ETV Bharat / sports

ಲಂಕಾ ವಿರುದ್ಧದ ಗೆಲುವನ್ನು 'ಗಾಜಾದ ಸಹೋದರ ಸಹೋದರಿಯರಿಗೆ' ಅರ್ಪಿಸಿದ ಪಾಕ್‌ ಕ್ರಿಕೆಟಿಗ ಮೊಹಮ್ಮದ್​ ರಿಜ್ವಾನ್

ಲಂಕಾ ವಿರುದ್ಧ ಪಾಕಿಸ್ತಾನ ದಾಖಲೆಯ ಗೆಲುವು ಕಂಡಿದ್ದು, ಅದನ್ನು ಪಾಕ್​ ಬ್ಯಾಟರ್​ ಮೊಹಮ್ಮದ್​ ರಿಜ್ವಾನ್​ ಇಸ್ರೇಲ್​ ದಾಳಿಗೀಡಾದ ಗಾಜಾದ ಜನರಿಗೆ ಅರ್ಪಿಸಿದ್ದಾರೆ.

author img

By PTI

Published : Oct 11, 2023, 4:05 PM IST

ಪಾಕ್​ ಬ್ಯಾಟರ್​ ರಿಜ್ವಾನ್​
ಪಾಕ್​ ಬ್ಯಾಟರ್​ ರಿಜ್ವಾನ್​

ಹೈದರಾಬಾದ್: ಪಾಕಿಸ್ತಾನದ ವಿಕೆಟ್ ಕೀಪರ್, ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಏಕದಿನ ವಿಶ್ವಕಪ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ತಂಡ ದಾಖಲೆಯ ಗೆಲುವು ಸಾಧಿಸಿದ್ದನ್ನು ಇಸ್ರೇಲ್​ ದಾಳಿಗೊಳಗಾಗಿರುವ ಗಾಜಾದ ಜನರಿಗೆ ಅರ್ಪಿಸಿದರು.

  • This was for our brothers and sisters in Gaza. 🤲🏼

    Happy to contribute in the win. Credits to the whole team and especially Abdullah Shafique and Hassan Ali for making it easier.

    Extremely grateful to the people of Hyderabad for the amazing hospitality and support throughout.

    — Muhammad Rizwan (@iMRizwanPak) October 11, 2023 " class="align-text-top noRightClick twitterSection" data=" ">

ಹೈದರಾಬಾದ್‌ನ ರಾಜೀವ್​ ಗಾಂಧಿ ಕ್ರೀಡಾಂಗಣದಲ್ಲಿ ಮಂಗಳವಾರ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ರಿಜ್ವಾನ್ (131) ಅಜೇಯ ಶತಕ ಸಿಡಿಸಿದರೆ, ಯುವ ಕ್ರಿಕೆಟಿಗ ಅಬ್ದುಲ್ಲಾ ಶಫೀಕ್ (113) ತಮ್ಮ ಚೊಚ್ಚಲ ಏಕದಿನ ಶತಕ ದಾಖಲಿಸುವ ಮೂಲಕ ತಂಡಕ್ಕೆ ಭರ್ಜರಿ ಗೆಲುವು ತಂದು ಕೊಟ್ಟರು. ಲಂಕಾ ನೀಡಿದ್ದ 345 ರನ್​ಗಳನ್ನು ಚೇಸ್‌ ಮಾಡಿದ ತಂಡ ವಿಶ್ವಕಪ್​ ಇತಿಹಾಸದಲ್ಲಿಯೇ ದಾಖಲೆಯ ಗುರಿ ಮುಟ್ಟಿತು.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ರಿಜ್ವಾನ್​, 'ಈ ಗೆಲುವು ಗಾಜಾದಲ್ಲಿರುವ ನಮ್ಮ ಸಹೋದರ ಸಹೋದರಿಯರಿಗೆ ಅರ್ಪಣೆ. ಗೆಲುವಿನಲ್ಲಿ ಕೊಡುಗೆ ನೀಡಿದ್ದು ಸಂತೋಷ ತಂದಿದೆ. ಇಡೀ ತಂಡದ ಶ್ರಮದಿಂದ ಈ ಗೆಲುವು ಸಾಧ್ಯವಾಗಿದೆ. ವಿಶೇಷವಾಗಿ ಗೆಲುವು ಸುಲಭವಾಗಿಸಿದ ಅಬ್ದುಲ್ಲಾ ಶಫೀಕ್, ಹಸನ್ ಅಲಿ ಅವರಿಗೆ ಹೆಚ್ಚಿನ ಶ್ರೇಯ ಸಲ್ಲಬೇಕು. ಅದ್ಭುತ ಆತಿಥ್ಯ ಮತ್ತು ಬೆಂಬಲ ನೀಡಿದ ಹೈದರಾಬಾದ್‌ ಜನರಿಗೆ ತುಂಬಾ ಕೃತಜ್ಞರಾಗಿರುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ವಿಶ್ವಕಪ್​ನಲ್ಲಿ ಪಾಕ್​ ದಾಖಲೆ: ವಿಶ್ವಕಪ್​ನಲ್ಲಿ ದೊಡ್ಡ ಮೊತ್ತವನ್ನು ಚೇಸ್​ ಮಾಡಿದ ಗೆದ್ದ ದಾಖಲೆಯನ್ನು ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧ ಬರೆಯಿತು. ಲಂಕಾ ಆಟಗಾರರ ಕಳಪೆ ಆಟದ ಲಾಭ ಪಡೆದ ಪಾಕ್​ ತಂಡ ಮೊಹಮದ್​ ರಿಜ್ವಾನ್​, ಅಬ್ದುಲ್ಲಾ ಶಫೀಕ್ ಶತಕದ ಜೊತೆಗೆ ಮೂರನೇ ವಿಕೆಟ್‌ಗೆ 176 ರನ್‌ಗಳ ಜೊತೆಯಾಟದಿಂದ 48.2 ಓವರ್‌ಗಳಲ್ಲಿ 345 ರನ್​ಗಳನ್ನು ದಾಖಲಿಸಿತು. ಇದು ವಿಶ್ವಕಪ್‌ನ ಇತಿಹಾಸದಲ್ಲಿ ಅತ್ಯಧಿಕ ಯಶಸ್ವಿ ರನ್ ಚೇಸ್ ಆಗಿದೆ. ಇದಕ್ಕೂ ಮೊದಲು 2011 ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಐರ್ಲೆಂಡ್​ 329 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು.

ಇನ್ನು, ಹಮಾಸ್ ಉಗ್ರರು ಇಸ್ರೇಲ್ ಮೇಲೆ ಅನಿರೀಕ್ಷಿತ ದಾಳಿ ನಡೆಸಿ 900 ಕ್ಕೂ ಅಧಿಕ ಜನರನ್ನು ಕೊಂದು ಹಾಕಿದೆ. ಇದರ ವಿರುದ್ಧ ತಿರುಗಿ ಬಿದ್ದಿರುವ ಇಸ್ರೇಲ್​ ಪಡೆಗಳು ಸತತ ದಾಳಿ ನಡೆಸುತ್ತಿದ್ದು, ಗಾಜಾ ಪಟ್ಟಿಯಲ್ಲಿ ವಿಧ್ವಂಸಕ ಸೃಷ್ಟಿಸುತ್ತಿದ್ದಾರೆ. ಈವರೆಗೂ ಎರಡೂ ಕಡೆಗಳಿಂದ 2,100 ಜನರು ಸಾವಿಗೀಡಾದ ಬಗ್ಗೆ ವರದಿಯಾಗಿದೆ.

ಇದನ್ನೂ ಓದಿ: ಅಬ್ದುಲ್ಲಾ ಶಫೀಕ್- ರಿಜ್ವಾನ್‌ ಭರ್ಜರಿ ಜೊತೆಯಾಟ; ಶ್ರೀಲಂಕಾ ವಿರುದ್ಧ ಪಾಕಿಸ್ತಾನಕ್ಕೆ ದಾಖಲೆಯ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.