ETV Bharat / sports

ಮಹಿಳಾ ವಿಶ್ವಕಪ್: ನ್ಯೂಜಿಲ್ಯಾಂಡ್ ತಂಡಕ್ಕೆ ಸುಲಭ ತುತ್ತಾದ ಬಾಂಗ್ಲಾದೇಶ - ಸೂಜಿ ಬೇಟ್ಸ್​

ಮಹಿಳಾ ಏಕದಿನ ವಿಶ್ವಕಪ್​ನ 5ನೇ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ್ದ 141 ರನ್​ಗಳ ಸುಲಭ ಗುರಿಯನ್ನು ಆತಿಥೇಯ ಕಿವೀಸ್ ತಂಡ ಕೇವಲ 20 ಓವರ್​ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ತಲುಪಿತು. ಈ ಮುಖೇನ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿದೆ.

New Zealand canter to nine-wicket victory over Bangladesh
ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್​ ಮಹಿಳಾ ತಂಡ
author img

By

Published : Mar 7, 2022, 3:40 PM IST

ಡುನೇಡಿನ್: ಮಳೆಯಿಂದ 27 ಓವರ್​ಗಳಿಗೆ ಮೀಸಲಾಗಿದ್ದ ಪಂದ್ಯದಲ್ಲಿ ಬಾಂಗ್ಲಾದೇಶ ಮಹಿಳಾ ತಂಡದ ವಿರುದ್ಧ ಆತಿಥೇಯ ನ್ಯೂಜಿಲ್ಯಾಂಡ್ 9 ವಿಕೆಟ್​ಗಳ ಜಯ ಸಾಧಿಸಿತು.

2022ರ ಮಹಿಳಾ ಏಕದಿನ ವಿಶ್ವಕಪ್​ನ 5ನೇ ಪಂದ್ಯದಲ್ಲಿ ಟಾಸ್​ ಗೆದ್ದ ಕಿವೀಸ್ ತಂಡ ಬಾಂಗ್ಲಾದೇಶಕ್ಕೆ ಬ್ಯಾಟಿಂಗ್ ಆಹ್ವಾನಿಸಿತ್ತು. ನಿಗರ್ ಸುಲ್ತಾನ ನೇತೃತ್ವದ ಬಾಂಗ್ಲಾ ಮೊದಲ ವಿಕೆಟ್​ಗೆ 59 ರನ್​ಗಳ ಜೊತೆಯಾಟದ ಹೊರತಾಗಿಯೂ ದಿಢೀರ್ ಕುಸಿತ ಕಂಡು 27 ಓವರ್​ಗಳಲ್ಲಿ ಕೇವಲ 140 ರನ್​ಗಳಿಸಿತು.

ಆರಂಭಿಕರಾದ ಫರ್ಗಾನ ಹಕ್​ 52 ರನ್​ ಮತ್ತು ಶಮಿಮಾ ಸುಲ್ತಾನ 33 ರನ್​ಗಳಿಸಿದರು. ಇವರನ್ನು ಹೊರತು ಪಡಿಸಿದರೆ ಉಳಿದ ಬ್ಯಾಟರ್​ಗಳು ಕಿವೀಸ್​ ದಾಳಿಯ ಮುಂದೆ ನಿಲ್ಲಲಾರದೆ ಹೋದರು. ನಾಯಕಿ ನಿಗರ್ 11, ಸೊಭಾನಾ ಮೋಸ್ತರಿ 13 ಎರಡಂಕಿ ಮೊತ್ತ ದಾಟಿದ ಮತ್ತಿಬ್ಬರು ಬ್ಯಾಟರ್​ಗಳಾಗಿದ್ದಾರೆ.

ಕಿವೀಸ್ ಪರ ಆ್ಯಮಿ ಸ್ಯಾಟರ್ಥ್‌ವೈಟ್​ 25ಕ್ಕೆ 3, ಫ್ರಾನ್ಸನ್ ಮೆಕಾಯ್​ ಮತ್ತು ಜಾನ್ಸನ್​ ತಲಾ ಒಂದು ವಿಕೆಟ್ ಪಡೆದರು.

141 ರನ್​ಗಳ ಸುಲಭ ಗುರಿಯನ್ನು ಆತಿಥೇಯ ತಂಡ ಕೇವಲ 20 ಓವರ್​ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ತಲುಪಿತು. ಸೂಜಿ ಬೇಟ್ಸ್​ 68 ಎಸೆತಗಳಲ್ಲಿ 8 ಬೌಂಡರಿ ಸಹಿತ ಅಜೇಯ 79 ಮತ್ತು ಅಮೆಲಿಯಾ ಕೆರ್​ 37 ಎಸೆತಗಳಲ್ಲಿ 5 ಬೌಂಡರಿ ಸಹಿತ ಅಜೇಯು 47 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ನಾಯಕಿ ಡಿವೈನ್ 14 ರನ್​ಗಳಿಸಿದರು.

ಕಿವೀಸ್ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 3 ರನ್​ಗಳ ರೋಚಕ ಸೋಲು ಕಂಡಿತ್ತು. ಬಾಂಗ್ಲಾದೇಶ ಸತತ 2 ಪಂದ್ಯಗಳಲ್ಲಿ ಸೋಲು ಕಂಡಂತಾಗಿದೆ.

ಇದನ್ನೂ ಓದಿ: ಐಪಿಎಲ್ ವೇಳಾಪಟ್ಟಿ ಪ್ರಕಟ: ಆರ್​ಸಿಬಿ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.