ETV Bharat / sports

ಕಾನ್ವೆ, ಮಿಚೆಲ್, ಲಾಥಮ್ ಅರ್ಧಶತಕ; ನೆದರ್ಲೆಂಡ್‌ಗೆ 323 ರನ್‌ ಗುರಿ ನೀಡಿದ ನ್ಯೂಜಿಲೆಂಡ್‌ - ETV Bharath Karnataka

ಏಕದಿನ ವಿಶ್ವಕಪ್​ ಕ್ರಿಕೆಟ್‌ನಲ್ಲಿಂದು ನ್ಯೂಜಿಲೆಂಡ್​ ಮತ್ತು ನೆದರ್ಲೆಂಡ್‌ ನಡುವಿನ ಪಂದ್ಯ ನಡೆಯುತ್ತಿದೆ.

New Zealand vs Netherlands Live Match
New Zealand vs Netherlands Live Match
author img

By ETV Bharat Karnataka Team

Published : Oct 9, 2023, 1:58 PM IST

Updated : Oct 9, 2023, 6:14 PM IST

ಹೈದರಾಬಾದ್​​ (ತೆಲಂಗಾಣ): ಏಕದಿನ ವಿಶ್ವಕಪ್‌ ಕ್ರಿಕೆಟ್‌ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್ ತಂಡವನ್ನು ಮಣಿಸಿದ್ದ ಕಿವೀಸ್​ಗೆ ಇಂದು 'ಕ್ರಿಕೆಟ್​ ಶಿಶು' ನೆದರ್ಲೆಂಡ್‌ ಕಠಿಣ ಬೌಲಿಂಗ್​ ದಾಳಿ ನಡೆಸಿತು. ಅಭ್ಯಾಸ ಮತ್ತು ಉದ್ಘಾಟನಾ ಪಂದ್ಯದಲ್ಲಿ ಅಬ್ಬರಿಸಿದ್ದ ಬ್ಲಾಕ್​ಕ್ಯಾಪ್​ ಬಾಯ್ಸ್​ ಇಂದು ಸ್ವಲ್ಪ ಮಂಕಾದರು. ನಿಗದಿತ 50 ಓವರ್‌ಗಳಂತ್ಯಕ್ಕೆ ನ್ಯೂಜಿಲೆಂಡ್​ 7 ವಿಕೆಟ್​ ನಷ್ಟಕ್ಕೆ 322 ರನ್​ ಗಳಿಸಿತು. ಈ ಮೂಲಕ ಡಚ್ಚರ ಗೆಲುವಿಗೆ 323 ರನ್​ ಬೇಕಿದೆ.

ಟಾಸ್​ ಸೋತ ಕಿವೀಸ್​ ಮೊದಲು ಬ್ಯಾಟಿಂಗ್​ ಮಾಡಿತು. ನ್ಯೂಜಿಲೆಂಡ್ ಅಬ್ಬರದ ಇನ್ನಿಂಗ್ಸ್​ ಮೂಲಕ ದೊಡ್ಡ ಗುರಿ ನೀಡುವ ನಿರೀಕ್ಷೆ ಇತ್ತು. ಆದರೆ ಡಚ್ಚರು ತಮ್ಮ ನಾಯಕನ ಕ್ಷೇತ್ರ ರಕ್ಷಣೆಯ ನಿರ್ಧಾರಕ್ಕೆ ತಕ್ಕಂತೆ ಪ್ರದರ್ಶನ ನೀಡಿದರು. ಅರ್ಹತಾ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ತಂಡವನ್ನು ಮಣಿಸಿ ಆಡುವ 10 ತಂಡಗಳಲ್ಲಿ ಸ್ಥಾನ ಪಡೆದ ತಂಡದ ಸಾಮರ್ಥ್ಯ ಇಂದಿನ ಪಂದ್ಯದಲ್ಲಿ ಕಂಡುಬಂತು.

ನ್ಯೂಜಿಲೆಂಡ್​ನ ಆರಂಭಿಕರಾದ ಡೆವೊನ್ ಕಾನ್ವೆ ಮತ್ತು ವಿಲ್ ಯಂಗ್ ಮೊದಲ ಪವರ್​ ಪ್ಲೇವರೆಗೆ ಉತ್ತಮವಾಗಿ ಕ್ರೀಸ್​ ಹಂಚಿಕೊಂಡು 67 ರನ್​ ಜೊತೆಯಾಟವಾಡಿದರು. ಮೊದಲ ಪಂದ್ಯದಲ್ಲಿ ಶತಕ ದಾಖಲಿಸಿದ್ದ ಕಾನ್ವೆ ಇಂದು 32 ರನ್​ಗೆ ವಿಕೆಟ್​ ಕೊಟ್ಟರು. ಎರಡನೇ ವಿಕೆಟ್​ಗೆ ವಿಲ್ ಯಂಗ್ ಮತ್ತು ರಚಿನ್ ರವೀಂದ್ರ 77 ರನ್​ಗಳ ಜೊತೆಯಾಟ ನೀಡಿದರು. ಕಳೆದ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದ ಯಂಗ್​ 77 ರನ್​ಗಳ ಇನ್ನಿಂಗ್ಸ್​ ಕಟ್ಟಿದರು.

ಕೇನ್​ ವಿಲಿಯಮ್ಸನ್​ ಸ್ಥಾನದಲ್ಲಿ ಆಡುತ್ತಿರುವ ಕರ್ನಾಟಕ ಮೂಲಕ ರಚಿನ್ ರವೀಂದ್ರ (51) ತಮ್ಮ ಎರಡನೇ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಔಟಾದರು. ಡೇರಿಲ್ ಮಿಚೆಲ್ 48 ರನ್​ಗಳ ಇನ್ನಿಂಗ್ಸ್​ ಕಟ್ಟಿದರೆ, ಗ್ಲೆನ್ ಫಿಲಿಪ್ಸ್ (4), ಮಾರ್ಕ್ ಚಾಪ್ಮನ್ (5) ವಿಫಲರಾದರು. ನಾಯಕ ಟಾಮ್ ಲಾಥಮ್ (53) ಮಧ್ಯಮ ಕ್ರಮಾಂಕದಲ್ಲಿ ಅರ್ಧಶತಕ ಗಳಿಸಿದರು.

ಅಂತಿಮವಾಗಿ ಮಿಚೆಲ್ ಸ್ಯಾಂಟ್ನರ್ ಮತ್ತು ಮ್ಯಾಟ್ ಹೆನ್ರಿ ಡಚ್ಚರನ್ನು ಕಾಡಿದರು. ಕೊನೆಯ ಓವರ್‌ನಲ್ಲಿ ಬಾಸ್ ಡಿ ಲೀಡೆ 21 ರನ್​ ಬಿಟ್ಟುಕೊಟ್ಟು ದುಬಾರಿಯಾದರು. ನ್ಯೂಜಿಲೆಂಡ್​ 322 ರನ್​ಪೇರಿಸಿತು.

ನೆದರ್​ಲೆಂಡ್‌​ ಪರ ಏಳು ಆಟಗಾರು ಬೌಲಿಂಗ್​ ಮಾಡಿದರು. ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್ ಮತ್ತು ಪಾಲ್ ವ್ಯಾನ್ ಮೀಕೆರೆನ್ ತಲಾ ಎರಡು ವಿಕೆಟ್ ಕಬಳಿಸಿದರು. ಕಳೆದ ಪಂದ್ಯದಲ್ಲಿ 4 ವಿಕೆಟ್​ ಪಡೆದಿದ್ದ ಬಾಸ್ ಡಿ ಲೀಡೆ 1 ವಿಕೆಟ್​ ಪಡೆದು 64 ರನ್​ ಬಿಟ್ಟುಕೊಟ್ಟು ದುಬಾರಿಯಾದರು.

ಇದನ್ನೂ ಓದಿ: ಏಷ್ಯನ್‌ ಗೇಮ್ಸ್‌ ಪದಕ ವಿಜೇತರೊಂದಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಸಂವಾದ

Last Updated : Oct 9, 2023, 6:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.