ಮುಂಬೈ : ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂದಾನ ಮಂಗಳವಾರ ತಮ್ಮ ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.
ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ಪುರುಷರ ತಂಡ ಯುಕೆಗೆ ಪ್ರವಾಸ ಕೈಗೊಂಡರೆ, ಮಹಿಳಾ ತಂಡ ಒಂದು ಟೆಸ್ಟ್ ಮತ್ತು ಸೀಮಿತ ಓವರ್ಗಳ ಸರಣಿಗಾಗಿ ಪುರುಷರ ತಂಡದ ಜೊತೆಯೇ ಇಂಗ್ಲೆಂಡ್ಗೆ ಹಾರಲಿದೆ.
ಅದಕ್ಕಾಗಿ ವ್ಯಾಕ್ಸಿನ್ ಪಡೆದುಕೊಳ್ಳುವತ್ತಾ ಕ್ರಿಕೆಟಿಗರು ಮುಂದಾಗಿದ್ದಾರೆ. ಡಬ್ಲ್ಯೂಟಿಸಿಯಲ್ಲಿ ಭಾರತ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ ಮಂಗಳವಾರ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
-
Vaccinated. Please stay safe everyone. pic.twitter.com/8ZrclDh2LI
— Jasprit Bumrah (@Jaspritbumrah93) May 11, 2021 " class="align-text-top noRightClick twitterSection" data="
">Vaccinated. Please stay safe everyone. pic.twitter.com/8ZrclDh2LI
— Jasprit Bumrah (@Jaspritbumrah93) May 11, 2021Vaccinated. Please stay safe everyone. pic.twitter.com/8ZrclDh2LI
— Jasprit Bumrah (@Jaspritbumrah93) May 11, 2021
ಲಸಿಕೆ ಪಡೆದುಕೊಂಡಿದ್ದೇನೆ, ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ಎಂದು ಮುಂಬೈ ಇಂಡಿಯನ್ಸ್ ವೇಗಿ ಟ್ವೀಟ್ ಮಾಡಿದ್ದಾರೆ.
ಮಹಿಳಾ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನ ಕೂಡ ಇಂದು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದು, ಎಲ್ಲರೂ ಸುರಕ್ಷಿತವಾಗಿ ಮತ್ತು ನೀವಾಗಿಯೇ ಲಸಿಕೆ ಪಡೆದುಕೊಳ್ಳಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
- " class="align-text-top noRightClick twitterSection" data="
">
ಈಗಾಗಲೇ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ಅಜಿಂಕ್ಯ ರಹಾನೆ, ಪೂಜಾರ, ಇಶಾಂತ್ ಶರ್ಮಾ, ದೀಪಕ್ ಚಹರ್, ಉಮೇಶ್ ಯಾದವ್, ಸಿದ್ಧಾರ್ಥ್ ಕೌಲ್ ಸೇರಿದಂತೆ ಹಲವಾರು ಕ್ರಿಕೆಟಿಗರು ಲಸಿಕೆ ಪಡೆದುಕೊಂಡಿದ್ದಾರೆ.
ಇದನ್ನು ಓದಿ: ಅದು ಯಾರೇ ಆಗಲಿ, ಕೊರೊನಾ ಪಾಸಿಟಿವ್ ಬಂದ್ರೆ ಇಂಗ್ಲೆಂಡ್ ಪ್ರವಾಸದಿಂದ ಗೇಟ್ ಪಾಸ್: ಬಿಸಿಸಿಐ ಎಚ್ಚರಿಕೆ