ETV Bharat / sports

ಲೇಥಮ್ 252 ರನ್​, ಬೌಲ್ಟ್ 5 ವಿಕೆಟ್​​: ಬಾಂಗ್ಲಾದೇಶ ವಿರುದ್ಧ ನ್ಯೂಜಿಲ್ಯಾಂಡ್ ಪ್ರಾಬಲ್ಯ

ಬಾಂಗ್ಲಾದೇಶವನ್ನು 126ಕ್ಕೆ ಆಲೌಟ್ ಮಾಡಿರುವ ಆತಿಥೇಯ ಕಿವೀಸ್ ತಂಡ 395 ರನ್​ಗಳ ಬೃಹತ್ ಮುನ್ನಡೆ ಸಾಧಿಸಿದೆ. ನ್ಯೂಜಿಲ್ಯಾಂಡ್​ ಮೊದಲ ಇನ್ನಿಂಗ್ಸ್​ನಲ್ಲಿ 521/6ಕ್ಕೆ ಡಿಕ್ಲೇರ್ ಘೋಷಿಸಿಕೊಂಡಿತ್ತು.

NZ vs Ban, 2nd Test
ನ್ಯೂಜಿಲ್ಯಾಂಡ್​ vs ಬಾಂಗ್ಲಾದೇಶ ಟೆಸ್ಟ್​
author img

By

Published : Jan 10, 2022, 3:24 PM IST

ಕ್ರೈಸ್ಟ್​ಚರ್ಚ್​: ಬಾಂಗ್ಲಾದೇಶದ ವಿರುದ್ಧ ಮೊದಲ ಟೆಸ್ಟ್​​ ಪಂದ್ಯದಲ್ಲಿ ಸೋಲುಂಡು ನಿರಾಸೆ ಅನುಭವಿಸಿದ್ದ ನ್ಯೂಜಿಲ್ಯಾಂಡ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಕಿವೀಸ್​ ಮೊದಲ ಇನ್ನಿಂಗ್ಸ್​ನಲ್ಲಿ 128.5 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 521 ರನ್​ಗಳಿಸಿ ಡಿಕ್ಲೇರ್​ ಮಾಡಿಕೊಂಡಿತು. ನಾಯಕ ಟಾಮ್ ಲೇಥಮ್​ 373 ಎಸೆತಗಳಲ್ಲಿ 34 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ 252 ರನ್​ಗಳಿಸಿದರೆ, ಇವರಿಗೆ ಸಾಥ್ ನೀಡಿದ ಡೆವೊನ್ ಕಾನ್ವೆ 166 ಎಸೆತಗಳಲ್ಲಿ 109 ರನ್​ಗಳಿಸಿದ್ದರು. ಉಳಿದಂತೆ ವಿಲ್ ಯಂಗ್​ 54 ಮತ್ತು ಬ್ಲಂಡಲ್ 57 ರನ್​ಗಳಿಸಿದ್ದಾರೆ.

ಶೊರಿಫುಲ್​ ಇಸ್ಲಾಮ್​ 79ಕ್ಕೆ 2, ಎಬಾದತ್ ಹುಸೇನ್​ 143ಕ್ಕೆ 2, ಮೊಮಿನುಲ್ ಹಕ್ 34ಕ್ಕೆ 1 ವಿಕೆಟ್ ಪಡೆದರು.

ಇತ್ತ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ, ಕಿವೀಸ್ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 126 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ 395 ರನ್​ಗಳ ಹಿನ್ನಡೆ ಅನುಭವಿಸಿದೆ.

ಯಾಸಿರ್ ಅಲಿ 55 ಮತ್ತು ನೂರುಲ್ ಹಸನ್​ 41 ರನ್​ಗಳಿಸಿದ್ದರೆ ಬಿಟ್ಟರೆ ತಂಡದ ಯಾವೊಬ್ಬ ಬ್ಯಾಟರ್​ ಕೂಡಾ ಎರಡಂಕಿ ಮೊತ್ತ ದಾಟಲಿಲ್ಲ.

ಟಿಮ್ ಸೌಥಿ 28ಕ್ಕೆ 3, ಟ್ರೆಂಟ್ ಬೌಲ್ಟ್​​ 43ಕ್ಕೆ 5 ಮತ್ತು ಕೈಲ್ ಜೇಮಿಸನ್​ 32ಕ್ಕೆ 2 ವಿಕೆಟ್​ ಪಡೆದು ಮಿಂಚಿದರು. ನಾಳೆ ಪಂದ್ಯದ ಮೂರನೇ ದಿನವಾಗಿದ್ದು ಬಾಂಗ್ಲಾಗೆ ಫಾಲೋ ಆನ್​ ಹೇರಲಿದೆಯೇ ಅಥವಾ ಕೊನೆಯ ಟೆಸ್ಟ್​ ಪಂದ್ಯವನ್ನಾಡುವ ರಾಸ್​ ಟೇಲರ್​ಗೆ ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಡಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: IND vs SA 3rd Test: ಫೈನಲ್​ ಟೆಸ್ಟ್​ ಆಡಲು ಕೇಪ್​ಟೌನ್​ಗೆ ಬಂದ ಕೊಹ್ಲಿ ಪಡೆಗೆ ಅದ್ಧೂರಿ ಸ್ವಾಗತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.