ನವದೆಹಲಿ: ತಮ್ಮ ವಿಶಿಷ್ಠ ನಾಯಕತ್ವ ಮತ್ತು ದಿಟ್ಟ ಬ್ಯಾಟಿಂಗ್ ಶೈಲಿಯ ಮೂಲಕ ಭಾರತೀಯ ಕ್ರಿಕೆಟ್ ಅನ್ನು ಮರುರೂಪಿಸಿದ ಮಹೇಂದ್ರ ಸಿಂಗ್ ಧೋನಿ ಇಂದಿಗೆ ಸರಿಯಾಗಿ ಮೂರು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು. ಭಾರತ ಕ್ರಿಕೆಟ್ ಮಾತ್ರವಲ್ಲ, ವಿಶ್ವ ಕ್ರಿಕೆಟ್‌ಲೋಕಕ್ಕೂ ಇದೊಂದು ಅಚ್ಚರಿಯ ಸುದ್ದಿಯಾಗಿತ್ತು. 15 ವರ್ಷಗಳ ಸುದೀರ್ಘ ಕ್ರಿಕೆಟ್ ಬದುಕಿನಲ್ಲಿ ನಾಯಕನಾಗಿ ಭಾರತಕ್ಕೆ ಮೂರು ಐಸಿಸಿ ಟ್ರೋಫಿಯನ್ನು ಗೆಲ್ಲಿಸಿಕೊಟ್ಟವರು ಮಾಹಿ.
ಧೋನಿ ಎಷ್ಟು ಸರಳವಾಗಿ ನಿವೃತ್ತಿ ಹೇಳಿದ್ದರೆಂದರೆ, 2020 ಆಗಸ್ಟ್ 15ರಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾವು ಆಡಿದ ಪಂದ್ಯಗಳ ಪುಟ್ಟ ವಿಡಿಯೋ ಪೋಸ್ಟ್ ಮಾಡಿ ಅದಕ್ಕೆ ಹಿನ್ನೆಲೆಯಲ್ಲಿ ಅಮಿತಾಭ್ ಬಚ್ಚನ್ ಅವರ 'ಕಭಿ ಕಭಿ' ಚಿತ್ರದ 'ಮೈ ಪಲ್ ದೋ ಪಲ್ ಕಾ ಶಾಯರ್ ಹೂ' ಎಂಬ ಹಾಡು ಬಳಸಿದ್ದರು. ಈ ಪೋಸ್ಟ್ನಲ್ಲಿ, "ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು. 1929 ಗಂಟೆಗಳಿಂದ ನನ್ನನ್ನು ನಿವೃತ್ತಿ ಎಂದು ಪರಿಗಣಿಸಿ" ಎಂದು ವಿಶೇಷ ರೀತಿಯಲ್ಲಿ ಕ್ಯಾಪ್ಶನ್ ಕೊಟ್ಟಿದ್ದರು.
ಮಾಹಿ ಮೈದಾನದಲ್ಲಿ ಯಾವಾಗಲೂ ವಿಶೇಷವಾಗಿಯೇ ಕಾಣುತ್ತಿದ್ದರು. ಇದಕ್ಕೆ ಕಾರಣ 2007ರ ವಿಶ್ವಕಪ್. ಮೊದಲ ಟಿ20 ವಿಶ್ವಕಪ್ನ ಕೊನೇಯ ಓವರ್ ಮತ್ತು ಕೊನೇಯ ಎಸೆತವನ್ನು ಕ್ರಿಕೆಟ್‌ಪ್ರೇಮಿಗಳು ಎಂದೂ ಮರೆಯಲಾರರು. ಅಂತಹ ಫೀಲ್ಡ್ ಅನ್ನು ಧೋನಿ ಮೈದಾನದಲ್ಲಿ ಸೆಟ್ ಮಾಡಿದ್ದರು. ಇದಾದ ನಂತರ ಮಾಹಿಯ ಜಾದು ಮೈದಾನದಲ್ಲಿ ಒಂದರ ಮೇಲೊಂದರಂತೆ ಕಾಣಸಿಕ್ಕಿತ್ತು. ಧೋನಿ ಮೈದಾನದಲ್ಲಿ ತೆಗೆದುಕೊಂಡ ಪ್ರತಿ ನಿರ್ಧಾರದಲ್ಲೂ ಹೊಸತನವಿರುತ್ತಿತ್ತು. 2007ರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯ ಟೈ ಆದಾಗ ಆಡಿಸಿದ್ದ ಹಿಟ್ ವಿಕೆಟ್ನಲ್ಲೂ ಧೋನಿ ತಮ್ಮ ಚಾಣಾಕ್ಷತನ ಮೆರೆದಿದ್ದರು. ಇವರದೇ ನಾಯಕತ್ವದಲ್ಲಿ ತಂಡ 2011ರಲ್ಲಿ ವಿಶ್ವಕಪ್ ಗೆದ್ದುಕೊಂಡಿದೆ. ಈ ವಿಶ್ವಕಪ್ನಲ್ಲಿ ಧೋನಿಯ ಫಿನಿಶಿಂಗ್ ಶಾಟ್ ಸ್ಮರಣೀಯ.
-
On this day in 2020, MS Dhoni announced his retirement from international cricket. 🏏
— SportsTattoo Media (@thesportstattoo) August 15, 2023 " class="align-text-top noRightClick twitterSection" data="
Let's relieve his wonderful captain's knock at ICC World Cup 2011 final which helped India lift the world cup.
"DHONI FINISHES OFF IN STYLE" ❤️🔥#OnThisDay #MSDhoni #IndependenceDayIndia… pic.twitter.com/W8psLRdVgv
">On this day in 2020, MS Dhoni announced his retirement from international cricket. 🏏
— SportsTattoo Media (@thesportstattoo) August 15, 2023
Let's relieve his wonderful captain's knock at ICC World Cup 2011 final which helped India lift the world cup.
"DHONI FINISHES OFF IN STYLE" ❤️🔥#OnThisDay #MSDhoni #IndependenceDayIndia… pic.twitter.com/W8psLRdVgvOn this day in 2020, MS Dhoni announced his retirement from international cricket. 🏏
— SportsTattoo Media (@thesportstattoo) August 15, 2023
Let's relieve his wonderful captain's knock at ICC World Cup 2011 final which helped India lift the world cup.
"DHONI FINISHES OFF IN STYLE" ❤️🔥#OnThisDay #MSDhoni #IndependenceDayIndia… pic.twitter.com/W8psLRdVgv
ಧೋನಿ ಅವಧಿಯಲ್ಲಿ ಭಾರತ ತಂಡ ಏಕದಿನ, ಟೆಸ್ಟ್ ಮತ್ತು ಟಿ20ಯಲ್ಲಿ ಐಸಿಸಿ ಕೊಡುವ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು. 2013ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ತಂಡ ಇಂಗ್ಲೆಂಡ್ನಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತು. ಈ ಮೂಲಕ ಐಸಿಸಿ ನಡೆಸುವ ಮೂರೂ ಮಹತ್ವದ ಕಪ್ ಗೆದ್ದ ಏಕೈಕ ನಾಯಕ ಎಂಬ ಕೀರ್ತಿಗೂ ಮಾಹಿ ಭಾಜನರಾದರು.
-
🇮🇳🤩 𝗙𝗥𝗢𝗠 𝗖𝗔𝗣𝗧𝗔𝗜𝗡 𝗖𝗢𝗢𝗟 𝗧𝗢 𝗔 𝗟𝗘𝗚𝗘𝗡𝗗! #OnThisDay in 2020, a legendary era concluded, as Thala Dhoni bid farewell to his 15-year international cricket career.
— The Bharat Army (@thebharatarmy) August 15, 2023 " class="align-text-top noRightClick twitterSection" data="
🙏🏻 MS Dhoni's Bharat Army Forever!
📷 Getty • #MSDhoni #OTD #TeamIndia #BharatArmy pic.twitter.com/PDwzMJhV6S
">🇮🇳🤩 𝗙𝗥𝗢𝗠 𝗖𝗔𝗣𝗧𝗔𝗜𝗡 𝗖𝗢𝗢𝗟 𝗧𝗢 𝗔 𝗟𝗘𝗚𝗘𝗡𝗗! #OnThisDay in 2020, a legendary era concluded, as Thala Dhoni bid farewell to his 15-year international cricket career.
— The Bharat Army (@thebharatarmy) August 15, 2023
🙏🏻 MS Dhoni's Bharat Army Forever!
📷 Getty • #MSDhoni #OTD #TeamIndia #BharatArmy pic.twitter.com/PDwzMJhV6S🇮🇳🤩 𝗙𝗥𝗢𝗠 𝗖𝗔𝗣𝗧𝗔𝗜𝗡 𝗖𝗢𝗢𝗟 𝗧𝗢 𝗔 𝗟𝗘𝗚𝗘𝗡𝗗! #OnThisDay in 2020, a legendary era concluded, as Thala Dhoni bid farewell to his 15-year international cricket career.
— The Bharat Army (@thebharatarmy) August 15, 2023
🙏🏻 MS Dhoni's Bharat Army Forever!
📷 Getty • #MSDhoni #OTD #TeamIndia #BharatArmy pic.twitter.com/PDwzMJhV6S
ಧೋನಿ 350 ಏಕದಿನ ಪಂದ್ಯಗಳಲ್ಲಿ 10,773 ರನ್, 90 ಟೆಸ್ಟ್‌ಗಳಲ್ಲಿ 4,876 ರನ್ ಗಳಿಸಿದ್ದಾರೆ. ಸ್ಟಂಪ್‌ಗಳ ಹಿಂದೆ 829 ಔಟ್ ಮಾಡುವ ಮೂಲಕ 3ನೇ ಹೆಚ್ಚು ವಿಕೆಟ್ ಪಡೆದ ಕೀಪರ್ ಎಂಬ ಖ್ಯಾತಿಯನ್ನೂ ಪಡೆದಿದ್ದಾರೆ.
ಇದನ್ನೂ ಓದಿ: Sachin Tendulkar: ಶತಕಗಳ ಶತಕ ದಾಖಲಿಸಿದ ಸಚಿನ್ ತೆಂಡೂಲ್ಕರ್ ಮೊಟ್ಟ ಮೊದಲ ಶತಕಕ್ಕೆ 33 ವರ್ಷ!