ಅಬುಧಾಬಿ: ನಜೀಬುಲ್ಲಾ ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ ತಂಡ ಸೆಮಿಫೈನಲ್ ನಿರ್ಧರಿಸುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ರನ್ಗಳ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ನೀಡಿದೆ.
ಅಬುಧಾಬನಿಯ ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಪವರ್ ಪ್ಲೇ ಮುಗಿಯುವುದರೊಳಗೆ ಆರಂಭಿಕರಾದ ಮೊಹಮ್ಮದ್ ಶಹಜಾದ್(4), ಹಜರುತುಲ್ಲಾಝಾಜೈ(4) ಮತ್ತು ರಹ್ಮನುಲ್ಲಾ ಗುರ್ಬಾಜ್(5) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
-
New Zealand restrict Afghanistan to 124/8 after a brilliant effort on the field.
— T20 World Cup (@T20WorldCup) November 7, 2021 " class="align-text-top noRightClick twitterSection" data="
Will this score prove to be enough? 🤔 #T20WorldCup | #NZvAFG | https://t.co/paShoZpj88 pic.twitter.com/vmgS3SxjnH
">New Zealand restrict Afghanistan to 124/8 after a brilliant effort on the field.
— T20 World Cup (@T20WorldCup) November 7, 2021
Will this score prove to be enough? 🤔 #T20WorldCup | #NZvAFG | https://t.co/paShoZpj88 pic.twitter.com/vmgS3SxjnHNew Zealand restrict Afghanistan to 124/8 after a brilliant effort on the field.
— T20 World Cup (@T20WorldCup) November 7, 2021
Will this score prove to be enough? 🤔 #T20WorldCup | #NZvAFG | https://t.co/paShoZpj88 pic.twitter.com/vmgS3SxjnH
ನಂತರ ಬಡ್ತಿ ಪಡೆದು ಬಂದ ಗುಲ್ಬದ್ದೀನ್ ನೈಬ್(18) ಕುಸಿಯುತ್ತಿದ್ದ ಅಫ್ಘಾನಿಸ್ತಾನ ತಂಡವನ್ನು ಸ್ವಲ್ಪ ಸಮಯ ನಜೀಬುಲ್ಲಾ ಜೊತೆಗೂಡಿ ತಡೆದರು. ಈ ಜೋಡಿ 4ನೇ ವಿಕೆಟ್ಗೆ 37 ರನ್ ಜೊತೆಯಾಟ ನೀಡಿತು. ಆದರೆ ಈ ಹಂತದಲ್ಲಿ ದಾಳಿಗಿಳಿದಿ ಕಿವೀಸ್ ಸ್ಟಾರ್ ಸ್ಪಿನ್ನರ್ ಸೋಧಿ, 18ರನ್ಗಳಿಸಿದ್ದ ನೈಬ್ರನ್ನು ಬೌಲ್ಡ್ ಮಾಡಿದರು.
56ಕ್ಕೆ 4 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಅಫ್ಘಾನಿಸ್ತಾನ ತಂಡಕ್ಕೆ ನಾಯಕ ನಬಿ ಮತ್ತು ನಜೀಬುಲ್ಲಾ 59 ರನ್ಗಳ ಅಮೂಲ್ಯ ಜೊತೆಯಾಟ ನೀಡಿದರು. ನಬಿ 20 ಎಸೆತಗಳಲ್ಲಿ 14 ರನ್ಗಳಿಸಿದರೆ, ನಜೀಬುಲ್ಲಾ 48 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ 73 ರನ್ಗಳಿಸಿ ಬೌಲ್ಟ್ಗೆ ವಿಕೆಟ್ ಒಪ್ಪಿಸಿದರು.
ನ್ಯೂಜಿಲ್ಯಾಂಡ್ ಪರ ಟ್ರೆಂಟ್ ಬೌಲ್ಟ್ 17ಕ್ಕೆ 3 ವಿಕೆಟ್ ಪಡೆದರೆ, ಟಿಮ್ ಸೌಥಿ 24ಕ್ಕೆ 2 , ಆ್ಯಡಂ ಮಿಲ್ನೆ 4 ಓವರ್ಗಳಲ್ಲಿ ಕೇವಲ 17 ರನ್ ನೀಡಿ 17ಕ್ಕೆ 1 ಹಾಗೂ ಇಶ್ ಸೋಧಿ 2 ಓವರ್ಗಳಲ್ಲಿ 13 ರನ್ ನೀಡಿ 1 ವಿಕೆಟ್ ಪಡೆದು ಅಫ್ಘಾನ್ ಬೃಹತ್ ಮೊತ್ತದ ಕನಸಿಗೆ ತಣ್ಣೀರೆಚಿದರು.
ಇದನ್ನೂ ಓದಿ:ಮುಂದಿನ ಟಿ20 ವಿಶ್ವಕಪ್ಗೆ ಅರ್ಹತೆ ಪಡೆಯುವಲ್ಲಿ ವಿಂಡೀಸ್, ಲಂಕಾ ಫೇಲ್: ಬಾಂಗ್ಲಾ, ಅಫ್ಘಾನ್ ಪಾಸ್