ಸೌತಾಂಪ್ಟನ್: ಕೈಲ್ ಜೇಮಿಸನ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್(WTC) ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 217 ರನ್ಗಳಿಗೆ ಆಲೌಟ್ ಆಗಿದೆ.
-
New Zealand lose their openers in the final session as they go to stumps on 101/2, trailing India by 116 runs.#WTC21 Final | #INDvNZ | https://t.co/384ZivHQu3 pic.twitter.com/QUv88e6OXB
— ICC (@ICC) June 20, 2021 " class="align-text-top noRightClick twitterSection" data="
">New Zealand lose their openers in the final session as they go to stumps on 101/2, trailing India by 116 runs.#WTC21 Final | #INDvNZ | https://t.co/384ZivHQu3 pic.twitter.com/QUv88e6OXB
— ICC (@ICC) June 20, 2021New Zealand lose their openers in the final session as they go to stumps on 101/2, trailing India by 116 runs.#WTC21 Final | #INDvNZ | https://t.co/384ZivHQu3 pic.twitter.com/QUv88e6OXB
— ICC (@ICC) June 20, 2021
146 ರನ್ಗಳೊಂದಿಗೆ 3ನೇ ದಿನದ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಕೈಲ್ ಜೇಮಿಸನ್ ದಿನದ 3ನೇ ಓವರ್ನಲ್ಲಿ 44 ರನ್ಗಳಿಸಿದ್ದ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆದರು. ನಂತರ ಬಂದ ಬ್ಯಾಟ್ಸ್ಮನ್ಗಳು ಕಿವೀಸ್ ಬೌಲರ್ಗಳು ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ.
ಕೊಹ್ಲಿ ನಂತರ ಬಂದ ರಿಷಭ್ ಪಂತ್ 19 ಎಸೆತಗಳಲ್ಲಿ 4 ರನ್ಗಳಿಸಿ ಜೇಮಿಸನ್ಗೆ 3ನೇ ಬಲಿಯಾದರು. 117 ಎಸೆಗಳಲ್ಲಿ 49 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಉಪನಾಯಕ ಅಜಿಂಕ್ಯ ರಹಾನೆ, ನೀಲ್ ವ್ಯಾಗ್ನರ್ ಬೌಲಿಂಗ್ನಲ್ಲಿ ಲ್ಯಾಥಮ್ಗೆ ಕ್ಯಾಚ್ ನೀಡಿ ಔಟಾದರು.
ನಂತರ ಬಂದ ಅಶ್ವಿನ್ (22) ಜಡೇಜಾ ಜೊತೆಗೂಡಿ 23 ರನ್ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಅವರು 22 ರನ್ಗಳಿಸಿದ್ದ ವೇಳೆ ಅನುಭವಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು. ಭೋಜನ ವಿರಾಮಕ್ಕೆ ಮುನ್ನ 211ಕ್ಕೆ 7 ಭಾರತ ತಂಡ, ನಂತರ ಕೇವಲ 6 ರನ್ ಗಳಿಸುವಷ್ಟರಲ್ಲಿ ಕೊನೇಯ 3 ವಿಕೆಟ್ ಕಳೆದುಕೊಳ್ಳುವ ಮೂಲಕ ಕೇವಲ 217 ರನ್ಗೆ ಆಲೌಟ್ ಆಯಿತು.
ನ್ಯೂಜಿಲ್ಯಾಂಡ್ ಪರ ಕೈಲ್ ಜೆಮೀಸನ್ 31ಕ್ಕೆ 5 ವಿಕೆಟ್ ಪಡೆದರೆ, ಇವರಿಗೆ ಸಾಥ್ ನೀಡಿದ ವ್ಯಾಗ್ನರ್ ಮತ್ತು ಬೌಲ್ಟ್ ತಲಾ 2 ವಿಕೆಟ್ ಹಾಗೂ ಸೌಥಿ ಒಂದು ವಿಕೆಟ್ ಪಡೆದರು.
ಭಾರತ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದ ಬಳಿಕ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಎಚ್ಚರಿಕೆಯ ಆರಂಭ ಪಡೆಯಿತು. ಟಾಮ್ ಲಾಥಮ್ ಮತ್ತು ಡೆವೊನ್ ಕಾನ್‌ವೇ ಜೋಡಿ ಮೊದಲ ವಿಕೆಟ್‌ಗೆ 70ರನ್ಗಳ ಕಾಣಿಕೆ ನೀಡಿತು. ಟಾಮ್ ಲಾಥಮ್ 30 ರನ್ಗಳಿಸಿದಾಗ ಅಶ್ವಿನ್ ಬೌಲಿಂಗ್ನಲ್ಲಿ ವಿರಾಟ್ ಕೊಹ್ಲಿ ಗೆ ಕ್ಯಾಚ್ ನೀಡಿ ಪೆವಲಿಯನ್ ಸೇರಿದರು.
ನಂತರ ಕಾನ್‌ವೇ ಜೊತೆಗೂಡಿದ ನಾಯಕ ವಿಲಿಯಮ್ಸನ್ ಕೂಡ ಎಚ್ಚರಿಕೆಯ ಆಟದ ಮೊರೆ ಹೋದರು. ಈ ಜೋಡಿ ಎರಡನೇ ವಿಕೆಟ್‌ಗೆ 31 ರನ್ ಕಲೆಹಾಕಿತು. ಕಾನ್‌ವೇ 54 ರನ್ ಗಳಿಸಿದಾಗ ಇಶಾಂತ್ ಶರ್ಮಾ ಅವರ ವಿಕೆಟ್ ಕಬಳಿಸಿದರು. ಈ ಮೂಲಕ 3ನೇ ದಿನದ ಅಂತ್ಯದ ವೇಳೆಗೆ ನ್ಯೂಜಿಲ್ಯಾಂಡ್ ತಂಡ 49 ಓವರ್‌ಗಳಲ್ಲಿ 2 ವಿಕೆಟ್‌ಗೆ 101 ರನ್ಗಳಿಸಿದೆ. ವಿಲಿಯಮ್ಸನ್ 12* ರನ್, ಟೇಲರ್ 0*, ರನ್ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಸ್ಕೋರ್ ವಿವರ:
ಭಾರತ: 92.1 ಓವರ್‌ಗಳಲ್ಲಿ 217 (ವಿರಾಟ್ ಕೊಹ್ಲಿ 44, ಅಜಿಂಕ್ಯ ರಹಾನೆ 49, ಆರ್.ಅಶ್ವಿನ್ 22, ಕೈಲ್ ಜೇಮಿಸನ್ 31ಕ್ಕೆ 5, ಟ್ರೆಂಟ್ ಬೌಲ್ಟ್ 47ಕ್ಕೆ 2, ನೀಲ್ ವಾಗ್ನರ್ 40ಕ್ಕೆ 2)
ನ್ಯೂಜಿಲೆಂಡ್: 49 ಓವರ್‌ಗಳಲ್ಲಿ 2 ವಿಕೆಟ್‌ಗೆ 101 (ಟಾಮ್ ಲಾಥಮ್ 30, ಡೆವೊನ್ ಕಾನ್‌ವೇ 54, ಇಶಾಂತ್ ಶರ್ಮ 19ಕ್ಕೆ 1, ಆರ್.ಅಶ್ವಿನ್ 20ಕ್ಕೆ 1).