ETV Bharat / sports

ಹೊಸ ಕೋಚ್​ ಆಯ್ಕೆಗೆ ಬಿಸಿಸಿಐ ಒಲವು: ವಿ.ವಿ.ಎಸ್.ಲಕ್ಷ್ಮಣ್​ಗೆ ಭಾರತ ಕ್ರಿಕೆಟ್​ ತಂಡದ ಚುಕ್ಕಾಣಿ? - Indian cricket team

Who is the new coach for Indian cricket team?: ರಾಹುಲ್​ ದ್ರಾವಿಡ್​ ಅವರ ಕೋಚ್​ ಅವಧಿ ಮುಗಿದಿದ್ದು, ಭಾರತ ತಂಡಕ್ಕೆ ಹೊಸ ಮಾರ್ಗದರ್ಶಕರು ಬರಲಿದ್ದಾರೆ ಎಂದು ಹೇಳಲಾಗಿದೆ.

ಹೊಸ ಕೋಚ್​ ಆಯ್ಕೆಗೆ ಬಿಸಿಸಿಐ ಒಲವು
ಹೊಸ ಕೋಚ್​ ಆಯ್ಕೆಗೆ ಬಿಸಿಸಿಐ ಒಲವು
author img

By PTI

Published : Nov 26, 2023, 8:10 AM IST

Updated : Nov 26, 2023, 8:50 AM IST

ನವದೆಹಲಿ: ವಿಶ್ವಕಪ್​ ಸೋಲಿನ ಬಳಿಕ ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ಹುದ್ದೆಯಲ್ಲಿ ರಾಹುಲ್​ ದ್ರಾವಿಡ್​ ಅವರನ್ನು ಮುಂದುವರಿಸಬೇಕೇ, ಬೇಡವೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸ್ವತಃ ದ್ರಾವಿಡ್​ ಕೋಚ್​ ಆಗಿ ಮುಂದುವರಿಯಲು ನಿರಾಸಕ್ತಿ ತೋರಿದ್ದಾರೆ ಎಂಬ ಸುದ್ದಿಯ ಬಳಿಕ, ಹೊಸ ಕೋಚ್​ ಆಯ್ಕೆಗೆ ಬಿಸಿಸಿಐ ಮುಂದಾಗಿದೆ ಎಂದು ತಿಳಿದುಬಂದಿದೆ.

ಮುಂದಿನ 6 ತಿಂಗಳ ಅಂತರದಲ್ಲಿ ಟಿ20 ವಿಶ್ವಕಪ್​ ನಡೆಯಲಿದ್ದು, ಅದಕ್ಕೂ ಮೊದಲು ಭಾರತ ಕ್ರಿಕೆಟ್​ ತಂಡಕ್ಕೆ ಹೊಸ ಕೋಚ್​ ಆಯ್ಕೆ ಮಾಡುವ ಬಗ್ಗೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ) ಯೋಜಿಸಿದೆ. ಎನ್​ಸಿಎ ಅಧ್ಯಕ್ಷ ವಿ.ವಿ.ಎಸ್.ಲಕ್ಷ್ಮಣ್​ರಿಗೆ ತಂಡದ ಜವಾಬ್ದಾರಿ ಹೊರಿಸುವ ಬಗ್ಗೆ ಗಾಢ ಚರ್ಚೆಗಳು ನಡೆದಿವೆ ಎಂದು ವರದಿಯಾಗಿದೆ.

ಈ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದು, ವಿಶ್ವಕಪ್​ ಫೈನಲ್​ ಬಳಿಕ ರಾಹುಲ್​ ದ್ರಾವಿಡ್​ ಅವರ ಎರಡು ವರ್ಷಗಳ ಕೋಚ್​ ಒಪ್ಪಂದ ಮುಕ್ತಾಯವಾಗಿದೆ. ಅವರನ್ನೇ ಹುದ್ದೆಯಲ್ಲಿ ಮುಂದುವರಿಸುವ ಬಗ್ಗೆ ಚರ್ಚೆಗಳು ನಡೆದರೂ, ಹೊಸಬರಿಗೆ ಹೊಣೆ ನೀಡುವ ಬಗ್ಗೆ ಬಿಸಿಸಿಐ ಆಡಳಿತ ಮಂಡಳಿ ಚಿಂತಿಸಿದೆ. ಹೀಗಾಗಿ, ಸದ್ಯ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಕೋಚ್​ ಆಗಿರುವ, ಎನ್​ಸಿಎ ಅಧ್ಯಕ್ಷ ಲಕ್ಷ್ಮಣ್​ ಅವರ ಹೆಸರು ಮುಂಚೂಣಿಯಲ್ಲಿದೆ ಎಂದರು.

ರಾಹುಲ್​ ದ್ರಾವಿಡ್​ ಜೊತೆ ಚರ್ಚೆ ನಡೆಸಲಾಗಿದೆ. ಯಾವುದೇ ನಿರ್ಧಾರ ಇನ್ನೂ ಹೊರಬಿದ್ದಿಲ್ಲ. ಹುದ್ದೆಯಲ್ಲಿ ಮುಂದುವರಿಯಲು ದ್ರಾವಿಡ್​ ನಿರಾಸಕ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ. ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಬಿಸಿಸಿಐ ಗೌರವಿಸಲಿದೆ. ಇನ್ನಾರು ತಿಂಗಳಲ್ಲಿ ಟಿ-20 ವಿಶ್ವಕಪ್​ ನಡೆಯಲಿದ್ದು, ಅದಕ್ಕೂ ಮೊದಲು ತಂಡದ ಸಾರಥಿಯನ್ನು ಆಯ್ಕೆ ಮಾಡಬೇಕಿದೆ. ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿಸಿದರು.

ದ್ರಾವಿಡ್​ ಕಾರ್ಯಕ್ಕೆ ಶ್ಲಾಘನೆ: ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆ. 2022 ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌, ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್- 2023, ಏಷ್ಯಾ ಕಪ್​ ಗೆಲುವು, ಈಚೆಗೆ ಮುಗಿದ ವಿಶ್ವಕಪ್‌ನಲ್ಲಿ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದರು. ಈ ಎಲ್ಲಾ ಸಾಧನೆ ಬಗ್ಗೆ ಬಿಸಿಸಿಐಗೆ ತೃಪ್ತಿ ಇದೆ. ಮುಂದಿನ ಕೋಚ್​ ಬಗ್ಗೆ ನಾಯಕ ರೋಹಿತ್ ಶರ್ಮಾ, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸೇರಿದಂತೆ ಬಿಸಿಸಿಐನ ಪದಾಧಿಕಾರಿಗಳು ಶೀಘ್ರದಲ್ಲೇ ಸಭೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಲಕ್ಷ್ಮಣ್​ ಮೊದಲ ಆಯ್ಕೆ: ತಂಡಕ್ಕೆ ಹೊಸ ಕೋಚ್​ ಆಯ್ಕೆಯಾದಲ್ಲಿ ಬಿಸಿಸಿಐನ ಮೊದಲ ಆಯ್ಕೆ ಲಕ್ಷ್ಮಣ್​ ಅವರಾಗಿದ್ದಾರೆ. ಈಗಾಗಲೇ ಅವರು ಭಾರತ ತಂಡದ ಕೆಲ ಸರಣಿಗಳಿಗೆ ಕೋಚ್​ ಆಗಿ ಕೆಲಸ ಮಾಡಿದ್ದಾರೆ. ಲಕ್ಷ್ಮಣ್ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಮುಖ್ಯ ತರಬೇತುದಾರರಾಗಿ ಭಾರತ ತಂಡದ ಜೊತೆಗಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​ನಲ್ಲಿ ಭಾರತಕ್ಕೆ ಸೋಲು: ತೀವ್ರ ನಿರಾಶೆಗೊಂಡ ರೋಹಿತ್​ ಬಳಗಕ್ಕೆ ಮತ್ತೆ ಧೈರ್ಯ ತುಂಬಿದ ಕಪಿಲ್​ ದೇವ್​

Last Updated : Nov 26, 2023, 8:50 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.