ಪಾಕಿಸ್ತಾನ ಮಾಧ್ಯಮಗಳಲ್ಲಿ ಭಾರತ ಮತ್ತು ಪಾಕ್ ನಡುವೆ ಟೆಸ್ಟ್ ಸರಣಿ ನಡೆಯುತ್ತದೆ ಎಂದು ಸುದ್ದಿ ಹರಿದಾಡುತ್ತಿದೆ. ಪಾಕ್ ಕ್ರಿಕೆಟ್ ಬೋರ್ಡ್ನ ಅಧ್ಯಕ್ಷ ನಜಮ್ ಸೇಥಿ ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಭಾರತ ಮತ್ತು ಪಾಕಿಸ್ತಾನ 2012 ರಲ್ಲಿ ಕೊನೆಯ ದ್ವಿಪಕ್ಷೀಯ ಸರಣಿ ಆಡಿದ್ದು, ಮತ್ತೆ ಆಡಲಿದೆ ಎನ್ನಲಾಗಿದೆ. ಆದರೆ, ಇದು ತಟಸ್ಥ ಸ್ಥಳದಲ್ಲಿ ಆಯೋಜನೆಗೊಳ್ಳಲಿದೆ ಎನ್ನಲಾಗಿತ್ತು.
-
No plans for such kind of series to happen in the future or upcoming days. We aren't ready for any kind of bilateral series with Pakistan: BCCI source to ANI
— ANI (@ANI) May 17, 2023 " class="align-text-top noRightClick twitterSection" data="
Today Pakistan media reported that PCB chairman Najam Sethi gave a green signal to a potential Pakistan-India Test series…
">No plans for such kind of series to happen in the future or upcoming days. We aren't ready for any kind of bilateral series with Pakistan: BCCI source to ANI
— ANI (@ANI) May 17, 2023
Today Pakistan media reported that PCB chairman Najam Sethi gave a green signal to a potential Pakistan-India Test series…No plans for such kind of series to happen in the future or upcoming days. We aren't ready for any kind of bilateral series with Pakistan: BCCI source to ANI
— ANI (@ANI) May 17, 2023
Today Pakistan media reported that PCB chairman Najam Sethi gave a green signal to a potential Pakistan-India Test series…
2007 ರಲ್ಲಿ ಪಾಕಿಸ್ತಾನ ಮತ್ತು ಭಾರತದ ನಡುವೆ ಮೂರು ಪಂದ್ಯದ ಟೆಸ್ಟ್ ಸರಣಿ ನಡೆದಿತ್ತು. ಇದು ಉಭಯ ತಂಡಗಳ ಕೊನೆಯ ಟೆಸ್ಟ್ ದ್ವಿಪಕ್ಷೀಯ ಸರಣಿಯಾಗಿದೆ. ಇದಾದ ನಂತರ ಏಕದಿನ ಮತ್ತು ಟಿ -20ಯನ್ನು ಆಡಲಾಗಿತ್ತು. ಆದರೆ, ಟೆಸ್ಟ್ ಪಂದ್ಯಗಳನ್ನು ಆಡಿರಲಿಲ್ಲ. 2012 ರಲ್ಲಿ ಕೊನೆಯ ಟಿ - 20 ಸರಣಿಯನ್ನು ಎರಡೂ ತಂಡಗಳು ಆಡಿದ್ದು ಕೊನೆಯದಾಗಿದೆ. 11 ವರ್ಷಗಳಲ್ಲಿ ಭಾರತ ಪಾಕಿಸ್ತಾನ ಕೇವಲ ಐಸಿಸಿ ನಡೆಸುವ ಟ್ರೋಫಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.
ಇದು ಭಾರತದಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿಯಾಗಿದ್ದು, ಭಾರತವು 1-0 ಅಂತರದಲ್ಲಿ ಸರಣಿ ಗೆದ್ದುಕೊಂಡಿತು. ದೆಹಲಿಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದರೆ. ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಕ್ರಮವಾಗಿ 2 ಮತ್ತು 3 ನೇ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತು. ಎರಡು ದೇಶ ಟೆಸ್ಟ್ ಪಂದ್ಯ ಆಡಿ 15 ವರ್ಷಗಳಾಗಿವೆ.
ಈಗ ಮತ್ತೆ ಈ ಪ್ರಸ್ತಾಪ ಪಾಕಿಸ್ತಾನದಿಂದ ಬಂದಿದೆ. ಆದರೆ, ಇದನ್ನು ಬಿಸಿಸಿಐ ಅಲ್ಲಗಳೆದಿದೆ. ಇದರ ಹಿಂದೆ ಏಷ್ಯಾ ಕಪ್ ಕೈ ತಪ್ಪಿದ್ದರ ಬೇಸರ ಪಾಕ್ಗೆ ಇರಬಹುದು. ಇದರ ಕಾರಣ ಸುಖಾಸುಮ್ಮನೆ ಗಾಳಿ ಸುದ್ದಿಗಳನ್ನು ಮಾಡುತ್ತಿವೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದೆ ಈ ರೀತಿಯ ಪ್ರಸ್ತಾವನೆಯೇ ಇಲ್ಲ ಎಂದು ಇದನ್ನು ತಳ್ಳಿಹಾಕಿದೆ. "ಪಾಕಿಸ್ತಾನದೊಂದಿಗೆ ಯಾವುದೇ ರೀತಿಯ ದ್ವಿಪಕ್ಷೀಯ ಸರಣಿಗೆ ನಾವು ಸಿದ್ಧರಿಲ್ಲ. ಮುಂಬರುವ ದಿನಗಳಲ್ಲಿ ಇಂತಹ ಸರಣಿಗಳು ನಡೆಯಲು ಯಾವುದೇ ಯೋಜನೆಗಳಿಲ್ಲ" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಭಾರತ- ಪಾಕಿಸ್ತಾನ ಕೊನೆಯ ಮುಖಾಮುಖಿ: 2022 ಟಿ20 ವಿಶ್ವಕಪ್ನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಇದು ಐಸಿಸಿ ನಡೆಸಿದ ಪಂದ್ಯದಲ್ಲಿ ಆಡಿದ ಅಂತಿಮ ಪಂದ್ಯವಾಗಿದೆ. 2023 ರಲ್ಲಿ ನಡೆಯುವ ಏಷ್ಯಾಕಪ್ನಲ್ಲಿ ಭಾರತ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುವುದಿಲ್ಲ ಎಂದಿದೆ. ಇನ್ನು ಉಭಯ ತಂಡಗಳು ತಟಸ್ಥ ಸ್ಥಳದಲ್ಲಿ ಈ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಏಷ್ಯಾ ಕಪ್ ಆಯೋಜನೆ ಬಗ್ಗೆ ಇನ್ನೂ ಗೊಂದಲಗಳು ಹಾಗೇ ಇವೆ. ಕಳೆದ ಬಾರಿ ಶ್ರೀಲಂಕಾ ನಡೆಸಬೇಕಿದ್ದು, ಆರ್ಥಿಕ ಕೊರತೆಯ ಕಾರಣ ಅದು ದುಬೈಗೆ ಸ್ಥಳಾಂತರಗೊಂಡಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಲಂಕಾ ಅವಕಾಶ ಕೇಳಿದೆ ಎನ್ನಲಾಗಿದೆ. ಆದರೆ, ಎಸಿಸಿ ಈ ಬಗ್ಗೆ ಇನ್ನೂ ಸ್ಟಷ್ಟ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: ಐಸಿಯುವಿನಿಂದ ಬಿಡುಗಡೆ ಆದ ತಂದೆಗಾಗಿ ಆಡಿದೆ: ಮೊಹ್ಸಿನ್ ಖಾನ್