ಢಾಕಾ: ಫಖರ್ ಝಮಾನ್ ಅರ್ಧಶತಕ ಮತ್ತು ಬೌಲರ್ಗಳ ಸಂಘಟಿತ ದಾಳಿಯ ನೆರವಿನಿಂದ ಅತಿಥೇಯ ಬಾಂಗ್ಲಾದೇಶದ ವಿರುದ್ಧ 8 ವಿಕೆಟ್ಗಳ ಜಯ(Pak beats Bangladesh) ಸಾಧಿಸಿ, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಟಿ20 ಸರಣಿಯನ್ನು(Pakistan won the t20 series) ವಶಪಡಿಸಿಕೊಂಡಿದೆ.
ಡಾಕಾದ ಶೇರ್ ಎ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ(Sher-e Bangla National Stadium) ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅತಿಥೇಯ ಬಾಂಗ್ಲಾದೇಶ ತಂಡ ನಿರಾಶದಾಯಕ ಬ್ಯಾಟಿಂಗ್ ಪ್ರದರ್ಶನ ತೋರಿ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 108 ರನ್ಗಳಿಸಿತು.
ನಜ್ಮುಲ್ ಹೊಸೇನ್ ಶಂಟೋ 34 ಎಸೆತಗಳಲ್ಲಿ 5 ಬೌಂಡರಿ ಸಹಿತ 40 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅಫೀಫ್ ಹೊಸೇನ್ 20 ರನ್ಗಳಿಸಿದರು. ನಾಯಕ ಮಹಮುಲ್ಲಾ(12) ಸೇರಿದಂತೆ ಬೇರೆ ಯಾವುದೇ ಬ್ಯಾಟರ್ಗಳು 20 ರ ಗಡಿದಾಟುವಲ್ಲಿ ವಿಫಲರಾದರು.
ಪಾಕಿಸ್ತಾನದ ಪರ ಶಹೀನ್ ಶಾ ಅಫ್ರಿದಿ 15ಕ್ಕೆ2, ಮೊಹಮ್ಮದ್ ವಾಸೀಮ್ 9ಕ್ಕೆ1, ಶದಬ್ ಖಾನ್ 22ಕ್ಕೆ2, ಹ್ಯಾರೀಸ್ ರವೂಫ್ 13ಕ್ಕೆ1 ವಿಕೆಟ್ ಪಡೆದರು.
ಇನ್ನು 109ರನ್ಗಳ ಸಾಧಾರಣ ಗುರಿಯನ್ನು ಪಾಕ್ ತಂಡ 18.1 ಓವರ್ಗಳಲ್ಲಿ ಇನ್ನು 11 ಎಸೆತಗಳಿರುವಂತೆ ಗುರಿ ತಲುಪಿ ಸರಣಿಯನ್ನು(seal the series) ವಶಪಡಿಸಿಕೊಂಡಿತು. ಮೊಹಮ್ಮದ್ ರಿಜ್ವಾನ್ 45 ಎಸೆತಗಳಲ್ಲಿ 39 ಹಾಗೂ ಫಖರ್ ಝಮಾನ್ 51 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ ಅಜೇಯ 57 ರನ್ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಮೂರನೇ ಪಂದ್ಯ ಸೋಮವಾರ ಇದೇ ಸ್ಟೇಡಿಯಂನಲ್ಲಿ ನಡೆಯಲಿದೆ. ಶುಕ್ರವಾರ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ 4 ವಿಕೆಟ್ಗಳ ರೋಚಕ ಜಯ ಸಾಧಿಸಿತ್ತು.
ಇದನ್ನು ಓದಿ:ಮುಷ್ತಾಕ್ ಅಲಿ: ಕರ್ನಾಟಕಕ್ಕೆ ರೋಚಕ ಜಯ, 3ನೇ ಬಾರಿಗೆ ಫೈನಲ್ ಪ್ರವೇಶ