ಮುಂಬೈ : ಚೊಚ್ಚಲ ಟಿ20 ವಿಶ್ವಕಪ್ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಜಯಗಳಿಸುವ ಮೂಲಕ ತನ್ನ ಅಭಿಯಾನ ಆರಂಭಿಸಿತು. ಟೈ ಆಗಿದ್ದ ಈ ಪಂದ್ಯದಲ್ಲಿ ಭಾರತ ಐತಿಹಾಸಿಕ ಬೌಲ್‌ಔಟ್ ಮೂಲಕ ಗೆಲುವು ಪಡೆದಿದ್ದು ವಿಶೇಷ.
ಸೆಪ್ಟೆಂಬರ್ 14, 2007ರ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡದ ಮೊದಲು ಬ್ಯಾಟಿಂಗ್ ನಡೆಸಿ 141 ರನ್ಗಳಿಸಿತ್ತು. ಕನ್ನಡಿಗ ರಾಬಿನ್ ಉತ್ತಪ್ಪ 39 ಎಸೆತಗಳಲ್ಲಿ 50 ರನ್ಗಳಿಸಿದ್ರೆ, ಧೋನಿ 33 ರನ್ಗಳಿಸಿದ್ದರು. ಇದಕ್ಕುತ್ತರವಾಗಿ ಪಾಕ್ ಕೂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 141 ರನ್ಗಳಿಸಿತ್ತು.
-
🇮🇳 → 141/9
— ICC (@ICC) September 14, 2020 " class="align-text-top noRightClick twitterSection" data="
🇵🇰 → 141/7
💥 India win the bowl-out 💥#T20TakesOff | #OnThisDay in 2007, MS Dhoni and Co. secured a famous victory over Pakistan in a heart-racing @T20WorldCup affair in Durban 🙌
📹 Rewatch the highlights 👇 https://t.co/mz0RgogwD3
">🇮🇳 → 141/9
— ICC (@ICC) September 14, 2020
🇵🇰 → 141/7
💥 India win the bowl-out 💥#T20TakesOff | #OnThisDay in 2007, MS Dhoni and Co. secured a famous victory over Pakistan in a heart-racing @T20WorldCup affair in Durban 🙌
📹 Rewatch the highlights 👇 https://t.co/mz0RgogwD3🇮🇳 → 141/9
— ICC (@ICC) September 14, 2020
🇵🇰 → 141/7
💥 India win the bowl-out 💥#T20TakesOff | #OnThisDay in 2007, MS Dhoni and Co. secured a famous victory over Pakistan in a heart-racing @T20WorldCup affair in Durban 🙌
📹 Rewatch the highlights 👇 https://t.co/mz0RgogwD3
ವಿಜೇತರನ್ನು ಘೋಷಣೆ ಮಾಡಲು ಬೌಲ್‌ಔಟ್ ಮೊರೆ ಹೋಗಲಾಗಿತ್ತು. ಎರಡು ತಂಡಕ್ಕೂ 5 ಅವಕಾಶ ನೀಡಲಾಗಿತ್ತು. ಭಾರತದ ಪರ ಹರ್ಭಜನ್ ಸಿಂಗ್, ವಿರೇಂದ್ರ ಸೆಹ್ವಾಗ್ ಹಾಗೂ ರಾಬಿನ್ ಉತ್ತಪ್ಪ ಸ್ಟಂಪ್ಗೆ ಹೊಡೆಯುವುಯದರಲ್ಲಿ ಯಶಸ್ವಿಯಾದ್ರು. ಪಾಕಿಸ್ತಾನದ ಪರ ಉಮರ್ ಗುಲ್, ಶಾಹಿದ್ ಆಫ್ರಿದಿ ಹಾಗೂ ಯಾಸೀರ್ ಅರಾಫತ್ ವಿಫಲರಾಗಿದ್ದರಿಂದ ಭಾರತ 3-0ಯಲ್ಲಿ ಗೆಲುವು ಸಾಧಿಸಿತ್ತು.
ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಯಂಗ್ ಇಂಡಿಯಾ ಫೈನಲ್ನಲ್ಲಿ ಇದೇ ಪಾಕ್‌ನ ಬಗ್ಗುಬಡಿದು ಚೊಚ್ಚಲ ಟಿ20 ವಿಶ್ವಕಪ್ ಎತ್ತಿ ಹಿಡಿದಿತ್ತು.