ಸೌತಾಂಪ್ಟನ್ : ಪಾಕಿಸ್ತಾನದ ಯುವ ಬೌಲರ್ ಶಾಹೀನ್ ಆಫ್ರಿದಿ ಇಂಗ್ಲೆಂಡ್ನ ಟಿ20 ಬ್ಲಾಸ್ಟ್ನಲ್ಲಿ 4 ಸತತ ಎಸೆತಗಳಲ್ಲಿ 4 ವಿಕೆಟ್ ಪಡೆಯುವ ಮೂಲಕ ಹ್ಯಾಂಪ್ಶೈರ್ ತಂಡಕ್ಕೆ ಅಚ್ಚರಿಯ ಗೆಲುವು ತಂದುಕೊಟ್ಟಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಹ್ಯಾಂಪ್ಶೈರ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 141ರನ್ಗಳಿಸಿತ್ತು. 142 ರನ್ಗಳ ಗುರಿ ಬೆನ್ನಟ್ಟಿದ ಮಿಡ್ಲ್ಎಸೆಕ್ಸ್ ಶಾಹೀನ್ ಆಫ್ರಿದಿ (19ಕ್ಕೆ6)ಬೌಲಿಂಗ್ ದಾಳಿಗೆ ತತ್ತರಿಸಿ 121ರನ್ಗಳಿಗೆ ಆಲೌಟ್ ಆಗುವ ಮೂಲಕ 20 ರನ್ಗಳ ಸೋಲನುಭವಿಸಿದೆ.
-
🔥 1 1 W W W W 🔥
— ICC (@ICC) September 20, 2020 " class="align-text-top noRightClick twitterSection" data="
Shaheen Afridi picked up four wickets in four balls to power Hampshire to victory over Middlesex in #Blast20 🤯
He returned exceptional figures of 6/19 💫 pic.twitter.com/05qOupT3PU
">🔥 1 1 W W W W 🔥
— ICC (@ICC) September 20, 2020
Shaheen Afridi picked up four wickets in four balls to power Hampshire to victory over Middlesex in #Blast20 🤯
He returned exceptional figures of 6/19 💫 pic.twitter.com/05qOupT3PU🔥 1 1 W W W W 🔥
— ICC (@ICC) September 20, 2020
Shaheen Afridi picked up four wickets in four balls to power Hampshire to victory over Middlesex in #Blast20 🤯
He returned exceptional figures of 6/19 💫 pic.twitter.com/05qOupT3PU
ಮಿಡ್ಲ್ಎಸೆಕ್ಸ್ಗೆ ಗೆಲ್ಲಲು ಕೊನೆಯ 18 ಎಸೆತಗಳಲ್ಲಿ 22 ರನ್ಗಳ ಅವಶ್ಯಕತೆಯಿತ್ತು. ಕೈಯಲ್ಲಿ ನಾಲ್ಕು ವಿಕೆಟ್ಗಳಿದ್ದವು. ಅದರಲ್ಲೂ 48 ರನ್ಗಳಿಸಿದ್ದ ಸಿಂಪ್ಸನ್ ಕೂಡ ಕ್ರೀಸ್ನಲ್ಲಿದ್ದರು. ಆದರೆ, 18ನೇ ಓವರ್ನ ಮೊದಲ ಎರಡು ಎಸೆತಗಳಲ್ಲಿ 2 ರನ್ ಬಿಟ್ಟುಕೊಟ್ಟ ಆಫ್ರಿದಿ ಉಳಿದ ನಾಲ್ಕು ಎಸೆತಗಳಲ್ಲಿ ಮಿಡ್ಲ್ಎಸೆಕ್ಸ್ ತಂಡದ ಎಲ್ಲಾ ನಾಲ್ಕು ವಿಕೆಟ್ ಪಡೆದು ಹ್ಯಾಂಪ್ಶೈರ್ಗೆ 20 ರನ್ಗಳ ಅಚ್ಚರಿಯ ಗೆಲುವು ತಂದುಕೊಟ್ಟರು.
17 ನೇ ಓವರ್ನ 3ನೇ ಎಸೆತದಲ್ಲಿ ಸಿಂಪ್ಸನ್(48), 4ನೇ ಎಸೆತದಲ್ಲಿ ಸ್ಟೆವೆನ್ ಫಿನ್(0), 5ನೇ ಎಸೆತದಲ್ಲಿ ತಿಲಾನ್ ವಾಲಲ್ಲವಟ್ಟ(0) ಹಾಗೂ ಕೊನೆಯ ಎಸೆದಲ್ಲಿ ಟಿಮ್ ಮರ್ಟ್ಯಾಗ್(0) ಅವರನ್ನು ಬೌಲ್ಡ್ ಮಾಡಿದರು.
-
🙌 4⃣ IN 4⃣ FOR @iShaheenAfridi & HAMPSHIRE WIN! 🙌
— Hampshire Cricket (@hantscricket) September 20, 2020 " class="align-text-top noRightClick twitterSection" data="
A stunning spell from Shaheen who's final four deliveries seal an incredible @VitalityBlast victory! 🔥👏 pic.twitter.com/wktNMJfYRs
">🙌 4⃣ IN 4⃣ FOR @iShaheenAfridi & HAMPSHIRE WIN! 🙌
— Hampshire Cricket (@hantscricket) September 20, 2020
A stunning spell from Shaheen who's final four deliveries seal an incredible @VitalityBlast victory! 🔥👏 pic.twitter.com/wktNMJfYRs🙌 4⃣ IN 4⃣ FOR @iShaheenAfridi & HAMPSHIRE WIN! 🙌
— Hampshire Cricket (@hantscricket) September 20, 2020
A stunning spell from Shaheen who's final four deliveries seal an incredible @VitalityBlast victory! 🔥👏 pic.twitter.com/wktNMJfYRs
ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಪಡೆದ ವಿಶ್ವದ 6ನೇ ಬೌಲರ್ ಎಂಬ ದಾಖಲೆಗೆ ಪಾತ್ರರಾದರು. ಆಫ್ರಿದಿಗೂ ಮೊದಲು ವಿಂಡೀಸ್ನ ಆ್ಯಂಡ್ರೆ ರಸೆಲ್(2013), ಬಾಗ್ಲಾದೇಶದ ಆಲ್ ಅಮಿನ್ ಹುಸೈನ್ (2013), ಆಫ್ಘಾನಿಸ್ಥಾನದ ರಶೀದ್ ಖಾನ್(2019), ಶ್ರೀಲಂಕಾದ ಲಸಿತ್ ಮಾಲಿಂಗಾ(2019) ಹಾಗೂ ಭಾರತದ (ಕರ್ನಾಟಕದ) ಅಭಿಮನ್ಯು ಮಿಥುನ್ 2019ರಲ್ಲಿ ಈ ಸಾಧನೆ ಮಾಡಿದ್ದರು.
ವಿಶೇಷವೆಂದ್ರೆ ಈ ಪಂದ್ಯದಲ್ಲಿ ಆಫ್ರಿದಿ ಡಬಲ್ ಹ್ಯಾಟ್ರಿಕ್ ಸಹಿತ 19 ರನ್ ನೀಡಿ 6 ವಿಕೆಟ್ ಪಡೆದರು. ಎಲ್ಲಾ ಆರು ವಿಕೆಟ್ ಬೌಲ್ಡ್ ಮಾಡುವ ಮೂಲಕವೇ ಪಡೆದಿದ್ದಾರೆ.