ETV Bharat / sports

ಭಾರತದಿಂದಲೇ ಇಂಗ್ಲೆಂಡ್​ಗೆ ಪ್ರಯಾಣಿಸಲಿದ್ದಾರೆ ಕೆಲವು ಕಿವೀಸ್​ ಆಟಗಾರರು!

author img

By

Published : May 6, 2021, 3:33 PM IST

ಜೂನ್​ 18ರಿಂದ 22 ರವರೆಗೆ ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡಗಳ ನಡುವೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯ ನಡೆಯಲಿದೆ. ಟೆಸ್ಟ್​​ ತಂಡದಲ್ಲಿ ಅವಕಾಶ ಪಡೆದುಕೊಂಡಿರುವ ನಾಯಕ ಕೇನ್ ವಿಲಿಯಮ್ಸನ್​​, ಕೈಲ್ ಜೆಮೀಸನ್​, ಮಿಚೆಲ್ ಸ್ಯಾಂಟ್ನರ್​ ಮತ್ತು ಫಿಸಿಯೋ ಟಾಮಿ ಸಿಮ್ಸೆಕ್​ ನವೆದೆಹಲಿಯಲ್ಲಿಯೇ ಮಿನಿ ಬಬಲ್​ನಲ್ಲಿದ್ದಾರೆ.

World Test Championships
ಟೆಸ್ಟ್​ ಚಾಂಪಿಯನ್​ಶಿಪ್

ನವದೆಹಲಿ: ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಭಾಗವಹಿಸಿದ್ದ ನ್ಯೂಜಿಲ್ಯಾಂಡ್​ ಕ್ರಿಕೆಟಿಗರು ಇಂಗ್ಲೆಂಡ್​ನಲ್ಲಿ ಟೆಸ್ಟ್​ ಚಾಂಪಿಯನ್​ಶಿಪ್​ಗಾಗಿ ನೇರವಾಗಿ ಇಂಗ್ಲೆಂಡ್​ಗೆ ಮೇ 11 ರಂದು ಪ್ರಯಾಣಿಸಲಿದ್ದಾರೆ.

ಜೂನ್​ 18ರಿಂದ 22 ರವರೆಗೆ ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡಗಳ ನಡುವೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯ ನಡೆಯಲಿದೆ. ಟೆಸ್ಟ್​​ ತಂಡದಲ್ಲಿ ಅವಕಾಶ ಪಡೆದುಕೊಂಡಿರುವ ನಾಯಕ ಕೇನ್ ವಿಲಿಯಮ್ಸನ್​​, ಕೈಲ್ ಜೆಮೀಸನ್​, ಮಿಚೆಲ್ ಸ್ಯಾಂಟ್ನರ್​ ಮತ್ತು ಫಿಸಿಯೋ ಟಾಮಿ ಸಿಮ್ಸೆಕ್​ ನವ ದೆಹಲಿಯಲ್ಲಿಯೇ ಮಿನಿ ಬಬಲ್​ನಲ್ಲಿದ್ದಾರೆ.

ಇವರೆಲ್ಲರೂ ಟೆಸ್ಟ್​ ಚಾಂಪಿಯನ್​ಶಿಪ್​ಗೂ ಮುನ್ನ ಇಂಗ್ಲೆಂಡ್​ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್​ ಸರಣಿಗಾಗಿ ನೇರವಾಗಿ ಇಂಗ್ಲೆಂಡ್​ಗೆ ಪ್ರಯಾಣಿಸಲಿದ್ದಾರೆ. ಉಳಿದ ಆಟಗಾರರು ನ್ಯೂಜಿಲ್ಯಾಂಡ್​​ನಿಂದಲೇ ಇಂಗ್ಲೆಂಡ್​ಗೆ ಹೋಗಲಿದ್ದಾರೆ.

ಆದರೆ, ವೇಗದ ಬೌಲರ್​ ಟ್ರೆಂಟ್ ಬೌಲ್ಟ್​ ದೆಹಲಿಯಿಂದ ಚಾರ್ಟರ್​ ಫ್ಲೈಟ್​ನಲ್ಲಿ ತಮ್ಮ ಕೋಚ್​ ಕ್ರಿಸ್​ ಡೋನಾಲ್ಡ್​ಸನ್​ ಅವರೊಡನೆ ತವರಿಗೆ ಹಿಂತಿರುಗಿದ್ದಾರೆ. ಅವರು ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಈ ಸಮಯದಲ್ಲಿ ತಮ್ಮ ಕುಟುಂಬದೊಂದಿಗೆ ಕೆಲವು ಸಮಯ ಕಳೆಯಲಿದ್ದಾರೆ. ನಂತರ ಭಾರತದ ವಿರುದ್ಧ ಚಾಂಪಿಯನ್​ಶಿಪ್​ ಫೈನಲ್ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಎನ್​ಜಿಸಿ ಖಚಿತಪಡಿಸಿದೆ.

ಇದನ್ನು ಓದಿ: "ಮೊದಲು ಎಲ್ಲರನ್ನೂ ಜೋಪಾನವಾಗಿ ಮನೆಗೆ ಕಳುಹಿಸಿ, ಕೊನೆಯಲ್ಲಿ ನಾನು ಹೋಗ್ತೇನೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.