ಸೌತಾಂಪ್ಟನ್ : ಕೈಲ್ ಜೆಮಿಸನ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 217 ರನ್ಗಳಿಗೆ ಆಲೌಟ್ ಆಗಿದೆ. 2ನೇ ದಿನ 146ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ ಇಂದು 71 ರನ್ ಸೇರಿಸಲಷ್ಟೇ ಶಕ್ತವಾಯಿತು.
146 ರನ್ಗಳೊಂದಿಗೆ 3ನೇ ದಿನ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಕೈಲ್ ಜೆಮೀಸನ್ ಕೇವಲ ದಿನದ 3ನೇ ಓವರ್ನಲ್ಲಿ 44 ರನ್ಗಳಿಸಿದ್ದ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪಡೆದರು. ನಂತರ ಬಂದ ಬ್ಯಾಟ್ಸ್ಮನ್ಗಳನ್ನು ಕೂಡ ಕಿವೀಸ್ ಬೌಲರ್ಗಳು ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ.
-
ALL OUT ☝️
— ICC (@ICC) June 20, 2021 " class="align-text-top noRightClick twitterSection" data="
India's innings ends at 217, after a quality bowling display from the @BLACKCAPS.#WTC21 Final | #INDvNZ | https://t.co/Ia4tmbuPBD pic.twitter.com/v8MvWCon9z
">ALL OUT ☝️
— ICC (@ICC) June 20, 2021
India's innings ends at 217, after a quality bowling display from the @BLACKCAPS.#WTC21 Final | #INDvNZ | https://t.co/Ia4tmbuPBD pic.twitter.com/v8MvWCon9zALL OUT ☝️
— ICC (@ICC) June 20, 2021
India's innings ends at 217, after a quality bowling display from the @BLACKCAPS.#WTC21 Final | #INDvNZ | https://t.co/Ia4tmbuPBD pic.twitter.com/v8MvWCon9z
ಕೊಹ್ಲಿ ನಂತರ ಬಂದ ರಿಷಭ್ ಪಂತ್ 19 ಎಸೆತಗಳಲ್ಲಿ 4 ರನ್ಗಳಿಸಿ ಜೆಮೀಸನ್ಗೆ 3ನೇ ಬಲಿಯಾದರು. 117 ಎಸೆಗಳಲ್ಲಿ 49 ರನ್ಗಳಿಸಿದ್ದ ಉತ್ತಮವಾಗಿ ಆಡುತ್ತಿದ್ದ ಉಪನಾಯಕ ಅಜಿಂಕ್ಯ ರಹಾನೆ ನೀಲ್ ವ್ಯಾಗ್ನರ್ ಬೌಲಿಂಗ್ನಲ್ಲಿ ಲ್ಯಾಥಮ್ಗೆ ಕ್ಯಾಚ್ ನೀಡಿ ಔಟಾದರು.
ನಂತರ ಬಂದ ಅಶ್ವಿನ್ (22) ಜಡೇಜಾ ಜೊತೆಗೂಡಿ 23 ರನ್ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಅವರು 22 ರನ್ಗಳಿಸಿದ್ದ ವೇಳೆ ಅನುಭವಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು. ಬೋಜನ ವಿರಾಮಕ್ಕೆ ಮುನ್ನ 211ಕ್ಕೆ 7 ಭಾರತ ತಂಡ, ನಂತರ ಕೇವಲ 6 ರನ್ ಸೇರಿಸುವಷ್ಟರಲ್ಲಿ ಕೊನೆಯ 3 ವಿಕೆಟ್ ಕಳೆದುಕೊಳ್ಳುವ ಮೂಲಕ ಕೇವಲ 217ಕ್ಕೆ ಗಂಟು ಮೂಟೆ ಕಟ್ಟಿತು. ಜಡೇಜಾ(15) ರನ್ಗಳಿಸಿದರು.
ನ್ಯೂಜಿಲ್ಯಾಂಡ್ ಪರ ಕೈಲ್ ಜೆಮೀಸನ್ 31ಕ್ಕೆ 5 ವಿಕೆಟ್ ಪಡೆದರೆ, ಇವರಿಗೆ ಸಾಥ್ ನೀಡಿದ ವ್ಯಾಗ್ನರ್ ಮತ್ತು ಬೌಲ್ಟ್ ತಲಾ 2 ವಿಕೆಟ್ ಹಾಗೂ ಸೌಥಿ ಒಂದು ವಿಕೆಟ್ ಪಡೆದರು.
ಇದನ್ನು ಓದಿ:ಜೆಮೀಸನ್ಗೆ ಬಲಿಯಾದ ಕೊಹ್ಲಿ, ಪಂತ್.. 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತ