ETV Bharat / sports

ಎರಡು ದೇಶಗಳ ಪರ ಆಡಿ ಅರ್ಧಶತಕ ಬಾರಿಸಿ ದಾಖಲೆ ನಿರ್ಮಿಸಿದ ಕಿವೀಸ್ ಬ್ಯಾಟರ್​

ಹಾಂಗ್​ಕಾಂಗ್​ ಪರ ವೃತ್ತಿ ಜೀವನದ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಚಾಪ್ಮನ್​ ಈ ಹಿಂದೆ 2015ರಲ್ಲಿ ಒಮಾನ್ ವಿರುದ್ಧ 41 ಎಸೆತಗಳಲ್ಲಿ 63 ರನ್​ಗಳಿಸಿದ್ದರು. ಅವರು ಎರಡು ದೇಶಗಳ ಪರ ಆಡಿ ಅರ್ಧಶತಕ ಬಾರಿಸಿ ದಾಖಲೆ ನಿರ್ಮಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ​

Mark Chapman become a first player to score 50 for two different countries
ಮಾರ್ಕ್​ ಚಾಪ್ಮನ್​ ದಾಖಲೆ
author img

By

Published : Nov 18, 2021, 3:23 PM IST

ಜೈಪುರ: ಬುಧವಾರ ನಡೆದ ಭಾರತದ ವಿರುದ್ಧದ ಮೊದಲ ಟಿ20(Ind vs NZ first T20I) ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ನ್ಯೂಜಿಲ್ಯಾಂಡ್(New Zealand) ತಂಡದ ಮಾರ್ಕ್​ ಚಾಪ್ಮನ್(Mark Chapman )​ ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ.

ಕಿವೀಸ್​ನ ಬ್ಯಾಟರ್​ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 50 ಎಸೆತಗಳಲ್ಲಿ 63 ರನ್​ ಸಿಡಿಸಿ ತಂಡ 165 ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು. ಆದರೆ ಈ ಪಂದ್ಯದಲ್ಲಿ ಅರ್ಧಶತಕ ದಾಖಲಿಸುವ ಮೂಲಕ ಎರಡೂ ದೇಶಗಳ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿ ಅರ್ಧಶತಕ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಹಾಂಗ್​ಕಾಂಗ್​ ಪರ ವೃತ್ತಿ ಜೀವನದ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಚಾಪ್ಮನ್​ ಈ ಹಿಂದೆ 2015ರಲ್ಲಿ ಒಮಾನ್ ವಿರುದ್ಧ 41 ಎಸೆತಗಳಲ್ಲಿ 63 ರನ್​ಗಳಿಸಿದ್ದರು.

ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 164 ರನ್​ಗಳಿಸಿತ್ತು. ಭಾರತ ಈ ಮೊತ್ತವನ್ನು 5 ವಿಕೆಟ್​ ಕಳೆದುಕೊಂಡು 19.4 ಓವರ್​ಗಳಲ್ಲಿ ತಲುಪಿ ಗೆಲುವು ಸಾಧಿಸಿ 3 ಪಂದ್ಯಗಳ ಸರಣಿಯನ್ನು 1-0ಯಲ್ಲಿ ಮುನ್ನಡೆ ಸಾಧಿಸಿತು.

ಇದನ್ನೂ ಓದಿ:IND vs NZ 1st T20: ಕಿವೀಸ್‌ ವಿರುದ್ಧ ಜಯದೊಂದಿಗೆ ರೋಹಿತ್‌-ದ್ರಾವಿಡ್‌ ಯುಗಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.