾರತ ಸೋತಿದ್ದು ಒಮ್ಮೆ ಮಾತ್ರ ಎಂದ ಗಂಗೂಲಿ
ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಮೊಹಮ್ಮದ್ ಇಲ್ಲಿಯವರೆಗೆ 11 ಟಿ20 ಪಂದ್ಯಗಳನ್ನಾಡಿದ್ದು, 17 ವಿಕೆಟ್ ಪಡೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಪಾಕ್ನ ಪ್ರಮುಖ ವೇಗಿ ಶಾಹೀನ್ ಶಾ ಆಫ್ರಿದಿ ಕೂಡ ಗಾಯದ ಕಾರಣ ಟೂರ್ನಿಯಿಂದ ಹೊರಗುಳಿದಿದ್ದಾರೆ. ಇದೀಗ ಮೊಹಮ್ಮದ್ ಕೂಡ ಹೊರಗುಳಿದಿದ್ದು, ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಏಷ್ಯಾ ಕಪ್ನಲ್ಲಿ ಆಗಸ್ಟ್ 28ರಂದು ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆಲುವ ಮೂಲಕ ಭಾರತ ಶುಭಾರಂಭ ಮಾಡುವ ತವಕದಲ್ಲಿದೆ.