ETV Bharat / sports

ನಟರಾಜನ್​ ಡೆತ್ ಓವರ್​ ಸ್ಪೆಷಲಿಸ್ಟ್... ವಿಶ್ವಕಪ್ ವೇಳೆ ಮಿಸ್​ ಮಾಡಿಕೊಂಡೆವು: ರವಿ ಶಾಸ್ತ್ರಿ

ಆಸ್ಟ್ರೇಲಿಯಾದಲ್ಲಿ 2021ರ ಐತಿಹಾಸಿಕ ಟೆಸ್ಟ್​ ಸರಣಿ ಜಯದ ವೇಳೆ ಬೆಳಕಿಗೆ ಬಂದಿದ್ದ ನಟರಾಜನ್​, ನಂತರದ ದಿನಗಳಲ್ಲಿ ಮಂಡಿ ನೋವಿಗೆ ತುತ್ತಾಗಿ ತಂಡದಿಂದ ಹೊರಬಿದ್ದರು. ಇದೀಗ ಐಪಿಎಲ್ ಮೂಲಕ ಮತ್ತೆ ಕಮ್​ಬ್ಯಾಕ್ ಮಾಡಿದ್ದಾರೆ.

Natarajan death over specialist
ನಟರಾಜನ್ -ರವಿ ಶಾಸ್ತ್ರಿ
author img

By

Published : Apr 5, 2022, 10:34 PM IST

ಮುಂಬೈ: ಟಿ.ನಟರಾಜನ್​ ಒಬ್ಬ ಡೆತ್ ಓವರ್​ ಸ್ಪೆಷಲಿಸ್ಟ್​ ಎಂದು ಬಣ್ಣಿಸಿರುವ ಮಾಜಿ ಕೋಚ್​ ರವಿಶಾಸ್ತ್ರಿ, ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್​ ವೇಳೆ ಭಾರತ ತಂಡ ಖಂಡಿತ ಎಡಗೈ ವೇಗಿಯ ಸೇವೆಯನ್ನು ಮಿಸ್ ಮಾಡಿಕೊಂಡಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾದಲ್ಲಿ 2021ರ ಐತಿಹಾಸಿಕ ಟೆಸ್ಟ್​ ಸರಣಿ ಜಯದ ವೇಳೆ ಬೆಳಕಿಗೆ ಬಂದಿದ್ದ ನಟರಾಜನ್​, ನಂತರದ ದಿನಗಳಲ್ಲಿ ಮಂಡಿ ನೋವಿಗೆ ತುತ್ತಾಗಿ ತಂಡದಿಂದ ಹೊರಬಿದ್ದರು. ಇದೀಗ ಐಪಿಎಲ್ ಮೂಲಕ ಮತ್ತೆ ಕಮ್​ಬ್ಯಾಕ್ ಮಾಡಿದ್ದಾರೆ.

ನಟರಾಜನ್ ಬಗ್ಗೆ ತುಂಬಾ ಖುಷಿಯಿದೆ. ನಾವು ಅವರನ್ನು ವಿಶ್ವಕಪ್​ ವೇಳೆ ಮಿಸ್​ ಮಾಡಿಕೊಂಡೆವು. ಅವರೇನಾದರೂ ಆ ಸಂದರ್ಭದಲ್ಲಿ ಫಿಟ್​ ಆಗಿದ್ದರೆ, ಖಂಡಿತ ತಂಡದಲ್ಲಿ ಇರುತ್ತಿದ್ದರು ಎಂದು ಶಾಸ್ತ್ರಿ ಇಎಸ್​ಪಿಎನ್​​ ಕ್ರಿಕೆಟ್​ಇನ್ಫೋದ ಟಿ-20 ಟೈಮ್​ ಔಟ್​ನಲ್ಲಿ ಹೇಳಿದ್ದಾರೆ.

" ಅವರು ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನಾಡುವ ಸಂದರ್ಭದಲ್ಲಿ ಗಾಯಕ್ಕೆ ಒಳಗಾದರು. ಅವರನ್ನು ವಿಶ್ವಕಪ್​ನಲ್ಲಿ ನಿಜವಾಗಿಯೂ ಮಿಸ್​ ಮಾಡಿಕೊಂಡೆವು. ಅವರೊಬ್ಬ ನುರಿತ ಡೆತ್​ ಬೌಲರ್​, ಅತ್ಯುತ್ತಮ ಕೌಶಲ್ಯಭರಿತ ಯಾರ್ಕರ್​ ಎಸೆಯಬಲ್ಲರು. ಶ್ರೇಷ್ಠ ನಿಯಂತ್ರಣ ಹೊಂದಿದ್ದಾರೆ. ಸ್ಕಿಡ್ಡಿ ಕೂಡ. ಬ್ಯಾಟರ್​ ಆಲೋಚಿಸುವುದಕ್ಕಿಂತ ವೇಗವಾಗಿ ಬ್ಯಾಟ್​ಗೆ ಬಡಿಯಬಲ್ಲರು" ಎಂದು ಶಾಸ್ತ್ರಿ ತಮಿಳುನಾಡು ಬೌಲರ್​​ಅನ್ನು ಪ್ರಶಂಸಿದ್ದಾರೆ.

ಶಾಸ್ತ್ರಿ ಮುಖ್ಯ ಕೋಚ್​ ಆಗಿದ್ದ ವೇಳೆ, 2021 ಆಸ್ಟ್ರೇಲಿಯಾ ಪ್ರವಾಸದಲ್ಲಿ ನಟರಾಜನ್​ ಭಾರತ ತಂಡ ಮೂರು ಸ್ವರೂಪದ ತಂಡಕ್ಕೂ ಪದಾರ್ಪಣೆ ಮಾಡಿದ್ದರು. ಪದಾರ್ಪಣೆ ಮಾಡಿದ ಎಲ್ಲಾ ಪಂದ್ಯಗಳಲ್ಲೂ ಭಾರತ ಜಯ ಸಾಧಿಸಿದ್ದರಿಂದ ಅವರನ್ನು ಲಕ್ಕಿ ಚಾರ್ಮ್​ ಎಂದಿದ್ದಾರೆ.

" ಅವರನ್ನು ಆಯ್ಕೆ ಮಾಡಿದ ಪ್ರತಿಭಾರಿಯೂ ನಾವು ಜಯ ಸಾಧಿಸಿದ್ದೇವೆ. ಆತನ ಟಿ20 ಪದಾರ್ಪಣೆಯಲ್ಲಿ ಭಾರತ ಗೆದ್ದಿದೆ, ಟೆಸ್ಟ್​ ಕ್ರಿಕೆಟ್​ ಪದಾರ್ಪಣೆಯಲ್ಲಿ ಭಾರತ ಜಯ ಸಾಧಿಸಿದೆ. ಟೆಸ್ಟ್​ ಸರಣಿಗೆ ಕೇವಲ ನೆಟ್​ ಬೌಲರ್​ ಆಗಿ ಬಂದ ಆತ ಉಳಿದೆರಡು ಸ್ವರೂಪಕ್ಕೂ ಪದಾರ್ಪಣೆ ಮಾಡಿ ಸೈ ಎನಿಸಿಕೊಂಡರು" ಎಂದು ರವಿಶಾಸ್ತ್ರಿ ಮೆಚ್ಚುಗೆ ವ್ಯಕ್ತಪಡಿಸದ್ದಾರೆ.

ಗಾಯದಿಂದ ಚೇತರಿಸಿಕೊಂಡಿರುವ ನಟರಾಜನ್​ ಐಪಿಎಲ್​ನಲ್ಲಿ 4 ಕೋಟಿ ರೂಗಳಿಗೆ ಮತ್ತೆ ಹೈದರಾಬಾದ್​ ಸೇರಿದ್ದಾರೆ. ಅವರು ಕಳೆದ 2 ಪಂದ್ಯಗಳಲ್ಲಿ 43ಕ್ಕೆ2 ಮತ್ತು 26ಕ್ಕೆ 2 ವಿಕೆಟ್ ಪಡೆದಿದ್ದರು. ಆದರೆ, ಈ ಎರಡೂ ಪಂದ್ಯಗಳಲ್ಲೂ ಎಸ್​ಆರ್​​ಹೆಚ್​​ ಸೋಲುಕಂಡಿದೆ. ಏಪ್ರಿಲ್ 9ರಂದು ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ 3ನೇ ಪಂದ್ಯವನ್ನಾಡಲಿದೆ.

ಇದನ್ನೂ ಓದಿ:ಪೇನ್​ ಕಿಲ್ಲರ್​ ಹಾಕಿಸಿಕೊಂಡು ಬ್ಯಾಟಿಂಗ್ ಮಾಡಿದ್ದೆ: ಆ ಪ್ರವಾಸ ನನ್ನ ಜೀವನದ ಟರ್ನಿಂಗ್ ಪಾಯಿಂಟ್​ ಎಂದ ಪಂತ್ ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.