ETV Bharat / sports

ಗ್ಲೆನ್ ಫಿಲಿಪ್ಸ್​ ಭರ್ಜರಿ ಶತಕ.. ಬೌಲ್ಟ್ ಬೌಲಿಂಗ್​ಗೆ ನಲುಗಿದ ಲಂಕಾ: ಹೀನಾಯ ಸೋಲು - ಗ್ಲೆನ್ ಫಿಲಿಪ್ಸ್​ ಭರ್ಜರಿ ಶತಕ

ಟಿ20 ವಿಶ್ವಕಪ್ ಟೂರ್ನಿಯ ಸೂಪರ್​ 12 ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಶ್ರೀಲಂಕಾ ಹೀನಾಯವಾಗಿ ಸೋಲು ಕಂಡಿದೆ.

new-zealand-beat-sri-lanka-by-65-runs
ಗ್ಲೆನ್ ಫಿಲಿಪ್ಸ್​ ಭರ್ಜರಿ ಶತಕ... ಬೌಲ್ಟ್ ಬೌಲಿಂಗ್​ಗೆ ನಲುಗಿದ ಲಂಕಾ: ಹೀನಾಯ ಸೋಲು
author img

By

Published : Oct 29, 2022, 6:07 PM IST

ಸಿಡ್ನಿ: ಟಿ20 ವಿಶ್ವಕಪ್ ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 65 ರನ್‌ಗಳಿಂದ ಭರ್ಜರಿ ಜಯ ದಾಖಲಿಸಿದೆ. ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲೂ ನ್ಯೂಜಿಲೆಂಡ್ ಆಟಗಾರರು ಮಿಂಚಿದ್ದಾರೆ.

ಇಂದು ಸಿಡ್ನಿಯಲ್ಲಿ ನಡೆದ ಸೂಪರ್​ 12 ಹಂತದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲ ಬ್ಯಾಟ್​ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 167 ರನ್ ಗಳಿಸಿತ್ತು. ಪಂದ್ಯದ ಆರಂಭದಲ್ಲಿ ನ್ಯೂಜಿಲೆಂಡ್ ತಂಡ 15 ರನ್ ಗಳಿಸುವಷ್ಟರಲ್ಲಿ ಮೇಲಿಂದ ಮೇಲೆ ಮೂರು ವಿಕೆಟ್​ಗಳನ್ನು ಕಳೆದುಕೊಂಡು ಆಘಾತ ಅನುಭವಿಸಿತ್ತು.

ಆದರೆ, ನಂತರ ಗ್ಲೆನ್ ಫಿಲಿಪ್ಸ್​ ಮತ್ತು ಡ್ಯಾರಿಲ್ ಮಿಚೆಲ್ ಉತ್ತಮವಾಗಿ ಬ್ಯಾಟ್ ಬೀಸಿ​ ತಂಡಕ್ಕೆ ಲಯ ತಂದುಕೊಟ್ಟರು. ಇದರ ನಡುವೆ 22 ರನ್​ ಗಳಿಸಿದ್ದ ಡ್ಯಾರಿಲ್ ಮಿಚೆಲ್ ಔಟಾದರು. ಆದರೆ, ಗ್ಲೆನ್ ಫಿಲಿಪ್ಸ್​ ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿ 64 ಎಸೆತಗಳಲ್ಲೇ 104 ರನ್​ ಸಿಡಿಸಿ ಮಿಂಚಿದರು.

ಕೊನೆಗೆ 20 ಓವರ್​ಗಳಲ್ಲಿ ನ್ಯೂಜಿಲೆಂಡ್ ತಂಡ 7 ವಿಕೆಟ್‌ ನಷ್ಟಕ್ಕೆ 167 ರನ್ ಪೇರಿಸಿತ್ತು. ಶ್ರೀಲಂಕಾ ಪರವಾಗಿ ಕಸುನ್ ರಜಿತಾ 2 ವಿಕೆಟ್​ ಮತ್ತು ಎಂ.ತೀಕ್ಷಣ, ಧನಂಜಯ ಸಿಲ್ವಾ, ಹಸರಂಗ, ಲಹಿರು ಕುಮಾರ ತಲಾ ಒಂದು ವಿಕೆಟ್​ ಪಡೆದರು.

ಇತ್ತ, ಈ ಗೆಲುವಿನ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ 19.2 ಓವರ್​ಗಳಲ್ಲಿ ಕೇವಲ 102 ರನ್​ಗಳಿಗೆ ಸರ್ವ ಪತನ ಕಂಡಿತು. ಲಂಕಾ ಪರವಾಗಿ ದಸುನ್ ಶನಕ 35 ರನ್​ ಹಾಗೂ ಭಾನುಕಾ ರಾಜಪಕ್ಸೆ 34 ರನ್​ಗಳನ್ನು ಬಾರಿಸಿದರು. ಉಳಿದಂತೆ ಯಾವುದೇ ಆಟಗಾರರು ಒಂದಂಕಿ ರನ್​ ಗಡಿ ಕೂಡ ದಾಟಲಿಲ್ಲ.

ನ್ಯೂಜಿಲೆಂಡ್ ಪರವಾಗಿ ಟ್ರೆಂಟ್ ಬೌಲ್ಟ್ ಅದ್ಭುತ ಬೌಲಿಂಗ್ ಮಾಡಿ ಮಿಂಚಿಸಿದರು. ಕೇವಲ 13 ರನ್​ ನೀಡಿ 4 ವಿಕೆಟ್​ ಕಬಳಿಸಿದರು. ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ ತಲಾ ಎರಡು ವಿಕೆಟ್​ ಹಾಗೂ ಟಿಮ್ ಸೌಥಿ, ಲಾಕಿ ಫರ್ಗುಸನ್ ತಲಾ ಒಂದು ವಿಕೆಟ್​ ಪಡೆದರು.

ಇದನ್ನೂ ಓದಿ: T20 World Cup: ಡೇಲ್​ ಸ್ಟೇಯ್ನ್ ಪಟ್ಟಿ ಮಾಡಿದ 5 ಅತ್ಯುತ್ತಮ ಬೌಲರ್‌ಗಳು ಇವರೇ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.