ETV Bharat / sports

ICC Women ODI Ranking: 5ನೇ ಸ್ಥಾನಕ್ಕೆ ಬಡ್ತಿ ಪಡೆದ ಮಂಧಾನ, 2ರಲ್ಲಿ ಮಿಥಾಲಿ

710 ಅಂಕಗಳನ್ನು ಹೊಂದಿರುವ ಸ್ಮೃತಿ ದಕ್ಷಿಣ ಆಫ್ರಿಕಾದ ಲೆಜಿಲ್​ ಲೀ(701) ಮತ್ತು ಇಂಗ್ಲೆಂಡ್​ನ ಟಮ್ಮಿ ಬ್ಯೂಮಾಂಟ್​(696) ರನ್ನು ಹಿಂದಿಕ್ಕಿ ಆಸ್ಟ್ರೇಲಿಯಾದ ಅಲಿಸ್​ ಹೀಲಿ ಅಗ್ರಸ್ಥಾನದಲ್ಲಿರುವ ಪಟ್ಟಿಯಲ್ಲಿ 5ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ.

ICC Women ODI Ranking
ICC Women ODI Ranking
author img

By

Published : Feb 8, 2022, 7:23 PM IST

ದುಬೈ: ಭಾರತ ತಂಡದ ಆರಂಭಿಕ ಬ್ಯಾಟರ್​​ ಸ್ಮೃತಿ ಮಂಧಾನ ಮಂಗಳವಾರ ಬಿಡುಗಡೆ ಯಾಗಿರುವ ಐಸಿಸಿ ಮಹಿಳಾ ಏಕದಿನ ಶ್ರೇಯಾಂಕದಲ್ಲಿ 2 ಸ್ಥಾನ ಮೇಲೇರಿ 5ನೇ ಸ್ಥಾನಕ್ಕೆ ಬಡ್ತಿಪಡೆದಿದ್ದರೆ, ನಾಯಕಿ ಮಿಥಾಲಿ ರಾಜ್​ 2ನೇ ಶ್ರೇಯಾಂಕದಲ್ಲಿ ಮುಂದುವರಿದಿದ್ದಾರೆ.

710 ಅಂಕಗಳನ್ನು ಹೊಂದಿರುವ ಸ್ಮೃತಿ ದಕ್ಷಿಣ ಆಫ್ರಿಕಾದ ಲೆಜಿಲ್​ ಲೀ(701) ಮತ್ತು ಇಂಗ್ಲೆಂಡ್​ನ ಟಮ್ಮಿ ಬ್ಯೂಮಾಂಟ್​(696) ರನ್ನು ಹಿಂದಿಕ್ಕಿ ಆಸ್ಟ್ರೇಲಿಯಾದ ಅಲಿಸ್​ ಹೀಲಿ ಅಗ್ರಸ್ಥಾನದಲ್ಲಿರುವ ಪಟ್ಟಿಯಲ್ಲಿ 5ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ.

ಮಹಿಳಾ ಆ್ಯಶಸ್​ ಸರಣಿಯಲ್ಲಿ ಪ್ರಾಬಲ್ಯ ಸಾಧಿಸಿದ ಆಸ್ಟ್ರೇಲಿಯಾ ಮಹಿಳೆಯರು ಏಕದಿನ ಶ್ರೇಯಾಂಕದಲ್ಲಿ ಗಮನಾರ್ಹ ಏರಿಕೆ ಕಂಡಿದ್ದಾರೆ. ಬೆತ್​ ಮೂನಿ ಬ್ಯಾಟಿಂಗ್ ವಿಭಾಗದಲ್ಲಿ 8 ರಿಂದ 3ಕ್ಕೆ ಬಡ್ತಿ ಪಡೆದರೆ, ಭಾರತದ ಸರಣಿಯ ವೇಳೆ ಆಲ್​ರೌಂಡರ್​ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದ ಎಲಿಸ್ ಪೆರ್ರಿ(407) ಮತ್ತೆ ಅಗ್ರಸ್ಥಾನಕ್ಕೆ ಮರಳಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ದೀಪ್ತಿ ಶರ್ಮಾ(229) 4ನೇ ಶ್ರೇಯಾಂಕದಲ್ಲಿದ್ದಾರೆ.

ಆಲ್​ರೌಂಡರ್​ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದಲ್ಲದೆ, ಬೌಲಿಂಗ್​ ಶ್ರೇಯಾಂಕದಲ್ಲೂ ಪೆರ್ರಿ ಅಗ್ರ 10ಕ್ಕೆ ಮರಳಿದ್ದಾರೆ. ಅವರು 16ರಿಂದ 9ನೇ ಸ್ಥಾನಕ್ಕೆ ಮರಳಿದ್ದಾರೆ, ಸರಣಿಯಲ್ಲಿ ಸೋಲು ಕಂಡರು ಇಂಗ್ಲೆಂಡ್​ನ ಸ್ಪಿನ್ನರ್​ ಎಕ್ಲೆಸ್ಟೋನ್​ ರಿಂದ 4ರಿಂದ 3ನೇ ಸ್ಥಾನಕ್ಕೆ, ಬ್ರಂಟ್​ 7ರಿಂದ 6ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಆಸ್ಟ್ರೇಲಿಯಾದ ಜೆಸ್​ ಜೊನಾಸೆನ್​ ಮತ್ತು ಭಾರತದ ಜೂಲನ್ ಗೋಸ್ವಾಮಿ ಅಗ್ರ 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಇದನ್ನೂ ಓದಿ:ವಿರಾಟ್​ ಕೊಹ್ಲಿಯ 100 ಟೆಸ್ಟ್ ಬೆಂಗಳೂರಿನ ಬದಲು ಮೊಹಾಲಿಯಲ್ಲಿ ನಡೆಯುವ ಸಾಧ್ಯತೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.