ದುಬೈ: ನೆದರ್ಲೆಂಡ್ ತಂಡದ ಸ್ಟಾರ್ ಆಲ್ ರೌಂಡರ್ ರ‍್ಯಾನ್ ಟೆನ್ ಡೋಶೇಟ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. ಶ್ರೀಲಂಕಾ ವಿರುದ್ಧ ಶುಕ್ರವಾರ ನಡೆದ ಕ್ವಾಲಿಫೈಯರ್ನ ಕೊನೆಯ ಪಂದ್ಯದ ಬಳಿಕ ನೆದರ್ಲೆಂಡ್ಸ್ ತಂಡದ ಆಲ್ರೌಂಡರ್ ನಿವೃತ್ತಿ ಘೋಷಿಸಿದರು.
41 ವರ್ಷದ ಆಟಗಾರ 2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅವರು ಏಕದಿನ ಕ್ರಿಕೆಟ್ನಲ್ಲಿ 67ರ ವಿಶ್ವದಾಖಲೆಯ ಸರಾಸರಿಯೊಂದಿಗೆ 33 ಪಂದ್ಯಗಳಲ್ಲಿ 1541 ರನ್ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಡಸೆನ್(65) ಮಾತ್ರ 60 ಸರಾಸರಿ ಹೊಂದಿರುವ ಬ್ಯಾಟರ್ ಆಗಿದ್ದಾರೆ.
41ರ ಹರೆಯದ ಆಲ್ರೌಂಡರ್ ಏಕದಿನ ಕ್ರಿಕೆಟ್ನಲ್ಲಿ 1541, ಟಿ20ಐ ಯಲ್ಲಿ 533, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 11,298, ಲಿಸ್ಟ್ ಎ ಕ್ರಿಕೆಟ್ನಲ್ಲಿ 6,166 ಮತ್ತು ಟಿ20 ಕ್ರಿಕೆಟ್ನಲ್ಲಿ 7597ರನ್ಗಳಿಸಿದ್ದಾರೆ. ಬೌಲಿಂಗ್ನಲ್ಲಿ ನೋಡುವುದಾದರೆ, ಏಕದಿನ ಪಂದ್ಯಗಳಲ್ಲಿ 55 ಮತ್ತು 24 ಟಿ20 ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದಾರೆ.
"ಈ ಪ್ರವಾಸ ಕಠಿಣವಾಗಿದೆ, ವಿದಾಯ ಘೋಷಣೆ ಮಾಡುವುದಕ್ಕೆ ಇದು ಸರಿಯಾದ ಸಮಯವಲ್ಲ. ಆದರೆ ತಂಡದ ಪ್ರಯತ್ನದ ಭಾಗವಾಗಿದ್ದಕ್ಕೆ ಹೆಮ್ಮೆಯಿದೆ. ನನಗೆ ನೆದರ್ಲೆಂಡ್ಸ್ ತಂಡವನ್ನು ಪ್ರತಿನಿಧಿಸಿದ್ದಕ್ಕೆ ಹೆಮ್ಮೆಯಿದೆ" ಎಂದು ರಿಯಾನ್ ಟೆನ್ ಡೋಶೇಟ್ ಹೇಳಿದರು.
ಇದನ್ನು ಓದಿ:ಇಂಡೋ- ಪಾಕ್ ಕದನಕ್ಕೆ ಕ್ಷಣಗಣನೆ: ಹಿಂದಿನ 5 ದಿಗ್ವಿಜಯಗಳ ಅಂಕಿ- ಅಂಶ ಇಲ್ಲಿದೆ ನೋಡಿ