ಕ್ರೈಸ್ಟ್‌ಚರ್ಚ್ (ನ್ಯೂಜಿಲೆಂಡ್): ಟಿ20 ವಿಶ್ವಕಪ್‌ಗೂ ಮುನ್ನ ಕಿವೀಸ್ ತಂಡದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಟಿ20 ಕ್ರಿಕೆಟ್‌ಗೆ ಪುನರಾಗಮನ ಮಾಡಲಿದ್ದಾರೆ. ವಿಲಿಯಮ್ಸನ್ 14 ತಿಂಗಳ ನಂತರ ಜನವರಿಯಲ್ಲಿ ಮತ್ತೆ ಟಿ20 ಕ್ರಿಕೆಟ್‌ಗೆ ಮರಳಲಿದ್ದಾರೆ. ಜನವರಿ 12 ರಂದು ಪಾಕಿಸ್ತಾನ ವಿರುದ್ಧದ ಐದು ಟಿ20 ಪಂದ್ಯಗಳ ಸರಣಿಯಲ್ಲಿ 4 ಟಿ20 ಪಂದ್ಯಗಳನ್ನು ಆಡಲಿದ್ದಾರೆ.
ಮಂಡಿರಜ್ಜು ಗಾಯದಿಂದ ಭಾರತದಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಿಂದ ಹೊರಗುಳಿದ ವೇಗದ ಬೌಲರ್ ಮ್ಯಾಟ್ ಹೆನ್ರಿ ಕೂಡ ಪಾಕಿಸ್ತಾನ ವಿರುದ್ಧ ಟಿ20 ಸರಣಿಗೆ ಆಯ್ಕೆ ಆಗಿದ್ದಾರೆ. ಜನವರಿ 12 ರಂದು ಪ್ರಾರಂಭವಾಗುವ ಐದು ಪಂದ್ಯಗಳ ಸರಣಿಗಾಗಿ 13 ಆಟಗಾರರ ನ್ಯೂಜಿಲೆಂಡ್ ತಂಡ ಪ್ರಕಟವಾಗಿದೆ.
-
The KFC T20 Series against Pakistan starts on January 12 at Eden Park. More | https://t.co/PK2adErqGI #NZvPAK pic.twitter.com/aQBCnR5qSb
— BLACKCAPS (@BLACKCAPS) January 2, 2024 " class="align-text-top noRightClick twitterSection" data="
">The KFC T20 Series against Pakistan starts on January 12 at Eden Park. More | https://t.co/PK2adErqGI #NZvPAK pic.twitter.com/aQBCnR5qSb
— BLACKCAPS (@BLACKCAPS) January 2, 2024The KFC T20 Series against Pakistan starts on January 12 at Eden Park. More | https://t.co/PK2adErqGI #NZvPAK pic.twitter.com/aQBCnR5qSb
— BLACKCAPS (@BLACKCAPS) January 2, 2024
ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಅವರು ಪಾಕಿಸ್ತಾನ ಸರಣಿಯು ವಿವಿಧ ಕಾರಣಗಳಿಗಾಗಿ ಮಹತ್ವದ್ದಾಗಿದೆ ಮತ್ತು ಟಿ20 ವಿಶ್ವಕಪ್‌ಗೂ ಪಾಕಿಸ್ತಾನ ಸರಣಿ ಒತ್ತು ನೀಡಿಲಿದೆ ಎಂದಿದ್ದಾರೆ. "ಮ್ಯಾಟ್, ಡೆವೊನ್, ಲಾಕಿ ಮತ್ತು ಕೇನ್ ಅವರನ್ನು ಮರಳಿ ಸ್ವಾಗತಿಸಲು ಸಂತೋಷವಾಗಿದೆ. ಅವರು ತಮ್ಮದೇ ಆದ ನಾಲ್ಕು ಗುಣಮಟ್ಟದ ಆಟಗಾರರು ಮತ್ತು ಅವರ ಕೌಶಲ್ಯ ಮತ್ತು ಅನುಭವವು ನಮ್ಮ ತಂಡವನ್ನು ಬಲಪಡಿಸುತ್ತದೆ. ಟಿ20 ವಿಶ್ವಕಪ್‌ಗೆ ಮೊದಲು ಕೇವಲ ಮೂರು ಟಿ20ಸರಣಿಗಳು ಉಳಿದಿವೆ, ಎಲ್ಲಾ ಪಂದ್ಯಗಳು ನಮ್ಮ ಸಿದ್ಧತೆಗೆ ಪ್ರಮುಖವಾಗಿವೆ" ಎಂದು ಅವರು ಹೇಳಿದರು.
ಟಿ20 ವಿಶ್ವಕಪ್‌ಗೂ ಮುನ್ನ ವಿಲಿಯಮ್ಸನ್ ವಾಪಸ್: 2024ರ ಜೂನ್ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಇಯಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ವಿಶ್ವಕಪ್ ತಯಾರಿಯ ಹಿನ್ನೆಲೆಯಲ್ಲಿ ಅನುಭವಿ ಆಟಗಾರ ಕೇನ್ ಅವರ ವಾಪಾಸಾತಿ ತಂಡಕ್ಕೆ ಇನ್ನಷ್ಟೂ ಬಲ ನೀಡಿದೆ. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ಗೆ ತರಾತುರಿಯಲ್ಲಿ ಚೇತರಿಸಿಕೊಂಡು, ಆರಂಭದ ಪಂದ್ಯಗಳಿಂದ ವಿಲಿಯಮ್ಸನ್ ಹೊರಗುಳಿದಿದ್ದರು. ಕೊನೆಯ ಪ್ರಮುಖ ಪಂದ್ಯಗಳಲ್ಲಿ ಮೈದಾನಕ್ಕಿಳಿದಿದ್ದರು. ಮೂರನೇ ಪಂದ್ಯಕ್ಕೆ ವಿಲಿಯಮ್ಸನ್ ಅಲಭ್ಯರಾಗಿರಲಿದ್ದಾರೆ. ಆದರೆ, ಆ ಸ್ಥಾನಕ್ಕೆ ಯುವ ಆಟಗಾರ ರಚಿನ್ ರವೀಂದ್ರ ಅವರನ್ನು ಆಯ್ಕೆ ಮಾಡಲಾಗಿಲ್ಲ.
ನ್ಯೂಜಿಲೆಂಡ್ ಟಿ20 ತಂಡ: ಕೇನ್ ವಿಲಿಯಮ್ಸನ್ (ನಾಯಕ) (ಪಂದ್ಯಗಳು 1, 2, 4 ಮತ್ತು 5), ಫಿನ್ ಅಲೆನ್, ಮಾರ್ಕ್ ಚಾಪ್ಮನ್, ಜೋಶ್ ಕ್ಲಾರ್ಕ್ಸನ್ (ಪಂದ್ಯ 3 ಮಾತ್ರ), ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಲಾಕಿ ಫರ್ಗುಸನ್ (ಪಂದ್ಯ 3, 4 ಮತ್ತು 5 ), ಮ್ಯಾಟ್ ಹೆನ್ರಿ, ಆಡಮ್ ಮಿಲ್ನೆ, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಬೆನ್ ಸಿಯರ್ಸ್ (ಪಂದ್ಯಗಳು 1 ಮತ್ತು 2), ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಇಶ್ ಸೋಧಿ, ಟಿಮ್ ಸೌಥಿ
ಇದನ್ನೂ ಓದಿ: ಎರಡನೇ ಟೆಸ್ಟ್ನಲ್ಲಿ ಆಡುತ್ತಾರಾ ರವೀಂದ್ರ ಜಡೇಜಾ: ಕ್ಯಾಪ್ಟನ್ ರೋಹಿತ್ ಹೇಳಿದ್ದೇನು?