ETV Bharat / sports

ಬ್ಯಾಟಿಂಗ್ ವೇಳೆ ಸ್ಕೋರ್ ಬೋರ್ಡ್ ನೋಡುತ್ತಿರಲಿಲ್ಲ: ಸುನಿಲ್ ಗವಾಸ್ಕರ್ - Cricket legend Sunil Gavaskar

ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಸ್ಕೋರ್ ಬೋರ್ಡ್ ನೋಡುತ್ತಿರಲಿಲ್ಲ ಎಂದು ಗವಾಸ್ಕರ್ ಹೇಳಿದರು.

Cricket legend Sunil Gavaskar
ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್
author img

By

Published : Dec 2, 2022, 2:26 PM IST

ಭಾರತ ಕ್ರಿಕೆಟ್​ ತಂಡದ ದಿಗ್ಗಜ ಸುನಿಲ್ ಗವಾಸ್ಕರ್ ಅವರು ವೃತ್ತಿ ಜೀವನದಲ್ಲಿ 13,000 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್‌ ಸಾಧನೆ ಮಾಡಿದವರು. ತಮ್ಮ ಕ್ರಿಕೆಟ್‌ ದಿನಗಳನ್ನು ಮೆಲುಕು ಹಾಕಿರುವ ಅವರು, ಬ್ಯಾಟಿಂಗ್‌ ಮಾಡುವಾಗ ಸ್ಕೋರ್‌ ಬೋರ್ಡ್‌ ನೋಡದೇ ಲೀಲಾಜಾಲವಾಗಿ ಬ್ಯಾಟ್‌ ಬೀಸುತ್ತಿದ್ದ ವಿಚಾರವನ್ನು ತಿಳಿಸಿದ್ದಾರೆ. ಎಬಿಪಿ ಗ್ರೂಪ್ ಆಯೋಜಿಸಿದ್ದ INFOCOM 2022 ರ ಸಂದರ್ಭದಲ್ಲಿ 'ಸ್ಪಾಟ್‌ಲೈಟ್ ಸೆಷನ್' ವೇಳೆ ಅವರು ಮಾತನಾಡಿದರು.

ಪ್ರತಿಯೊಬ್ಬ ಬ್ಯಾಟರ್‌ ತನ್ನ ಗುರಿಗಳನ್ನು ತಲುಪಲು ತನ್ನದೇ ಆದ ಮಾರ್ಗ ಹೊಂದಿರುತ್ತಾನೆ. ನಿರ್ದಿಷ್ಟ ಗುರಿಯನ್ನು ತಲುಪುವ ಒತ್ತಡವನ್ನು ತೊಡೆದುಹಾಕಲು ಬ್ಯಾಟರ್‌, ಸ್ಕೋರ್‌ಬೋರ್ಡ್ ನೋಡದೇ ಅರ್ಹತೆಯ ಮೇಲೆ ಪ್ರತಿ ಚೆಂಡನ್ನು​ ಆಡಬೇಕು ಎಂದು ಗವಾಸ್ಕರ್ ಸಲಹೆ ನೀಡಿದರು.

ಕುತೂಹಲಕಾರಿ ಸಂಗತಿಯೊಂದನ್ನು ಹಂಚಿಕೊಂಡ ಗವಾಸ್ಕರ್, ಸರ್ ಡಾನ್ ಬ್ರಾಡ್ಮನ್ ಅವರ 29 ನೇ ಟೆಸ್ಟ್ ಶತಕವನ್ನು ಯಾವಾಗ ಸರಿಗಟ್ಟಿದೆ ಎಂದೂ ನನಗೆ ಗೊತ್ತಿಲ್ಲ. ಏಕೆಂದರೆ ನನಗೆ ಯಾವತ್ತೂ ಸ್ಕೋರ್ ಬೋರ್ಡ್ ನೋಡುವ ಅಭ್ಯಾಸವಿರಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ :ನಿಮಗೆ ಭಾರತಕ್ಕೆ ಆಡುವಾಗ ವರ್ಕ್​ಲೋಡ್, ಐಪಿಎಲ್​ನಲ್ಲಿ ಯಾವ ಒತ್ತಡ ಇರಲ್ಲ: ಸುನಿಲ್ ಗವಾಸ್ಕರ್ ವಾಗ್ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.