ETV Bharat / sports

WTC ಫೈನಲ್​ಗೆ ಭಾರತ ತಂಡ ಪ್ರಕಟಿಸಿ ಜಡೇಜಾ ಹೊರಗಿಟ್ಟ ಸಂಜಯ್ ಮಂಜ್ರೇಕರ್! - ಸಂಜಯ್ ಮಂಜ್ರೇಕರ್ vs ರವೀಂದ್ರ ಜಡೇಜಾ

2019ರ ಏಕದಿನ ವಿಶ್ವಕಪ್ ವೇಳೆ ಜಡೇಜಾ ಮೇಲೆ ವಿವಾದಾದ್ಮಕ ಕಮೆಂಟ್ ಮಾಡಿ ಕ್ರಿಕೆಟ್​ ಅಭಿಮಾನಿಗಳ ಆಕ್ರೋಶಕ್ಕೀಡಾಗಿದ್ದರು. ಇದಲ್ಲದೇ ಸ್ವತಃ ಜಡೇಜಾ ಕೂಡ ನಾನು ಈಗಲೂ ನಿಮಗಿಂತ ಹೆಚ್ಚು ಪಂದ್ಯಗಳನ್ನಾಡಿದ್ದೇನೆ ಎಂದು ಬಹಿರಂಗವಾಗಿಯೇ ದಾಳಿ ನಡೆಸಿದ್ದರು.

ಜಡೇಜಾ ಮಂಜ್ರೇಕರ್
ಜಡೇಜಾ ಮಂಜ್ರೇಕರ್
author img

By

Published : Jun 15, 2021, 4:31 PM IST

ಮುಂಬೈ: ಜೂನ್ 18ರಂದು ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಎರಡು ತಂಡಗಳು ಭರ್ಜರಿಯಾಗಿ ಸಿದ್ಧತೆ ಮಾಡಿಕೊಂಡಿವೆ.

ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಕಮೆಂಟ್​ಟೇಟರ್ ಸಂಜಯ್ ಮಂಜ್ರೇಕರ್ ಈ ಮಹತ್ವದ ಪಂದ್ಯಕ್ಕೆ ತಮ್ಮ ಇಷ್ಟವಾದ ತಂಡವನ್ನು ಘೋಷಿಸಿದ್ದು, ಅದರಲ್ಲಿ ರವೀಂದ್ರ ಜಡೇಜಾ ಮತ್ತು 100 ಟೆಸ್ಟ್​ ಪಂದ್ಯಗಳನ್ನಾಡಿರುವ ಅನುಭವವುಳ್ಳ ಇಶಾಂತ್ ಶರ್ಮಾರನ್ನು ಹೊರಗಿಟ್ಟು ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ.

2019ರ ಏಕದಿನ ವಿಶ್ವಕಪ್ ವೇಳೆ ಜಡೇಜಾ ಮೇಲೆ ವಿವಾದಾದ್ಮಕ ಕಮೆಂಟ್ ಮಾಡಿ ಕ್ರಿಕೆಟ್​ ಅಭಿಮಾನಿಗಳ ಆಕ್ರೋಶಕ್ಕೀಡಾಗಿದ್ದರು. ಇದಲ್ಲದೇ ಸ್ವತಃ ಜಡೇಜಾ ಕೂಡ ನಾನು ಈಗಲೂ ನಿಮಗಿಂತ ಹೆಚ್ಚು ಪಂದ್ಯಗಳನ್ನಾಡಿದ್ದೇನೆ ಎಂದು ಬಹಿರಂಗವಾಗಿಯೇ ದಾಳಿ ನಡೆಸಿದ್ದರು.

ಇದನ್ನು ಓದಿ:ಸಾಧನೆ ಮಾಡಿದವರನ್ನ ಗೌರವದಿಂದ ಕಾಣಿ... ಮಾತಿನ ಮಲ್ಲ ಮಂಜ್ರೇಕರ್​ ವಿರುದ್ಧ ಸಿಡಿದೆದ್ದ ಜಡೇಜಾ!

ಇದೀಗ ವಿಶ್ವವೇ ಎದುರು ನೋಡುತ್ತಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೂ ಕೂಡ ಅವರನ್ನು ಮತ್ತೆ ಕಡೆಗಣಿಸಿದ್ದಾರೆ. ಆದರೆ, ತಾವೂ ಇಂಗ್ಲಿಷ್​​ ಪರಿಸ್ಥಿತಿಗೆ ಅನುಗುಣವಾಗಿ ತಂಡ ಆಯ್ಕೆ ಮಾಡಿರುವುದಾಗಿ ಜಡೇಜಾ ಮತ್ತು ಇಶಾಂತ್ ಶರ್ಮಾರನ್ನು ಕೈಬಿಟ್ಟಿರುವುದಕ್ಕೆ ಸಮರ್ಥನೆ ನೀಡಿದ್ದಾರೆ.

" ಇಂಗ್ಲಿಷ್ ಪರಿಸ್ಥಿತಿ ವಿಶೇಷವಾಗಿರುತ್ತದೆ ಎಂದು ನಾನು ಊಹಿಸುತ್ತೇನೆ. ಟೆಸ್ಟ್ ಪಂದ್ಯ ನಡೆಯುವ ಐದು ದಿನಗಳಲ್ಲಿ ಬಿಸಿಲು ಮತ್ತು ಮೋಡ ಮಿಶ್ರಿತ ವಾತಾವರಣ ಇರುತ್ತದೆ ಎಂದು ನಾನು ಭಾವಿಸಿ ಈ ತಂಡವನ್ನು ಆರಿಸಿಕೊಳ್ಳುತ್ತಿದ್ದೇನೆ" ಎಂದು ಮಂಜ್ರೇಕರ್ ಇಎಸ್​ಪಿಎನ್​ಗೆ ತಿಳಿಸಿದ್ದಾರೆ.

ಜಡೇಜಾ ಬದಲಿಗೆ ಹನುಮ ವಿಹಾರಿಯನ್ನು ಮತ್ತು ಇಶಾಂತ್ ಬದಲಿಗೆ ಸಿರಾಜ್​ ಅವರನ್ನು ಆಡಿಸಲು ಬಯಸುವುದಾಗಿ ತಿಳಿಸಿದ್ದಾರೆ. ಹನುಮ ವಿಹಾರಿ ಇಂಗ್ಲಿಷ್​ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಇರುವುದರಿಂದ ಅವರನ್ನು 6 ಅಥವಾ 7ರಲ್ಲಿ ಆಡಿಸುವುದಾಗಿ ಹೇಳಿದ್ದಾರೆ.

WTCಗೆ ಮಂಜ್ರೇಕರ್ ಘೋಷಿಸಿದ ಭಾರತ ತಂಡ

ಶುಬ್ಮನ್ ಗಿಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

ಇದನ್ನು ಓದಿ: WTC ಫೈನಲ್​ ಪಂದ್ಯಕ್ಕೆ ಬಲಿಷ್ಠ ತಂಡ ಪ್ರಕಟಿಸಿದ ನ್ಯೂಜಿಲ್ಯಾಂಡ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.