ETV Bharat / sports

ಕಿವೀಸ್​ಗೆ ಐತಿಹಾಸಿಕ ಗೆಲುವು: 1 ರನ್​ನಿಂದ ಗೆದ್ದು ಸರಣಿ ಸಮಬಲ ಸಾಧಿಸಿದ ನ್ಯೂಜಿಲೆಂಡ್​

author img

By

Published : Feb 28, 2023, 11:23 AM IST

146 ವರ್ಷದ ಟೆಸ್ಟ್​ ಇತಿಹಾಸದಲ್ಲಿ ಸ್ಮರಣೀಯ ಗೆಲುವು ದಾಖಲಿಸಿದ ಕಿವೀಸ್​ - ಇಂಗ್ಲೆಂಡ್​ ವಿರುದ್ಧ 1 ರನ್​ ರೋಚಕ ಜಯ - ಟೆಸ್ಟ್​ ಇತಿಹಾಸದಲ್ಲಿ ಎರಡನೇ ಬಾರಿಗೆ 1ರನ್​ನ ರೋಚಕ ಗೆಲುವು

new Zealand win against england
ಕಿವೀಸ್​ಗೆ ಐತಿಹಾಸಿಕ ಗೆಲುವು

ವೆಲ್ಲಿಂಗ್​ಟನ್​ (ನ್ಯೂಜಿಲೆಂಡ್​): ತವರು ನೆಲದಲ್ಲಿ ಮೊದಲ ಪಂದ್ಯದಲ್ಲಿ ಸೋತು ಮುಖಭಂಗ ಅನುಭವಿಸಿದ್ದ ಕಿವೀಸ್​ ಎರಡನೇ ಪಂದ್ಯವನ್ನು ರೋಚಕವಾಗಿ ಗೆದ್ದಿದೆ. ಎರಡನೇ ಪಂದ್ಯದಲ್ಲೂ ಸೋಲಿನ ಸನಿಹದಲ್ಲಿದ್ದ ನ್ಯೂಜಿಲೆಂಡ್​ಗೆ ನೀಲ್​ ವೆಗ್ನರ್​ ಬೌಲಿಂಗ್​ ಆಸರೆಯಾಯಿತು. ನಾಯಕ ಸೌಥಿ ವೆಗ್ನರ್​ಗೆ ಸಾಥ್​​ ನೀಡಿದರು. ವೇಗಿ ಜೋಡಿ 7 ವಿಕೆಟ್​ ಪಡೆದು ಆಂಗ್ಲರನ್ನು ಗೆಲುವಿನ ಒಂದು ರನ್​ಗೂ ಮುಂಚೆ ಕಟ್ಟಿಹಾಕಿ ವಿಜಯದ ನಗೆ ಬೀರಿದರು. ಎರಡು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ತವರಿನಲ್ಲಿ ಕ್ಲೀನ್​ ಸ್ವೀಪ್​ ಆಗುವುದನ್ನು ತಪ್ಪಿಸಿಕೊಂಡ ತಂಡ 1-1 ರಲ್ಲಿ ಸಿರೀಸನ್ನು ಸಮಬಲ ಮಾಡಿಕೊಂಡಿತು.

ಐತಿಹಾಸಿಕ ಗೆಲುವು: ಅಂತಾರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್​ನ 146 ವರ್ಷಗಳ ​ಇತಿಹಾಸದಲ್ಲಿ 2494 ಪಂದ್ಯಗಳು ನಡೆದಿದ್ದು, ಅದರಲ್ಲಿ ಫಾಲೋ ಆನ್​ ಹೇರಿದ ಮೇಲೆಯೂ ಗೆದ್ದ ಮೂರನೇ ಟೀಂ ನ್ಯೂಜಿಲೆಂಡ್​ ಆಗಿದ್ದು, ಈ ರೀತಿ ಗೆಲುವು ದಾಖಲಾದ ನಾಲ್ಕನೇ ಪಂದ್ಯವಾಗಿದೆ. ಇದಕ್ಕೂ ಮೊದಲು ಭಾರತ ಮತ್ತು ಇಂಗ್ಲೆಂಡ್​ ತಂಡಗಳು ಈ ರೀತಿಯ ಗೆಲುವು ಸಾಧಿಸಿದ್ದವು. ಟೆಸ್ಟ್​ನಲ್ಲಿ ಒಂದು ರನ್​ ಅಂತರದಲ್ಲಿ ಗೆಲುವು ಸಾಧಿಸಿದ ಎರಡನೇ ಪಂದ್ಯ ಇದಾಗಿದೆ.

ನ್ಯೂಜಿಲೆಂಡ್​ ನೆಲದಲ್ಲಿ 2017ರ ನಂತರ ಇಂಗ್ಲೆಂಡ್​ ಮತ್ತೆ ಸರಣಿ ಗೆಲ್ಲುವ ಅವಕಾಶವನ್ನು ಹೊಂದಿತ್ತು ಆದರೆ, ಒಂದು ರನ್​ನ ಸೋಲು ಆ ಕನಸನ್ನು ಭಗ್ನಗೊಳಿಸಿತು. ಇಂಗ್ಲೆಂಡ್​ ಸೋಲನುಭವಿಸಿದ್ದರಿಂದ ಸರಣಿ 1-1 ರಿಂದ ಸಮಬಲವಾಯಿತು. 19 ವರ್ಷಗಳ ಹಿಂದೆ ನ್ಯೂಜಿಲೆಂಡ್​ ನೆಲದಲ್ಲಿ ಕ್ಲೀನ್​ ಸ್ವೀಪ್​ ಮಾಡಿದ ಸಾಧನೆಯನ್ನು ಮತ್ತೆ ಮಾಡುವ ಬಯಕೆಯೂ ಆಂಗ್ಲರಿಗೆ ಈಡೇರಲಿಲ್ಲ.

ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಳ್ಳುವ ಮೂಲಕ ಕಿವೀಸ್​ ತಪ್ಪು ನಿರ್ಧಾರ ತೆಗೆದುಕೊಂಡಿತ್ತು. ಆತಿಥೆಯರನ್ನು ಮನಸೋ ಇಚ್ಛೆ ದಂಡಿಸಿದ ಆಂಗ್ಲರು 435 ರನ್​ ಮೊದಲ ಇನ್ನಿಂಗ್ಸ್​ಗೆ ಕಲೆಹಾಕಿದ್ದರು. ಇದಕ್ಕೆ ಉತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್​ ಸತತ ಕುಸಿತ ಕಂಡು 209 ಆಲ್​ ಔಟ್​ ಆಯಿತು. 226 ರನ್​​ ಹಿನ್ನಡೆಯಿಂದ ಎರಡನೇ ಇನ್ನಿಂಗ್ಸ್​ನಲ್ಲಿ ಫಾಲೋ ಆನ್​ ಪಡೆದ ನ್ಯೂಜಿಲೆಂಡ್ ಭರ್ಜರಿ ಬ್ಯಾಟ್​ ಬೀಸಿ 483 ರನ್​ ಗಳಿಸಿತು. ಇಂಗ್ಲೆಂಡ್​ಗೆ 258 ರನ್​ಗಳ ಗುರಿ ನೀಡಿತ್ತು. 256 ರನ್​ ಗಳಿಸುವಷ್ಟರಲ್ಲಿ ಆಂಗ್ಲರ ಎಲ್ಲಾ ವಿಕೆಟ್​ ಕಬಳಿಸುವಲ್ಲಿ ಬ್ಲ್ಯಾಕ್​ಕ್ಯಾಪ್ಸ್ ಯಶಸ್ವಿಯಾದರು. ​

  • Just the fourth time in the history of Test cricket that a team has won after being forced to follow on 💥

    All the records that fell on a thrilling final day of the second #NZvENG Test from Wellington 👇https://t.co/hUFf50F0LS

    — ICC (@ICC) February 28, 2023 " class="align-text-top noRightClick twitterSection" data="

Just the fourth time in the history of Test cricket that a team has won after being forced to follow on 💥

All the records that fell on a thrilling final day of the second #NZvENG Test from Wellington 👇https://t.co/hUFf50F0LS

— ICC (@ICC) February 28, 2023 ">

ಕೊನೆಯ ದಿನವಾದ ಇಂದು ಇಂಗ್ಲೆಂಡ್​ ಗೆಲುವಿನ ಸಮಯದಲ್ಲಿ ಎಡವಿತು. ಕೇವಲ ಒಂದು ರನ್​ ಗಳಿಸುವ ಮೊದಲು ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸರಣಿಯನ್ನು ಹಂಚಿಕೊಂಡಿತು. ಜೋ ರೂಟ್​ 95 ರನ್​ ಗಳಿಸಿದ್ದು, ಬಿಟ್ಟರೆ ಮತ್ತಾರು ಅರ್ಧಶತಕ ತಲುಪಲಿಲ್ಲ. ನೀಲ್ ವ್ಯಾಗ್ನರ್ ಬಾಲ್​ನಲ್ಲಿ 1 ರನ್​ ಗಳಿಸಲು ಮುಂದಾದ ಜೇಮ್ಸ್ ಆಂಡರ್ಸನ್ ಕ್ಯಾಚ್​ ಕೊಟ್ಟು ವಿಕೆಟ್ ಒಪ್ಪಿಸಿದರು. ​

ಮೊದಲ ಇನ್ನಿಂಗ್ಸ್​​ ಇಂಗ್ಲೆಂಡ್​ ಪ್ರಾಬಲ್ಯ: ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಆಂಗ್ಲರು ರೂಟ್​ ಮತ್ತು ಹ್ಯಾರಿ ಬ್ರೂಕ್​ ಅವರ 150+ ರನ್​ನ ಕೊಡುಗೆಯಿಂದ ಬೃಹತ್​ ಮೊತ್ತ ಕಲೆಹಾಕಿತು. 8 ವಿಕೆಟ್​ 435 ರನ್​ ಗಳಿಸುತ್ತದ್ದಂತೆ ಡಿಕ್ಲೆರ್​ ಘೊಷಣೆ ಮಾಡಿತು. 436 ರನ್​ ಎದುರಿಸಲು ನ್ಯೂಜಿಲೆಂಡ್​ ಕಣಕ್ಕಿಳಿದು ಹೆಚ್ಚು ಕಮ್ಮಿ ಪೆವಿಲಿಯನ್​ ಪರೇಡ್​ ನಡೆಸಿತು. ನಾಯಕ ಸೌಥಿಯ ಹೋರಾಟದಿಂದ 200ರ ಗಡಿ ಮುಟ್ಟಿತು. 209ಕ್ಕೆ ಆಲ್​ಔಟ್​ ಆದ ನ್ಯೂಜಿಲೆಂಡ್​ 226 ರನ್​ಗಳ ಹಿನ್ನಡೆ ಅನುಭವಿಸಿತ್ತು. ಇದರಿಂದ ಆಗ್ಲರು ಫಾಲೋ ಆನ್ ಅಸ್ತ್ರವನ್ನು ಕಿವೀಸ್​ ಮೇಲೆ ಬಳಸಿದರು.

ಫಾಲೋ ಆನ್​ನಲ್ಲಿ 200+ ಲೀಡ್​: 226ರನ್​ಗಳ ಹಿನ್ನಡೆಯಲ್ಲಿದ್ದ ನ್ಯೂಜಿಲೆಂಡ್​ ಮತ್ತೆ 200ರ ಒಳಗೆ ಆಲ್​ಔಟ್​ ಆಗಿ ಆಂಗ್ಲರು ಇನ್ನಿಂಗ್ಸ್​ ಸಹಿತ ಸರಣಿ ಕ್ಲೀನ್​ ಸ್ವೀಪ್​ ಮಾಡುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಕೇನ್ ವಿಲಿಯಮ್ಸನ್ (132) ಶತಕ ಮತ್ತು ಟಾಮ್ ಬ್ಲಂಡೆಲ್ (90), ಟಾಮ್ ಲ್ಯಾಥಮ್ (83), ಡೇರಿಲ್ ಮಿಚೆಲ್ (54) ಅವರ ಅರ್ಧಶತಕದ ಆಟ ಕಿವೀಸ್​ ಪಡೆಯನ್ನು ಭದ್ರ ಪಡಿಸಿತು. ಫಾಲೋ ಆನ್​ನಲ್ಲಿ ಹಿನ್ನಡೆಯಲ್ಲಿದ್ದ ನ್ಯೂಜಿಲೆಂಡ್​ 257ರನ್​ಗಳ ಮುನ್ನಡೆ ಸಾಧಿಸಿತು. ಆಂಗ್ಲರಿಗೆ ಸರಣಿ ಗೆಲ್ಲಲು 258ರನ್​ಗಳ ಗುರಿ ಇತ್ತು.

ಇದನ್ನು ಬೆನ್ನು ಹತ್ತಿದ ಇಂಗ್ಲೆಂಡ್​ನ್ನು ನೀಲ್ ವ್ಯಾಗ್ನರ್ ಮತ್ತು ಟಿಮ್ ಸೌಥಿ ಕಾಡಿದರು, ಕ್ರಮವಾಗಿ 4 ಮತ್ತು 3 ವಿಕೆಟ್​ ಕಬಳಿಸಿದರು. ಜೋ ರೂಟ್ (95) ಮೊದಲ ಇನ್ನಿಂಗ್ಸ್​ನ ಫಾರ್ಮ್​ನ್ನು ಮುಂದುವರೆಸಿದರು. ಬಾಕಿ ಎಲ್ಲರೂ ಒಂದು ದಿನದಲ್ಲಿ 200+ ರನ್​ ಗಳಿಸುವ ತರಾತುರಿಯಲ್ಲಿ ವಿಕೆಟ್​ ಒಪ್ಪಿಸಿದರು. ಆದರೂ ಗೆಲುವು ಇಂಗ್ಲೆಂಡ್​ಗೆ ಕಠಿಣ ಆಗಿರಲಿಲ್ಲ. 251 ಆಗಿದ್ದಾಗ ಟಿಮ್​ ಸೌಥಿ 35 ರನ್​ ಗಳಿಸಿ 9ನೇ ವಿಕೆಟ್ ಆಗಿ ಔಟ್​ ಆದರು. ನಂತರ ಅನುಭವಿ ಜೇಮ್ಸ್ ಆಂಡರ್ಸನ್ ಕ್ರೀಸ್​ಗೆ ಬಂದಿದ್ದರು. 6 ಬಾಲ್​ನಲ್ಲಿ ಒಂದು ಫೋರ್​ ನಿಂದ 4 ರನ್​ ಗಳಿಸದ್ದ ಆಂಡರ್ಸನ್ ನೀಡಿದ ಕ್ಯಾಚ್​ ಕಿವೀಸ್​ನ ಐತಿಹಾಸಿಕ ಗೆಲುವಿಗೆ ಕಾರಣವಾಯಿತು.

ಸಂಕ್ಷಿಪ್ತ ಸ್ಕೋರುಗಳು : ಇಂಗ್ಲೆಂಡ್ 435/8 ಡಿಕ್ಎಲ್. (ಹ್ಯಾರಿ ಬ್ರೂಕ್ 186, ಜೋ ರೂಟ್ 153*; ಮ್ಯಾಟ್ ಹೆನ್ರಿ 4-100, ಮೈಕಲ್ ಬ್ರೇಸ್‌ವೆಲ್ 2-54) & 256 (ಜೋ ರೂಟ್ 95, ಬೆನ್ ಫೋಕ್ಸ್ 35; ನೀಲ್ ವ್ಯಾಗ್ನರ್ 4-62, ಟಿಮ್ ಸೌಥಿ 3-45) ನ್ಯೂಜಿಲೆಂಡ್ 209 ವಿರುದ್ಧ ಸೋತರು (ಟಿಮ್ ಸೌಥಿ 73, ಟಾಮ್ ಬ್ಲಂಡೆಲ್ 38; ಸ್ಟುವರ್ಟ್ ಬ್ರಾಡ್ 4-61, ಜೇಮ್ಸ್ ಆಂಡರ್ಸನ್ 3-37) & 483 (ಕೇನ್ ವಿಲಿಯಮ್ಸನ್ 132, ಟಾಮ್ ಬ್ಲಂಡೆಲ್ 90; ಜ್ಯಾಕ್ ಲೀಚ್ 5-157)

ಫಲಿತಾಂಶ: ನ್ಯೂಜಿಲೆಂಡ್​ಗೆ 1 ರನ್‌ನ ಗೆಲುವು

ಇದನ್ನೂ ಓದಿ: ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್​ ಪರ ಅತೀ ಹೆಚ್ಚು ಟೆಸ್ಟ್​ ಸ್ಕೋರರ್​

ವೆಲ್ಲಿಂಗ್​ಟನ್​ (ನ್ಯೂಜಿಲೆಂಡ್​): ತವರು ನೆಲದಲ್ಲಿ ಮೊದಲ ಪಂದ್ಯದಲ್ಲಿ ಸೋತು ಮುಖಭಂಗ ಅನುಭವಿಸಿದ್ದ ಕಿವೀಸ್​ ಎರಡನೇ ಪಂದ್ಯವನ್ನು ರೋಚಕವಾಗಿ ಗೆದ್ದಿದೆ. ಎರಡನೇ ಪಂದ್ಯದಲ್ಲೂ ಸೋಲಿನ ಸನಿಹದಲ್ಲಿದ್ದ ನ್ಯೂಜಿಲೆಂಡ್​ಗೆ ನೀಲ್​ ವೆಗ್ನರ್​ ಬೌಲಿಂಗ್​ ಆಸರೆಯಾಯಿತು. ನಾಯಕ ಸೌಥಿ ವೆಗ್ನರ್​ಗೆ ಸಾಥ್​​ ನೀಡಿದರು. ವೇಗಿ ಜೋಡಿ 7 ವಿಕೆಟ್​ ಪಡೆದು ಆಂಗ್ಲರನ್ನು ಗೆಲುವಿನ ಒಂದು ರನ್​ಗೂ ಮುಂಚೆ ಕಟ್ಟಿಹಾಕಿ ವಿಜಯದ ನಗೆ ಬೀರಿದರು. ಎರಡು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ತವರಿನಲ್ಲಿ ಕ್ಲೀನ್​ ಸ್ವೀಪ್​ ಆಗುವುದನ್ನು ತಪ್ಪಿಸಿಕೊಂಡ ತಂಡ 1-1 ರಲ್ಲಿ ಸಿರೀಸನ್ನು ಸಮಬಲ ಮಾಡಿಕೊಂಡಿತು.

ಐತಿಹಾಸಿಕ ಗೆಲುವು: ಅಂತಾರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್​ನ 146 ವರ್ಷಗಳ ​ಇತಿಹಾಸದಲ್ಲಿ 2494 ಪಂದ್ಯಗಳು ನಡೆದಿದ್ದು, ಅದರಲ್ಲಿ ಫಾಲೋ ಆನ್​ ಹೇರಿದ ಮೇಲೆಯೂ ಗೆದ್ದ ಮೂರನೇ ಟೀಂ ನ್ಯೂಜಿಲೆಂಡ್​ ಆಗಿದ್ದು, ಈ ರೀತಿ ಗೆಲುವು ದಾಖಲಾದ ನಾಲ್ಕನೇ ಪಂದ್ಯವಾಗಿದೆ. ಇದಕ್ಕೂ ಮೊದಲು ಭಾರತ ಮತ್ತು ಇಂಗ್ಲೆಂಡ್​ ತಂಡಗಳು ಈ ರೀತಿಯ ಗೆಲುವು ಸಾಧಿಸಿದ್ದವು. ಟೆಸ್ಟ್​ನಲ್ಲಿ ಒಂದು ರನ್​ ಅಂತರದಲ್ಲಿ ಗೆಲುವು ಸಾಧಿಸಿದ ಎರಡನೇ ಪಂದ್ಯ ಇದಾಗಿದೆ.

ನ್ಯೂಜಿಲೆಂಡ್​ ನೆಲದಲ್ಲಿ 2017ರ ನಂತರ ಇಂಗ್ಲೆಂಡ್​ ಮತ್ತೆ ಸರಣಿ ಗೆಲ್ಲುವ ಅವಕಾಶವನ್ನು ಹೊಂದಿತ್ತು ಆದರೆ, ಒಂದು ರನ್​ನ ಸೋಲು ಆ ಕನಸನ್ನು ಭಗ್ನಗೊಳಿಸಿತು. ಇಂಗ್ಲೆಂಡ್​ ಸೋಲನುಭವಿಸಿದ್ದರಿಂದ ಸರಣಿ 1-1 ರಿಂದ ಸಮಬಲವಾಯಿತು. 19 ವರ್ಷಗಳ ಹಿಂದೆ ನ್ಯೂಜಿಲೆಂಡ್​ ನೆಲದಲ್ಲಿ ಕ್ಲೀನ್​ ಸ್ವೀಪ್​ ಮಾಡಿದ ಸಾಧನೆಯನ್ನು ಮತ್ತೆ ಮಾಡುವ ಬಯಕೆಯೂ ಆಂಗ್ಲರಿಗೆ ಈಡೇರಲಿಲ್ಲ.

ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಳ್ಳುವ ಮೂಲಕ ಕಿವೀಸ್​ ತಪ್ಪು ನಿರ್ಧಾರ ತೆಗೆದುಕೊಂಡಿತ್ತು. ಆತಿಥೆಯರನ್ನು ಮನಸೋ ಇಚ್ಛೆ ದಂಡಿಸಿದ ಆಂಗ್ಲರು 435 ರನ್​ ಮೊದಲ ಇನ್ನಿಂಗ್ಸ್​ಗೆ ಕಲೆಹಾಕಿದ್ದರು. ಇದಕ್ಕೆ ಉತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್​ ಸತತ ಕುಸಿತ ಕಂಡು 209 ಆಲ್​ ಔಟ್​ ಆಯಿತು. 226 ರನ್​​ ಹಿನ್ನಡೆಯಿಂದ ಎರಡನೇ ಇನ್ನಿಂಗ್ಸ್​ನಲ್ಲಿ ಫಾಲೋ ಆನ್​ ಪಡೆದ ನ್ಯೂಜಿಲೆಂಡ್ ಭರ್ಜರಿ ಬ್ಯಾಟ್​ ಬೀಸಿ 483 ರನ್​ ಗಳಿಸಿತು. ಇಂಗ್ಲೆಂಡ್​ಗೆ 258 ರನ್​ಗಳ ಗುರಿ ನೀಡಿತ್ತು. 256 ರನ್​ ಗಳಿಸುವಷ್ಟರಲ್ಲಿ ಆಂಗ್ಲರ ಎಲ್ಲಾ ವಿಕೆಟ್​ ಕಬಳಿಸುವಲ್ಲಿ ಬ್ಲ್ಯಾಕ್​ಕ್ಯಾಪ್ಸ್ ಯಶಸ್ವಿಯಾದರು. ​

  • Just the fourth time in the history of Test cricket that a team has won after being forced to follow on 💥

    All the records that fell on a thrilling final day of the second #NZvENG Test from Wellington 👇https://t.co/hUFf50F0LS

    — ICC (@ICC) February 28, 2023 " class="align-text-top noRightClick twitterSection" data=" ">

ಕೊನೆಯ ದಿನವಾದ ಇಂದು ಇಂಗ್ಲೆಂಡ್​ ಗೆಲುವಿನ ಸಮಯದಲ್ಲಿ ಎಡವಿತು. ಕೇವಲ ಒಂದು ರನ್​ ಗಳಿಸುವ ಮೊದಲು ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸರಣಿಯನ್ನು ಹಂಚಿಕೊಂಡಿತು. ಜೋ ರೂಟ್​ 95 ರನ್​ ಗಳಿಸಿದ್ದು, ಬಿಟ್ಟರೆ ಮತ್ತಾರು ಅರ್ಧಶತಕ ತಲುಪಲಿಲ್ಲ. ನೀಲ್ ವ್ಯಾಗ್ನರ್ ಬಾಲ್​ನಲ್ಲಿ 1 ರನ್​ ಗಳಿಸಲು ಮುಂದಾದ ಜೇಮ್ಸ್ ಆಂಡರ್ಸನ್ ಕ್ಯಾಚ್​ ಕೊಟ್ಟು ವಿಕೆಟ್ ಒಪ್ಪಿಸಿದರು. ​

ಮೊದಲ ಇನ್ನಿಂಗ್ಸ್​​ ಇಂಗ್ಲೆಂಡ್​ ಪ್ರಾಬಲ್ಯ: ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಆಂಗ್ಲರು ರೂಟ್​ ಮತ್ತು ಹ್ಯಾರಿ ಬ್ರೂಕ್​ ಅವರ 150+ ರನ್​ನ ಕೊಡುಗೆಯಿಂದ ಬೃಹತ್​ ಮೊತ್ತ ಕಲೆಹಾಕಿತು. 8 ವಿಕೆಟ್​ 435 ರನ್​ ಗಳಿಸುತ್ತದ್ದಂತೆ ಡಿಕ್ಲೆರ್​ ಘೊಷಣೆ ಮಾಡಿತು. 436 ರನ್​ ಎದುರಿಸಲು ನ್ಯೂಜಿಲೆಂಡ್​ ಕಣಕ್ಕಿಳಿದು ಹೆಚ್ಚು ಕಮ್ಮಿ ಪೆವಿಲಿಯನ್​ ಪರೇಡ್​ ನಡೆಸಿತು. ನಾಯಕ ಸೌಥಿಯ ಹೋರಾಟದಿಂದ 200ರ ಗಡಿ ಮುಟ್ಟಿತು. 209ಕ್ಕೆ ಆಲ್​ಔಟ್​ ಆದ ನ್ಯೂಜಿಲೆಂಡ್​ 226 ರನ್​ಗಳ ಹಿನ್ನಡೆ ಅನುಭವಿಸಿತ್ತು. ಇದರಿಂದ ಆಗ್ಲರು ಫಾಲೋ ಆನ್ ಅಸ್ತ್ರವನ್ನು ಕಿವೀಸ್​ ಮೇಲೆ ಬಳಸಿದರು.

ಫಾಲೋ ಆನ್​ನಲ್ಲಿ 200+ ಲೀಡ್​: 226ರನ್​ಗಳ ಹಿನ್ನಡೆಯಲ್ಲಿದ್ದ ನ್ಯೂಜಿಲೆಂಡ್​ ಮತ್ತೆ 200ರ ಒಳಗೆ ಆಲ್​ಔಟ್​ ಆಗಿ ಆಂಗ್ಲರು ಇನ್ನಿಂಗ್ಸ್​ ಸಹಿತ ಸರಣಿ ಕ್ಲೀನ್​ ಸ್ವೀಪ್​ ಮಾಡುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಕೇನ್ ವಿಲಿಯಮ್ಸನ್ (132) ಶತಕ ಮತ್ತು ಟಾಮ್ ಬ್ಲಂಡೆಲ್ (90), ಟಾಮ್ ಲ್ಯಾಥಮ್ (83), ಡೇರಿಲ್ ಮಿಚೆಲ್ (54) ಅವರ ಅರ್ಧಶತಕದ ಆಟ ಕಿವೀಸ್​ ಪಡೆಯನ್ನು ಭದ್ರ ಪಡಿಸಿತು. ಫಾಲೋ ಆನ್​ನಲ್ಲಿ ಹಿನ್ನಡೆಯಲ್ಲಿದ್ದ ನ್ಯೂಜಿಲೆಂಡ್​ 257ರನ್​ಗಳ ಮುನ್ನಡೆ ಸಾಧಿಸಿತು. ಆಂಗ್ಲರಿಗೆ ಸರಣಿ ಗೆಲ್ಲಲು 258ರನ್​ಗಳ ಗುರಿ ಇತ್ತು.

ಇದನ್ನು ಬೆನ್ನು ಹತ್ತಿದ ಇಂಗ್ಲೆಂಡ್​ನ್ನು ನೀಲ್ ವ್ಯಾಗ್ನರ್ ಮತ್ತು ಟಿಮ್ ಸೌಥಿ ಕಾಡಿದರು, ಕ್ರಮವಾಗಿ 4 ಮತ್ತು 3 ವಿಕೆಟ್​ ಕಬಳಿಸಿದರು. ಜೋ ರೂಟ್ (95) ಮೊದಲ ಇನ್ನಿಂಗ್ಸ್​ನ ಫಾರ್ಮ್​ನ್ನು ಮುಂದುವರೆಸಿದರು. ಬಾಕಿ ಎಲ್ಲರೂ ಒಂದು ದಿನದಲ್ಲಿ 200+ ರನ್​ ಗಳಿಸುವ ತರಾತುರಿಯಲ್ಲಿ ವಿಕೆಟ್​ ಒಪ್ಪಿಸಿದರು. ಆದರೂ ಗೆಲುವು ಇಂಗ್ಲೆಂಡ್​ಗೆ ಕಠಿಣ ಆಗಿರಲಿಲ್ಲ. 251 ಆಗಿದ್ದಾಗ ಟಿಮ್​ ಸೌಥಿ 35 ರನ್​ ಗಳಿಸಿ 9ನೇ ವಿಕೆಟ್ ಆಗಿ ಔಟ್​ ಆದರು. ನಂತರ ಅನುಭವಿ ಜೇಮ್ಸ್ ಆಂಡರ್ಸನ್ ಕ್ರೀಸ್​ಗೆ ಬಂದಿದ್ದರು. 6 ಬಾಲ್​ನಲ್ಲಿ ಒಂದು ಫೋರ್​ ನಿಂದ 4 ರನ್​ ಗಳಿಸದ್ದ ಆಂಡರ್ಸನ್ ನೀಡಿದ ಕ್ಯಾಚ್​ ಕಿವೀಸ್​ನ ಐತಿಹಾಸಿಕ ಗೆಲುವಿಗೆ ಕಾರಣವಾಯಿತು.

ಸಂಕ್ಷಿಪ್ತ ಸ್ಕೋರುಗಳು : ಇಂಗ್ಲೆಂಡ್ 435/8 ಡಿಕ್ಎಲ್. (ಹ್ಯಾರಿ ಬ್ರೂಕ್ 186, ಜೋ ರೂಟ್ 153*; ಮ್ಯಾಟ್ ಹೆನ್ರಿ 4-100, ಮೈಕಲ್ ಬ್ರೇಸ್‌ವೆಲ್ 2-54) & 256 (ಜೋ ರೂಟ್ 95, ಬೆನ್ ಫೋಕ್ಸ್ 35; ನೀಲ್ ವ್ಯಾಗ್ನರ್ 4-62, ಟಿಮ್ ಸೌಥಿ 3-45) ನ್ಯೂಜಿಲೆಂಡ್ 209 ವಿರುದ್ಧ ಸೋತರು (ಟಿಮ್ ಸೌಥಿ 73, ಟಾಮ್ ಬ್ಲಂಡೆಲ್ 38; ಸ್ಟುವರ್ಟ್ ಬ್ರಾಡ್ 4-61, ಜೇಮ್ಸ್ ಆಂಡರ್ಸನ್ 3-37) & 483 (ಕೇನ್ ವಿಲಿಯಮ್ಸನ್ 132, ಟಾಮ್ ಬ್ಲಂಡೆಲ್ 90; ಜ್ಯಾಕ್ ಲೀಚ್ 5-157)

ಫಲಿತಾಂಶ: ನ್ಯೂಜಿಲೆಂಡ್​ಗೆ 1 ರನ್‌ನ ಗೆಲುವು

ಇದನ್ನೂ ಓದಿ: ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್​ ಪರ ಅತೀ ಹೆಚ್ಚು ಟೆಸ್ಟ್​ ಸ್ಕೋರರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.