ಮೊಹಾಲಿ: ವಿಶ್ವ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಶುಕ್ರವಾರದಿಂದ ಶ್ರೀಲಂಕಾ ವಿರುದ್ಧ ತಮ್ಮ 100ನೇ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ನಾನು ಈ ಮೈಲುಗಲ್ಲಿನ ಬಗ್ಗೆ ಆಲೋಚನೆ ಕೂಡ ಮಾಡಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದರು.
2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ, ತಮ್ಮ ಮೊದಲ ಪಂದ್ಯದಲ್ಲಿ ಕೇವಲ 4 ಮತ್ತು15 ರನ್ಗಳಿಸಿದ್ದರು. ಇದೀಗ ದಶಕದ ಸುದೀರ್ಘ ಪಯಣದಲ್ಲಿ 50.39ರ ಸರಾಸರಿಯಲ್ಲಿ 7,962 ರನ್ಗಳಿಸಿದ್ದಾರೆ. ವಿಶ್ವದ ಟಾಪ್ ಬ್ಯಾಟರ್ಗಳಲ್ಲಿ ಒಬ್ಬರಾಗಿರುವ ಕೊಹ್ಲಿ ಶುಕ್ರವಾರ 100ನೇ ಟೆಸ್ಟ್ ಪಂದ್ಯವನ್ನಾಡಿದ ಭಾರತದ 12 ಮತ್ತು ವಿಶ್ವದ 71ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
-
'I never thought i'll play 100 Test matches. It has been a long journey. Grateful that i've been able to make it to 100' - @imVkohli on his landmark Test.
— BCCI (@BCCI) March 3, 2022 " class="align-text-top noRightClick twitterSection" data="
Full interview coming up on https://t.co/Z3MPyesSeZ. Stay tuned! #VK100 pic.twitter.com/SFehIolPwb
">'I never thought i'll play 100 Test matches. It has been a long journey. Grateful that i've been able to make it to 100' - @imVkohli on his landmark Test.
— BCCI (@BCCI) March 3, 2022
Full interview coming up on https://t.co/Z3MPyesSeZ. Stay tuned! #VK100 pic.twitter.com/SFehIolPwb'I never thought i'll play 100 Test matches. It has been a long journey. Grateful that i've been able to make it to 100' - @imVkohli on his landmark Test.
— BCCI (@BCCI) March 3, 2022
Full interview coming up on https://t.co/Z3MPyesSeZ. Stay tuned! #VK100 pic.twitter.com/SFehIolPwb
"100 ಟೆಸ್ಟ್ ಪಂದ್ಯಗಳನ್ನು ಆಡುವ ಬಗ್ಗೆ ನಾನೆಂದೂ ಯೋಚಿಸಿರಲಿಲ್ಲ. ಇದೊಂದು ಸುದೀರ್ಘ ಪ್ರಯಾಣ. ಆ 100 ಟೆಸ್ಟ್ ಪಂದ್ಯಗಳನ್ನು ಆಡುವ ಅವಧಿಯಲ್ಲಿ ನಾವು ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಅದರಲ್ಲಿ ಸಾಕಷ್ಟು ಅಂತಾರಾಷ್ಟ್ರೀಯ ಕ್ರಿಕೆಟ್ ಕೂಡ ಇದೆ. ನಾನು 100 ಟೆಸ್ಟ್ ಪಂದ್ಯಗಳನ್ನು ಆಡಲು ಸಾಧ್ಯವಾಗಿದ್ದಕ್ಕೆ ಕೃತಜ್ಞನಾಗಿರುತ್ತೇನೆ " ಎಂದು ಬಿಸಿಸಿಐ ಟ್ವಿಟರ್ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಹೇಳಿದರು.
ಭಾರತದ ಪರ ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್ಸರ್ಕರ್, ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್, ವಿರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಮತ್ತು ಇಶಾಂತ್ ಶರ್ಮಾ 100 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ.
ದೇವರು ದಯೆ ತೋರಿದ್ದಾರೆ. ನನ್ನ ಫಿಟ್ನೆಸ್ ಬಗ್ಗೆ ಸಾಕಷ್ಟು ಕಠಿಣ ಪರಿಶ್ರಮವಹಿಸಿದ್ದೇನೆ. ಇದು ನನಗೆ ದೊಡ್ಡ ಕ್ಷಣ, ನನ್ನ ಕುಟುಂಬಕ್ಕೆ, ನನ್ನ ಕೋಚ್ಗೆ ಕೂಡ ಇದು ಸಂತೋಷ ತಂದಿದೆ ಮತ್ತು ಅವರು ಇದಕ್ಕಾಗಿ ಹೆಮ್ಮೆ ಪಡುತ್ತಾರೆ ಎಂದು ಕೊಹ್ಲಿ ವಿಡಿಯೋದಲ್ಲಿ ತಿಳಿಸಿದ್ದಾರೆ.
ಬಿಸಿಸಿಐ ಕೂಡ ವಿರಾಟ್ ಕೊಹ್ಲಿ 100ನೇ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡಿದೆ. ಮೊದಲು ಕೊರೊನಾ ಕಾರಣ ನೀಡಿ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ಪಂಜಾಬ್ ಕ್ರಿಕೆಟ್ ಮಂಡಳಿ ನಿರ್ಧರಿಸಿತ್ತು. ಆದರೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ ಕಾರಣ ಬಿಸಿಸಿಐ ಪಿಸಿಎ ಜೊತೆ ಮಾತನಾಡಿ ಶೇ 50ರಷ್ಟು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಟ್ಟಿದೆ.
ಇದನ್ನೂ ಓದಿ:ಭಾರತದ ಟೆಸ್ಟ್ ಕ್ರಿಕೆಟ್ ಯಶಸ್ಸಿಗೆ ಕೊಹ್ಲಿ ಕಾರಣ: ರೋಹಿತ್ ಶರ್ಮಾ