ETV Bharat / sports

ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್ ಮಾಡಿ ಕ್ರಿಕೆಟ್ ಅಭಿಮಾನಿಗಳ ಹುಬ್ಬೇರಿಸಿದ ಕೊಹ್ಲಿ - ಭಾರತ vs ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ

ಇಂದಿನ ಪಂದ್ಯದಲ್ಲಿ ಕೊಹ್ಲಿಗೆ ವಿಶ್ರಾಂತಿ ನೀಡಿದ್ದರಿಂದ ರೋಹಿತ್ ಶರ್ಮಾ ಭಾರತ ತಂಡದ ನೇತೃತ್ವ ವಹಿಸಿದ್ದರು. ಆದರೂ ಕೊಹ್ಲಿ ಫೀಲ್ಡಿಂಗ್ ಮಾಡಲು ಆಗಮಿಸಿದರು. ಅಲ್ಲದೆ ಒಂದು ಓವರ್​ ಬೌಲಿಂಗ್ ಕೂಡ ಮಾಡಿದರು.

Kohli bowling
ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್ ಮಾಡಿದ ಕೊಹ್ಲಿ
author img

By

Published : Oct 20, 2021, 7:25 PM IST

ದುಬೈ: ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ವಿಶ್ವಕಪ್​ ಅಭ್ಯಾಸ ಪಂದ್ಯದಲ್ಲಿ ಬೌಲಿಂಗ್ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಇಂದಿನ ಪಂದ್ಯದಲ್ಲಿ ಕೊಹ್ಲಿಗೆ ವಿಶ್ರಾಂತಿ ನೀಡಿದ್ದರಿಂದ ರೋಹಿತ್ ಶರ್ಮಾ ಭಾರತ ತಂಡದ ನೇತೃತ್ವ ವಹಿಸಿದ್ದರು. ಆದರೂ ಕೊಹ್ಲಿ ಫೀಲ್ಡಿಂಗ್ ಮಾಡಲು ಆಗಮಿಸಿದರು. ಅಲ್ಲದೆ ಒಂದು ಓವರ್​ ಬೌಲಿಂಗ್ ಕೂಡ ಮಾಡಿದರು.

ಕೊಹ್ಲಿ ಈ ಹಿಂದಿನ ಟಿ20 ವಿಶ್ವಕಪ್​ನಲ್ಲೂ ಬೌಲಿಂಗ್ ಮಾಡಿ ಯಶಸ್ವಿಯಾಗಿದ್ದರು. ಈ ಪಂದ್ಯದ ಟಾಸ್​ ವೇಳೆ ರೋಹಿತ್ ಭಾರತ ತಂಡಕ್ಕೆ ವಿಶ್ವಕಪ್​ನಲ್ಲಿ ನಾನು , ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್​ 6ನೇ ಬೌಲಿಂಗ್ ಆಯ್ಕೆಯಾಗಿದ್ದೇವೆ ಎಂದು ತಮಾಷೆ ಮಾಡಿದ್ದರು. ಆದರೆ ಕೊಹ್ಲಿ ನಿಜವಾಗಿಯೂ ಬೌಲಿಂಗ್ ಮಾಡಿ ಅಚ್ಚರಿ ಮೂಡಿಸಿದರು.

ಕೊಹ್ಲಿಯನ್ನು ಬೌಲಿಂಗ್​ನಲ್ಲಿ ನೋಡಿದ ಅಭಿಮಾನಿಗಳು ಟ್ವಿಟರ್​ನಲ್ಲಿ ವಿಡಿಯೋ, ಫೋಟೋಗಳನ್ನು ಶೇರ್​ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.

ಇದನ್ನು ಓದಿ:ಐಪಿಎಲ್​ನಲ್ಲಿನ ನನ್ನ ಯಶಸ್ಸು ಎಬಿಡಿ ಮತ್ತು ಕೊಹ್ಲಿಗೆ ಸಲ್ಲಬೇಕು: ಮ್ಯಾಕ್ಸ್​ವೆಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.