ETV Bharat / sports

ಟಿ20 ವಿಶ್ವಕಪ್‌: ಅಫ್ಘಾನಿಸ್ತಾನ ಮಣಿಸಿ ಸೆಮೀಸ್‌​ ಪ್ರವೇಶಿಸಿದ ಕಿವೀಸ್: ಟೂರ್ನಿಯಿಂದ ಹೊರಬಿದ್ದ ಭಾರತ - ಟ್ರೆಂಟ್ ಬೌಲ್ಟ್​

ನ್ಯೂಜಿಲ್ಯಾಂಡ್ ತಂಡ ಅಫ್ಘಾನಿಸ್ತಾನದ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆ ಸೂಪರ್ 12ರ 2ನೇ ಗುಂಪಿನಲ್ಲಿ ಪಾಕಿಸ್ತಾನದ ಜೊತೆ ಸೆಮಿಫೈನಲ್​ ಪ್ರವೇಶಿಸಿತು. ಅಫ್ಘಾನಿಸ್ತಾನದ ಜೊತೆಗೆ ಭಾರತ ತಂಡವೂ ಇನ್ನೊಂದು ಪಂದ್ಯವಿರುವಂತೆಯೇ ವಿಶ್ವಕಪ್​ನಲ್ಲಿ ಲೀಗ್​ ಹಂತದಲ್ಲೇ ಹೊರಬಿದ್ದಂತಾಗಿದೆ.

New Zealand enter semifinals with eight-wicket victory over Afghanistan
ನ್ಯೂಜಿಲ್ಯಾಂಡ್​ ಸೆಮಿಫೈನಲ್​ ಪ್ರವೇಶ
author img

By

Published : Nov 7, 2021, 6:54 PM IST

ಅಬುಧಾಬಿ: ಕ್ವಾರ್ಟರ್​ ಫೈನಲ್​ ಎಂದೇ ಬಿಂಬಿತವಾಗಿದ್ದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಸಂಘಟಿತ ಪ್ರದರ್ಶನ ತೋರಿ ಅಫ್ಘಾನಿಸ್ತಾನದ ವಿರುದ್ಧ 8 ವಿಕೆಟ್​ಗಳ ಜಯ ಸಾಧಿಸಿ ಮೂರನೇ ಬಾರಿಗೆ ಟಿ20 ವಿಶ್ವಕಪ್ ಸೆಮಿಫೈನಲ್ಸ್​ ಪ್ರವೇಶಿಸಿದೆ.

ಅಬುಧಾಬಿಯಲ್ಲಿ ನಡೆದ ಎರಡೂ ತಂಡಗಳ ಕೊನೆಯ ಲೀಗ್​ ಪಂದ್ಯದಲ್ಲಿ ಟಾಸ್​ ಗೆದ್ದ ಅಫ್ಘಾನಿಸ್ತಾನ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 124 ರನ್​ಗಳಿಸಿತು. ನಜೀಬುಲ್ಲಾ ಜದ್ರಾನ್​ 48 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 73 ರನ್​ಗಳಿಸಿದರು. ಆದರೆ ಉಳಿದ ಬ್ಯಾಟರ್​ಗಳ ವೈಫಲ್ಯದಿಂದ ಅಫ್ಘಾನಿಸ್ತಾನ ನಿರೀಕ್ಷಿತ ಮೊತ್ತ ಗಳಿಸುವಲ್ಲಿ ವಿಫಲವಾಯಿತು.

ಮೊಹಮ್ಮದ್ ಶಹಜಾದ್​ (4), ಹಜರುತುಲ್ಲಾಝಾಜೈ(4),ರಹ್ಮನುಲ್ಲಾ ಗುರ್ಬಾಜ್​(5) ನೈಬ್(15), ನಬಿ(14) ಮತ್ತು ಕರೀಮ್ ಜನತ್​(2) ಕಿವೀಸ್​ ಬೌಲರ್​ಗಳ ಮಾರಕ ದಾಳಿಗೆ ಪರದಾಡಿ ವಿಕೆಟ್​ ಒಪ್ಪಿಸಿದರು.

ನ್ಯೂಜಿಲ್ಯಾಂಡ್​ ಪರ ಟ್ರೆಂಟ್ ಬೌಲ್ಟ್​ 17ಕ್ಕೆ 3 ವಿಕೆಟ್​ ಪಡೆದರೆ, ಟಿಮ್ ಸೌಥಿ 24ಕ್ಕೆ 2 , ಆ್ಯಡಂ ಮಿಲ್ನೆ 4 ಓವರ್​ಗಳಲ್ಲಿ ಕೇವಲ 17 ರನ್​ ನೀಡಿ 17ಕ್ಕೆ 1 ಹಾಗೂ ಇಶ್​ ಸೋಧಿ 2 ಓವರ್​ಗಳಲ್ಲಿ 13 ರನ್​ ನೀಡಿ 1 ವಿಕೆಟ್​ ಪಡೆದು ಅಫ್ಘಾನ್ ಬೃಹತ್​ ಮೊತ್ತದ ಕನಸಿಗೆ ತಣ್ಣೀರೆರಚಿದರು.

ಇನ್ನು 125 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್​ 18.1 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಮಾರ್ಟಿನ್ ಗಪ್ಟಿಲ್​ 28, ಡೇರಿಲ್ ಮಿಚೆಲ್ 12 ಎಸೆತಗಳಲ್ಲಿ 17, ಕೇನ್ ವಿಲಿಯಮ್ಸನ್​ 42 ಎಸೆತಗಳಲ್ಲಿ 3 ಬೌಂಡರಿಗಳ ನೆರವಿನಿಂದ ಅಜೇಯ 40 ರನ್​ ಮತ್ತು ಡೆವೋನ್ ಕಾನ್ವೆ 32 ಎಸೆತಗಳಲ್ಲಿ 4 ಬೌಂಡರಿ ಸಹಿತ ಅಜೇಯ 36 ರನ್​ಗಳಿಸಿ ತಂಡವನ್ನು ಸೆಮಿಫೈನಲ್​ಗೆ ಕೊಂಡೊಯ್ದರು.

ನ್ಯೂಜಿಲ್ಯಾಂಡ್ ತಂಡ ಅಫ್ಘಾನಿಸ್ತಾನದ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆ ಸೂಪರ್ 12ರ 2ನೇ ಗುಂಪಿನಲ್ಲಿ ಪಾಕಿಸ್ತಾನದ ಜೊತೆ ಸೆಮಿಫೈನಲ್​ ಪ್ರವೇಶಿಸಿತು. ಅಫ್ಘಾನಿಸ್ತಾನದ ಜೊತೆಗೆ ಭಾರತ ತಂಡ ಕೂಡ ಇನ್ನೂ ಒಂದು ಪಂದ್ಯವಿರುವಂತೆಯೇ ವಿಶ್ವಕಪ್​ನಲ್ಲಿ ಲೀಗ್​ ಹಂತದಲ್ಲೇ ಹೊರಬಿದ್ದಂತಾಗಿದೆ.

ಇದನ್ನೂ ಓದಿ:​ ಮುಂದುವರಿದ ದಕ್ಷಿಣ ಆಫ್ರಿಕಾದ ಚೋಕರ್​ಗಿರಿ... ಇಂಗ್ಲೆಂಡ್ ವಿರುದ್ಧ ಗೆದ್ದರೂ ನನಸಾಗದ ಸೆಮಿಫೈನಲ್ ಕನಸು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.