ಆ್ಯಂಟಿಗುವಾ : ಕೆರಿಬಿಯನ್ ನಾಡಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ವಿವಿಧ ತಂಡದ ಯಂಗ್ ಪ್ಲೇಯರ್ಸ್ ಮಿಂಚು ಹರಿಸುತ್ತಿದ್ದಾರೆ. ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಕ್ಯಾಪ್ಟನ್ ಹೊಸ ದಾಖಲೆ ನಿರ್ಮಿಸಿದ್ದಾರೆ.
ಐಸಿಸಿ ವಿಶ್ವಕಪ್ನಲ್ಲಿ 5ನೇ ಸ್ಥಾನಕ್ಕಾಗಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಈ ಐತಿಹಾಸಿಕ ಸಾಧನೆ ನಿರ್ಮಾಣಗೊಂಡಿದೆ. ಪಾಕ್ ತಂಡದ ಕ್ಯಾಪ್ಟನ್ ಖಾಸೀಂ ಅಕ್ರಮ್, ಶ್ರೀಲಂಕಾ ವಿರುದ್ಧ ಅಜೇಯ 135ರನ್ಗಳಿಕೆ ಮಾಡಿರುವ ಜೊತೆಗೆ ಬೌಲಿಂಗ್ನಲ್ಲಿ ಐದು ವಿಕೆಟ್ ಪಡೆದು ಗಮನ ಸೆಳೆದರು. ಈ ಅದ್ಭುತ ಪ್ರದರ್ಶನದಿಂದ ಲಂಕಾ ವಿರುದ್ಧ ದಾಖಲೆಯ 238ರನ್ಗಳ ಅಂತರದಿಂದ ಗೆಲುವು ದಾಖಲಿಸಿದೆ.
-
The first player in #U19CWC history to score a century and take a five-wicket haul in the same match 👏
— ICC (@ICC) February 4, 2022 " class="align-text-top noRightClick twitterSection" data="
Re-live Qasim Akram's record-breaking day: https://t.co/PSjdwSspam 📺 pic.twitter.com/DDlBilvo6E
">The first player in #U19CWC history to score a century and take a five-wicket haul in the same match 👏
— ICC (@ICC) February 4, 2022
Re-live Qasim Akram's record-breaking day: https://t.co/PSjdwSspam 📺 pic.twitter.com/DDlBilvo6EThe first player in #U19CWC history to score a century and take a five-wicket haul in the same match 👏
— ICC (@ICC) February 4, 2022
Re-live Qasim Akram's record-breaking day: https://t.co/PSjdwSspam 📺 pic.twitter.com/DDlBilvo6E
ಖಾಸೀಂ ಅಕ್ರಮ್ ಐತಿಹಾಸಿಕ ಸಾಧನೆ ವಿಡಿಯೋ ತುಣುಕವೊಂದನ್ನ ಐಸಿಸಿ ತನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ. ಒಂದೇ ಪಂದ್ಯದಲ್ಲಿ ಶತಕದ ಜೊತೆಗೆ ಐದು ವಿಕೆಟ್ ಸಾಧನೆ ಮಾಡಿರುವುದು ಅಂಡರ್-19 ವಿಶ್ವಕಪ್ ಇತಿಹಾಸದಲ್ಲೇ ಮೊದಲ ಸಲ ಎಂದು ತಿಳಿಸಿದ್ದಾರೆ.
ಶ್ರೀಲಂಕಾ ವಿರುದ್ಧ ಮೊದಲು ಬ್ಯಾಟ್ ಮಾಡಿದ ಪಾಕ್ 50 ಓವರ್ಗಳಲ್ಲಿ 3 ವಿಕೆಟ್ನಷ್ಟಕ್ಕೆ 365 ರನ್ಗಳಿಕೆ ಮಾಡಿದೆ. ಈ ವೇಳೆ ಪಾಕ್‌ನ ಕ್ಯಾಪ್ಟನ್ ಖಾಸೀಂ ಅಕ್ರಮ್ ಆಕರ್ಷಕ 135 ರನ್ಗಳಿಕೆ ಮಾಡಿದರು. ಬೌಲಿಂಗ್ನಲ್ಲೂ ಮಿಂಚು ಹರಿಸಿರುವ ಅವರು, ಲಂಕಾ ತಂಡದ ಪ್ರಮುಖ ಐದು ವಿಕೆಟ್ ಕಬಳಿಸಿದರು.