ಅಬುಧಾಬಿ: ಐಪಿಎಲ್ನಲ್ಲಿ ತನ್ನ ವೇಗದ ಬೌಲಿಂಗ್ನಿಂದ ಕ್ರಿಕೆಟ್ ಪ್ರಿಯರನ್ನು ಬೆರಗುಗೊಳಿಸಿರುವ ಸನ್ರೈಸರ್ಸ್ ಹೈದರಾಬಾದ್ ವೇಗಿ ಉಮ್ರಾನ್ ಮಲಿಕ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಆರ್ಸಿಬಿ ಮತ್ತು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಜಮ್ಮು- ಕಾಶ್ಮೀರದ ಯುವಕನ ಸಾಮರ್ಥ್ಯವನ್ನು ಗಮನಹರಿಸಬೇಕಾಗಿದೆ ಎಂದು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 21 ವರ್ಷದ ಜಮ್ಮು ಮತ್ತು ಕಾಶ್ಮೀರದ ಯುವಕ 152.95 Kmh ನಲ್ಲಿ ಬೌಲಿಂಗ್ ಮಾಡಿದ್ದನ್ನು ನೋಡಿ ಎಲ್ಲರೂ ಆಶ್ಚರ್ಯಕ್ಕೆ ಒಳಗಾಗಿದ್ದರು. ಸ್ತತಃ ಕೊಹ್ಲಿ ಕೂಡ ಹೈದರಾಬಾದ್ ಫ್ರಾಂಚೈಸಿ ಯುವಕ ಬೌಲಿಂಗ್ ನೀಡಿ ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದರು.
ಈ ಟೂರ್ನಮೆಂಟ್ ಪ್ರತಿ ವರ್ಷ ಯುವ ಆಟಗಾರರನ್ನು ಹೊರ ತರುತ್ತಿದೆ. 150ರಲ್ಲಿ ಬೌಲಿಂಗ್ ಮಾಡಬಲ್ಲ ಯುವಕನನ್ನು ನೋಡುವುದಕ್ಕೆ ತುಂಬಾ ಖುಷಿಯಾಗುತ್ತದೆ. ಇಲ್ಲಿಂದಲೇ ಆತನ ಪ್ರಗತಿ ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಹೈದರಾಬಾದ್ ವಿರುದ್ಧ 4 ರನ್ಗಳ ಸೋಲು ಕಂಡ ಬಳಿಕ ಪ್ರಶಸ್ತಿ ಸಮಾರಂಭದಲ್ಲಿ ಕೊಹ್ಲಿ ತಿಳಿಸಿದ್ದಾರೆ.
ವೇಗದ ಬೌಲರ್‌ಗಳ ಬೆಳವಣಿಗೆ ಭಾರತೀಯ ಕ್ರಿಕೆಟ್‌ಗೆ ಒಳ್ಳೆಯ ಸಂಕೇತವಾಗಿದೆ. ಎಲ್ಲರೂ ಈ ರೀತಿಯ ಪ್ರತಿಭೆ ನೋಡಿದಾಗಲೆಲ್ಲ ಅವರ ಮೇಲೆ ದೃಷ್ಟಿ ಹಾಯಿಸುತ್ತಿರುತ್ತಾರೆ ಮತ್ತು ಐಪಿಎಲ್ ಹಂತದಲ್ಲಿ ಅವರ ಪ್ರದರ್ಶನವನ್ನು ಗರಿಷ್ಠಮಟ್ಟದಲ್ಲಿದೆಯೇ ಎಂದು ಖಚಿತಪಡಿಸಿಕೊಳ್ಳುವ ಅಗತ್ಯವಿದೆ ಎಂದು ಆರ್ಸಿಬಿ ನಾಯಕ ತಿಳಿಸಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ 141 ರನ್ಗಳಿಸಿದರೆ, ಇದಕ್ಕುತ್ತರವಾಗಿ ಆರ್ಸಿಬಿ 137 ರನ್ಗಳಿಸಿ 4 ರನ್ಗಳಿಂದ ಸೋಲು ಕಂಡಿತು.
ಇದನ್ನೂ ಓದಿ:ಭಾರತದ ಟಿ-20 ವಿಶ್ವಕಪ್ ತಂಡದಲ್ಲಿ ಒಬ್ಬ ವೇಗಿಯ ಕೊರತೆಯಿದೆ: ಎಂಎಸ್ಕೆ ಪ್ರಸಾದ್