ವೆಲ್ಲಿಂಗ್ಟನ್:ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದ ವಿಶ್ವಾಸದಲ್ಲಿರುವ ನ್ಯೂಜಿಲ್ಯಾಂಡ್ ತಂಡ ಯುಎಇನಲ್ಲಿ ಬಿಸಿಸಿಐ ಆಶ್ರಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದು ಮೂರು ತಿಂಗಳ ಮೊದಲೇ 16 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ.
ಭಾರತದಲ್ಲಿ ಕೋವಿಡ್ 19 ಸಾಂಕ್ರಾಮಿಕ ಪ್ರಮಾಣ ಹೆಚ್ಚಿದ್ದರಿಂದ ಯುಎಇಗೆ ಟಿ20 ವಿಶ್ವಕಪ್ ಸ್ಥಳಾಂತರ ಮಾಡಲಾಗಿತ್ತು. ಇನ್ನು 2021ರ ಆವೃತ್ತಿಯ ಮುಂದುವರಿದ ಐಪಿಎಲ್ಗೆ ನ್ಯೂಜಿಲ್ಯಾಂಡ್ ಆಟಗಾರರೆಲ್ಲರೂ ಭಾಗವಹಿಸಲಿರುವುದು ಖಚಿತವಾಗಿದೆ. ಹಾಗಾಗಿ ಐಪಿಎಲ್ ವೇಳೆ ಕಿವೀಸ್ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದು, ಐಪಿಎಲ್ ಆಟಗಾರರನ್ನು ಹೊರೆತುಪಡಿಸಿ ಉಳಿದ ಆಟಗಾರರು ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 17ರಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ನ್ಯೂಜಿಲ್ಯಾಂಡ್ ತಂಡ ಅಕ್ಟೋಬರ್ 26ರಂದು ಬಿ ಗುಂಪಿನ ಕ್ವಾಲಿಫೈಯರ್ 1 ತಂಡದ ವಿರುದ್ಧ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
- ಕೇನ್ ವಿಲಿಯಮ್ಸನ್
- ಟಾಡ್ ಆಸ್ಟಲ್
- ಟ್ರೆಂಟ್ ಬೌಲ್ಟ್
- ಮಾರ್ಕ್ ಚಾಪ್ಮನ್
- ಡೆವೊನ್ ಕಾನ್ವೇ
- ಲಾಕಿ ಫರ್ಗ್ಯುಸನ್
- ಮಾರ್ಟಿನ್ ಗಪ್ಟಿಲ್
- ಕೈಲ್ ಜೆಮೀಸನ್
- ಡೆರಿಲ್ ಮಿಚೆಲ್
- ಜಿಮ್ಮಿ ನೀಶಮ್
- ಗ್ಲೆನ್ ಫಿಲಿಪ್ಸ್
- ಮಿಚೆಲ್ ಸ್ಯಾಂಟ್ನರ್
- ಟಿಮ್ ಸೀಫರ್ಟ್
- ಇಶ್ ಸೋಧಿ
- ಟಿಮ್ ಸೌಥಿ
- ಆ್ಯಡಮ್ ಮಿಲ್ನೆ