ETV Bharat / sports

ವಿಶ್ವಕಪ್​ಗೆ ಅಫ್ಘಾನಿಸ್ತಾನ ತಂಡ ಪ್ರಕಟ.. ವಿರಾಟ್​​ಗೆ​ ಎದುರಾಗಲಿದ್ದಾರೆ ನವೀನ್ - ಉಲ್ - ಹಕ್ - Afghanistan World Cup squad

ಏಕದಿನ ವಿಶ್ವಕಪ್​ಗೆ ಅಫ್ಘಾನಿಸ್ತಾನ ತಂಡ ಪ್ರಕಟವಾಗಿದ್ದು ನವೀನ್-ಉಲ್-ಹಕ್ ಎರಡು ವರ್ಷಗಳ ನಂತರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Naveen-ul-Haq returns
ವಿಶ್ವಕಪ್​ಗೆ ಅಫ್ಘಾನಿಸ್ತಾನ ತಂಡ ಪ್ರಕಟ
author img

By ETV Bharat Karnataka Team

Published : Sep 13, 2023, 11:04 PM IST

ಕಾಬೂಲ್(ಅಫ್ಘಾನಿಸ್ತಾನ): ಭಾರತದಲ್ಲಿ ನಡೆಯುವ ವಿಶ್ವಕಪ್​ಗೆ ಇನ್ನು ಕೇವಲ 20 ದಿನ ಮಾತ್ರ ಬಾಕಿ ಇದೆ. ಹೀಗಿರುವಾಗ ಅಫ್ಘಾನಿಸ್ತಾನ ಐಸಿಸಿ ಪುರುಷರ ವಿಶ್ವಕಪ್‌ಗಾಗಿ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. 2021ರಲ್ಲಿ ಕೊನೆಯ ಬಾರಿಗೆ ಲಿಸ್ಟ್ ಎ ಪಂದ್ಯವನ್ನು ಆಡಿದ ವೇಗಿ ನವೀನ್-ಉಲ್-ಹಕ್ ಎರಡು ವರ್ಷಗಳ ಅಂತರದ ನಂತರ ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಆದರೆ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಹಿರಿಯ ಆಲ್‌ರೌಂಡರ್ ಗುಲ್ಬದಿನ್ ನೈಬ್ ಸ್ಥಾನ ತಪ್ಪಿಸಿಕೊಂಡಿದ್ದಾರೆ.

ನವೀನ್ ಅಫ್ಘಾನಿಸ್ತಾನ ಪರ ಏಳು ಏಕದಿನ ಪಂದ್ಯಗಳನ್ನು ಆಡಿದ್ದಾರೆ. 25.42 ಸರಾಸರಿಯಲ್ಲಿ 14 ವಿಕೆಟ್ ಪಡೆದಿದ್ದಾರೆ. ನೈಬ್ ಪಾಕಿಸ್ತಾನದ ಸರಣಿಯಲ್ಲಿ ತನ್ನ ಏಕದಿನ ಪುನರಾಗಮನದಲ್ಲಿ ಮಿಂಚಿದರು ಮತ್ತು ಏಷ್ಯಾಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದರು. ಆದರೂ ನೈಬ್​ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಗಾಯದಿಂದಾಗಿ ಏಷ್ಯಾಕಪ್‌ನಿಂದ ಹೊರಗುಳಿದ ನಂತರ ಅಜ್ಮತುಲ್ಲಾ ಒಮರ್ಜಾಯ್ ಕೂಡ ತಂಡಕ್ಕೆ ಮರಳಿದ್ದಾರೆ. ಹಶ್ಮತುಲ್ಲಾ ಶಾಹಿದಿ ನೇತೃತ್ವದ ತಂಡವು ಏಷ್ಯಾಕಪ್‌ನಲ್ಲಿ ಆಡಿದ ಗುಂಪಿನಿಂದ ನಾಲ್ಕು ಬದಲಾವಣೆಗಳನ್ನು ಹೊಂದಿದೆ. ನೈಬ್ ಹೊರತುಪಡಿಸಿ ಕರೀಂ ಜನತ್, ಶರಫುದ್ದೀನ್ ಅಶ್ರಫ್ ಮತ್ತು ಸುಲಿಮಾನ್ ಸಫಿ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಉಳಿದ ತಂಡವು ಏಷ್ಯಾಕಪ್‌ನಂತೆಯೇ ಕಾಣುತ್ತದೆ, ಸ್ಪಿನ್ ವಿಭಾಗವು ರಶೀದ್ ಖಾನ್, ಮೊಹಮ್ಮದ್ ನಬಿ ಮತ್ತು ಯುವ ಗನ್‌ಗಳಾದ ಮುಜೀಬ್ ಉರ್ ರೆಹಮಾನ್ ಮತ್ತು ನೂರ್ ಅಹ್ಮದ್‌ ಅವರನ್ನು ಒಳಗೊಂಡಿದೆ. ಅಲ್ಲದೇ ನವೀನ್-ಉಲ್-ಹಕ್ ತಂಡಕ್ಕೆ ಮರಳುವುದರ ಜೊತೆಗೆ ಬೌಲಿಂಗ್​ನಲ್ಲಿ ಫಜಲ್ಹಕ್ ಫಾರೂಕಿ, ಅಬ್ದುಲ್ ರಹಮಾನ್ ಮತ್ತು ಒಮರ್ಜಾಯ್ ಅವರನ್ನು ಒಳಗೊಂಡಿದೆ.

ವಿರಾಟ್​, ನವೀನ್ ಫೈಟ್: ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಲಖನೌ ಸೂಪರ್​ ಜೈಂಟ್ಸ್​ ನಡುವಿನ ಪಂದ್ಯ ವೇಳೆ ವಿರಾಟ್​ ಕೊಹ್ಲಿ ಜೊತೆಗೆ ನವೀನ್-ಉಲ್-ಹಕ್ ಜಗಳ ಮಾಡಿಕೊಂಡಿದ್ದರು. ಇದು ಐಪಿಎಲ್​ನಲ್ಲಿ ದೊಡ್ಡ ಮಟ್ಟದ ಟ್ರೋಲ್​ಗೆ ಒಳಗಾಗಿತ್ತು. ನವೀನ್​ ಈಗ ವಿಶ್ವಕಪ್​ನ ತಂಡದ ಭಾಗವಾಗಿದ್ದಾರೆ. ವಿರಾಟ್​ ಕೊಹ್ಲಿಯನ್ನು ಕನಿಷ್ಠ ಒಂದು ಪಂದ್ಯದಲ್ಲಿ ಎದುರಿಸಬೇಕಾಗುತ್ತದೆ. ಈ ಇಬ್ಬರ ನಡುವಿನ ಫೈಟ್​ ಹೇಗಿರಲಿದೆ ಎಂಬುಂದು ಇನ್ನೂ ಕುತೂಹಲಕಾರಿ ವಿಷಯವಾಗಿದೆ.

ಅಫ್ಘಾನಿಸ್ತಾನ ವಿಶ್ವಕಪ್ ತಂಡ: ಹಶ್ಮತುಲ್ಲಾ ಶಾಹಿದಿ (ಸಿ), ರಹಮಾನುಲ್ಲಾ ಗುರ್ಬಾಜ್ (ವಾಕ್), ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ರಹಮತ್ ಶಾ, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಝೈ, ರಶೀದ್, ಮುಜೀಬ್, ಫುರ್ ರಖ್ಖಾಲ್ , ಅಬ್ದುಲ್ ರಹಮಾನ್, ನವೀನ್-ಉಲ್-ಹಕ್.

ಮೀಸಲು: ಗುಲ್ಬದಿನ್ ನೈಬ್, ಶರಫುದ್ದೀನ್ ಅಶ್ರಫ್, ಫರೀದ್ ಅಹ್ಮದ್.

ಇದನ್ನೂ ಓದಿ: ಪಾಕ್​ನ ಇಬ್ಬರು ಸ್ಟಾರ್ ಬೌಲರ್​ಗಳಿಗೆ ಗಾಯ.. ಏಷ್ಯಾಕಪ್​ನಿಂದಲೇ ಹೊರಬಿದ್ದ ನಸೀಮ್​ ಶಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.