ETV Bharat / sports

ನಿತೀಶ್​ ರಾಣಾ ಹೆಗಲಿಗೆ ಕೆಕೆಆರ್​ ಹೊಣೆ: ಶಾರ್ದೂಲ್​, ನರೈನ್​ ನಿರೀಕ್ಷೆ ಹುಸಿ

ಕೆಕೆಆರ್​ನ ನಾಯಕತ್ವ ಯಾರಿಗೆ ಎಂಬ ಚರ್ಚೆಗೆ ತೆರೆ ಬಿದ್ದಿದ್ದು, ಹೊಡಿಬಡಿ ದಾಂಡಿಗ ನಿತೀಶ್​ ರಾಣಾಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.

Nitish Rana to lead Kolkata Knight Riders in absence of Shreyas Iyer
ನಿತೀಶ್​ ರಾಣಾ ಹೆಗಲಿಗೆ ಕೆಕೆಆರ್​ ಹೊಣೆ: ಶಾರ್ದೂಲ್​, ನರೈನ್​ ನಿರೀಕ್ಷೆ ಹುಸಿ
author img

By

Published : Mar 27, 2023, 8:46 PM IST

ಐಪಿಎಲ್​ 2023 ಋತುವಿಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಹೊಸ ನಾಯಕನಾಗಿ ನಿತೀಶ್ ರಾಣಾ ಅವರನ್ನು ನೇಮಿಸಲಾಗಿದೆ. ಶ್ರೇಯಸ್ ಅಯ್ಯರ್ ಬೆನ್ನುನೋವಿನಿಂದ ಗಾಯಗೊಂಡಿದ್ದರಿಂದ, ರಾಣಾ ಅವರಿಗೆ ನೈಟ್ಸ್‌ನ ಜವಾಬ್ದಾರಿಯನ್ನು ವಹಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ರಾಣಾ 2018 ರಿಂದ ಕೋಲ್ಕತ್ತಾ ತಂಡವನ್ನು ಸೇರಿದ್ದರು.

ಕೋಲ್ಕತ್ತಾ ನೈಟ್ ರೈಡರ್ಸ್ ಈ ನಿರ್ಧಾರವನ್ನು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಪ್ರಕಟಿಸಿದೆ. ಲೀಗ್​ ನಡುವೆ ಅಯ್ಯರ್​ ಚೇತರಿಸಿಕೊಂಡು ಮತ್ತೆ ತಂಡಕ್ಕೆ ಮರಳುವ ನಿರೀಕ್ಷೆಯನ್ನು ತಿಳಿಸಿದೆ.

"ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿರುವ ಶ್ರೇಯಸ್ ಅನುಪಸ್ಥಿತಿಯಲ್ಲಿ ನಿತೀಶ್ ರಾಣಾ ನಾಯಕತ್ವ ವಹಿಸಲಿದ್ದಾರೆ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ಇಂದು ಘೋಷಿಸಿದೆ. ನಾವು ಅದೃಷ್ಟಶಾಲಿಗಳಾಗಿದ್ದಲ್ಲಿ, ಶ್ರೇಯಸ್ ಚೇತರಿಸಿಕೊಳ್ಳುತ್ತಾರೆ ಮತ್ತು ಐಪಿಎಲ್​ 2023 ಆವೃತ್ತಿಯಲ್ಲಿ ಭಾಗವಹಿಸುತ್ತಾರೆ ಎಂದು ನಾವು ಭಾವಿಸುತ್ತೇವೆ. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ರಾಜ್ಯ ತಂಡವನ್ನು ಮುನ್ನಡೆಸಿದ ಅನುಭವ ಮತ್ತು 2018 ರಿಂದ ಕೆಕೆಆರ್‌ನೊಂದಿಗೆ ನಿತೀಶ್​ ರಾಣ ಅವರ ಆಟದ ಅನುಭವದಿಂದ ಉತ್ತಮವಾಗಿ ನಿಭಾಯಿಸುವ ಭರವಸೆ ಇದೆ.

ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಮತ್ತು ಸಹಾಯಕ ಸಿಬ್ಬಂದಿ ಅಡಿಯಲ್ಲಿ, ಅವರು ಮೈದಾನದ ಹೊರಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ಪಡೆಯುತ್ತಾರೆ. ತಂಡದಲ್ಲಿರುವ ಹೆಚ್ಚು ಅನುಭವಿ ನಾಯಕರು ಮೈದಾನದಲ್ಲಿ ನಿತೀಶ್‌ಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುತ್ತಾರೆ. ಶ್ರೇಯಸ್ ಪೂರ್ಣವಾಗಿ ಶೀಘ್ರ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ" ಎಂದು ಕೆಕೆಆರ್ ಟ್ವಿಟ್​ ಮಾಡಿದೆ.

2018ರಿಂದ ರಾಣಾ ಕೆಕೆಆರ್‌ನಲ್ಲಿ ಆಡುತ್ತಿದ್ದು, ಅವರು ಈ ವರೆಗೆ 74 ಪಂದ್ಯಗಳನ್ನು ಆಡಿದ್ದು 26.02 ಸರಾಸರಿಯಲ್ಲಿ ಒಟ್ಟು 1,744 ರನ್ ಗಳಿಸಿದ್ದಾರೆ. ಐಪಿಎಲ್​ನಲ್ಲಿ 87 ಅವರ ಗರಿಷ್ಠ ಮೊತ್ತವಾಗಿದೆ. ಅವರು 11 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಐಪಿಎಲ್​ ವೃತ್ತಿಜೀವನ: 2015-17 ರಿಂದ ಮುಂಬೈ ಇಂಡಿಯನ್ಸ್​ನಲ್ಲಿ 91 ಪಂದ್ಯಗಳಲ್ಲಿ 28.32 ರ ಸರಾಸರಿಯಲ್ಲಿ 2,181 ರನ್​ಗಳಿಸಿದ್ದಾರೆ. ಅಲ್ಲಿ 15 ಅರ್ಧಶತಕ ಗಳಸಿದ್ದರು. ಅವರು 134.22 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್​ಬೀಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ದೆಹಲಿಯನ್ನು ಮುನ್ನಡೆಸಿದ್ದಾರೆ. ಅದರಲ್ಲಿ ಎಂಟು ಪಂದ್ಯಗಳನ್ನು ಗೆದ್ದಿದ್ದು, ನಾಲ್ಕರಲ್ಲಿ ಸೋತಿದ್ದಾರೆ. ಏಪ್ರಿಲ್ 6 ರಂದು ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್​ನಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಲಿದೆ.

ಕೋಲ್ಕತ್ತಾ ನೈಟ್ ರೈಡರ್ಸ್: ತಂಡದ ಸಾಮರ್ಥ್ಯ 22 ಆಟಗಾರರು (ಸಾಗರೋತ್ತರ 8)

ಐಪಿಎಲ್ 2023 ಹರಾಜಿನಲ್ಲಿ ಖರೀದಿಸಿದ ಆಟಗಾರರು- ಶಕೀಬ್ ಅಲ್ ಹಸನ್ (1.50 ಕೋಟಿ ರೂ.), ಎನ್. ಜಗದೀಸನ್ (ರೂ. 90 ಲಕ್ಷ), ವೈಭವ್ ಅರೋರಾ (ರೂ. 60 ಲಕ್ಷ), ಸುಯಾಶ್ ಶರ್ಮಾ (ರೂ. 20 ಲಕ್ಷ), ಡೇವಿಡ್ ವೈಸ್ (ರೂ. 1 ಕೋಟಿ), ಕುಲ್ವಂತ್ ಖೆಜ್ರೋಲಿಯಾ (20 ಲಕ್ಷ ರೂ.), ಲಿಟ್ಟನ್ ದಾಸ್ (50 ಲಕ್ಷ ರೂ.), ಮನ್ ದೀಪ್ ಸಿಂಗ್ (50 ಲಕ್ಷ ರೂ.).

ಐಪಿಎಲ್ 2023 ರ ಹರಾಜಿಗೆ ಮುಂಚಿತವಾಗಿ ಆಟಗಾರರು ಉಳಿಸಿಕೊಂಡರು: ಶ್ರೇಯಸ್ ಅಯ್ಯರ್, ನಿತೀಶ್ ರಾಣಾ (ನಾಯಕ), ರಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಟಿಮ್ ಸೌಥಿ, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್, ಉಮೇಶ್ ಯಾದವ್, ವರ್ಷಿತ್ ರೊವರ್ತಿ, ಹರ್ಷಿತ್ ರೋವರ್ತಿ ರಿಂಕು ಸಿಂಗ್.

ಇದನ್ನೂ ಓದಿ: ಸುನಿಲ್​ ನರೈನ್​ vs ಶಾರ್ದೂಲ್​​ ಠಾಕೂರ್​: ಕೆಕೆಆರ್​ ನಾಯಕತ್ವ ಯಾರಿಗೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.