ETV Bharat / sports

New Covid variant: ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕೋವಿಡ್‌ ಕರಿನೆರಳು, ಮುಂದೂಡಿಕೆ? - ಭಾರತ-ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೂರ್ನಿ

ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಾಗಿರುವ ಟೀಂ ಇಂಡಿಯಾ ಮೇಲೆ ಇದೀಗ ಕರಿನೆರಳು ಆವರಿಸಿದೆ. ಹರಿಣಗಳ ನಾಡಿನಲ್ಲಿ ರೂಪಾಂತರ ಕೋವಿಡ್ ಕಾಣಿಸಿಕೊಂಡಿರುವ ಕಾರಣ ಟೂರ್ನಿ ಮುಂದೂಡಿಕೆಯಾಗುವ ಸಾಧ್ಯತೆ ಇದೆ.

india vs south africa
india vs south africa
author img

By

Published : Nov 26, 2021, 7:12 PM IST

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೋವಿಡ್ ರೂಪಾಂತರ ಕಾಣಿಸಿಕೊಂಡಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಭಾರತ ಈಗಾಗಲೇ ಅನೇಕ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ಇದರ ಬೆನ್ನಲ್ಲೇ ಕ್ರಿಕೆಟ್​ ಟೂರ್ನಿಯಲ್ಲಿ ಭಾಗಿಯಾಗಲು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಾಗಿದ್ದ ಟೀಂ ಇಂಡಿಯಾ ಇದೀಗ ಸರಣಿ ಮುಂದೂಡಿಕೆ ಮಾಡುವ ಸಾಧ್ಯತೆ ಇದೆ.

India vs South africa: ಡಿಸೆಂಬರ್​​ 17ರಿಂದ ಆರಂಭಗೊಳ್ಳಲಿರುವ ಕ್ರಿಕೆಟ್​ ಸರಣಿಗಾಗಿ ಟೀಂ ಇಂಡಿಯಾ ಹರಿಣಗಳ ನಾಡಿಗೆ ಪ್ರವಾಸ ಕೈಗೊಳ್ಳಬೇಕಾಗಿತ್ತು. ಆದರೆ ಇದೀಗ ರೂಪಾಂತರ ಕೋವಿಡ್ ಕಾಣಿಸಿಕೊಂಡಿರುವ ಕಾರಣ ಬಿಸಿಸಿಐ ತನ್ನ ಪ್ರವಾಸ ಮುಂದೂಡಿಕೆ ಮಾಡುವ ಸಾಧ್ಯತೆ ದಟ್ಟವಾಗಿದ್ದು, ಕೇಂದ್ರ ಸರ್ಕಾರದ ಸೂಚನೆಗೋಸ್ಕರ ಎದುರು ನೋಡುತ್ತಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ, ಟೀಂ ಇಂಡಿಯಾ ಆಟಗಾರರು ಡಿಸೆಂಬರ್​​​ 8ರಂದು ವಿದೇಶಿ ಪ್ರವಾಸ ಕೈಗೊಳ್ಳಬೇಕಾಗಿದೆ. ಇದೀಗ ಸೋಂಕು ಕಾಣಿಸಿಕೊಂಡಿರುವುದು ಬಿಸಿಸಿಐಗೆ ತಲೆನೋವಾಗಿ ಪರಿಣಮಿಸಿದೆ. ಇದೇ ಕಾರಣದಿಂದಾಗಿ ಆಟಗಾರರ ದೃಷ್ಠಿಯಿಂದ ಸರಣಿ ಮುಂದೂಡುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಮಾರ್ಚ್​​ ವೇಳೆಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ: ಕೇಂದ್ರ ಸಚಿವ ನಾರಾಯಣ ರಾಣೆ

ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಭಾರತ ಮೂರು ಟೆಸ್ಟ್​​​ ಪಂದ್ಯ, ಮೂರು ಏಕದಿನ ಹಾಗೂ ನಾಲ್ಕು ಟಿ-20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಬೇಕಾಗಿದೆ. ಡಿಸೆಂಬರ್​​ 17ರಿಂದ ದಕ್ಷಿಣ ಆಫ್ರಿಕಾದ ಜೊಹಾನ್ಸ್​ಬರ್ಗ್​​ನಲ್ಲಿ ಮೊದಲ ಟೆಸ್ಟ್​​ ಪಂದ್ಯ ಆಯೋಜನೆಗೊಂಡಿದೆ. ಇದಾದ ಬಳಿಕ ಸೆಂಚುರಿಯನ್​​ನಲ್ಲಿ ಬಾಕ್ಸಿಂಗ್​ ಡೇ ಟೆಸ್ಟ್​​ ಹಾಗೂ ಕೇಪ್​ಡೌನ್​ನಲ್ಲಿ ಕೊನೆ ಟೆಸ್ಟ್​​ ಪಂದ್ಯ ಜನವರಿ 3ರಿಂದ ಆರಂಭಗೊಳ್ಳಬೇಕಾಗಿದೆ. ಇದಾದ ಬಳಿಕ ಕೇಪ್​ಟೌನ್​​ನಲ್ಲಿ ಏಕದಿನ ಹಾಗೂ ಟಿ20 ಪಂದ್ಯಗಳು ನಡೆಯಬೇಕಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.