ETV Bharat / sports

ಕ್ರಿಕೆಟ್​ ವಿಶ್ವಕಪ್​​: ಮಧ್ಯಮ ಓವರ್​ಗಳಲ್ಲಿ ಡಾಮಿನೇಟ್​ ಮಾಡಿದ ತಂಡಗಳೇ ಟೂರ್ನಿಯ ಹೀರೋಗಳು.. ಹೀಗಿದೆ ತಂಡಗಳ ಅಂಕಿ-ಅಂಶ - ETV Bharath Kannada news

ವಿಶ್ವಕಪ್​ನಲ್ಲಿ ಮಧ್ಯಮ ಓವರ್​ಗಳಲ್ಲಿ ಪ್ರಬಾವಿ ಆಟವನ್ನು ಪ್ರದರ್ಶಿಸಿದ ತಂಡಗಳು ಹೆಚ್ಚು ಗೆಲುವನ್ನು ಕಂಡಿದೆ. ಈ ಬಗ್ಗೆ ಈಟಿವಿ ಭಾರತದ ಆದಿತ್ಯ ಇಘೆ ಬರೆದ ವಿಶ್ಲೇಷಣೆ ಹೀಗಿದೆ..

ಕ್ರಿಕೆಟ್​ ವಿಶ್ವಕಪ್​​
ಕ್ರಿಕೆಟ್​ ವಿಶ್ವಕಪ್​​
author img

By ETV Bharat Karnataka Team

Published : Oct 28, 2023, 4:34 PM IST

ಹೈದರಾಬಾದ್: 2023ರ ವಿಶ್ವಕಪ್ ಅರ್ಧದಷ್ಟು ಮುಕ್ತಾಯಗೊಂಡಿದೆ. ಈ ಟೂರ್ನಿಯಲ್ಲಿ ಟಾಪ್​ ಫೋರ್​ ಬರಬಹುದು ಎಂಬ ತಂಡಗಳು ಗೆಲುವು ಕಾಣುವಲ್ಲಿ ಎಡವಿವೆ. ಆದರೆ ದುರ್ಬಲ ತಂಡಗಳು ಎಂದೇ ಗುರುತಿಸಲಾಗುತ್ತಿದ್ದ ಟೀಮ್​ಗಳು ಅಚ್ಚರಿಯ ಫಲಿತಾಂಶವನ್ನು ನೀಡಿವೆ. ಅಂಕಪಟ್ಟಿಯಲ್ಲಿ ಟಾಪ್​ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿರುವ ತಂಡಗಳ ಗೆಲುವಿನ ಸೂತ್ರ ಹೀಗಿದೆ..

ವಿಶ್ವಕಪ್ 2023ರ ವಿಶ್ವಕಪ್​ನಲ್ಲಿ ಭಾರತ ಸತತ ಐದು ಪಂದ್ಯಗಳನ್ನು ಗೆದ್ದು ಯಶಸ್ವಿ ತಂಡ ಎನಿಸಿಕೊಂಡಿದೆ. ಅಲ್ಲದೇ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಸೋಲು ಕಂಡರೂ ಉತ್ತಮವಾಗಿ ಟೂರ್ನಿಯಲ್ಲಿ ಮರಳಿದ್ದು, ಗೆಲುವಿನ ಲಯ ಮತ್ತು ಸೂತ್ರವನ್ನು ಕಂಡುಕೊಂಡಿದ್ದಾರೆ. ಈ ತಂಡಗಳ ಪ್ರಮುಖ ಗೆಲುವಿನ ಸೂತ್ರ ಮಧ್ಯಮ ಓವರ್​ಗಳ ನಿಯಂತ್ರಣ ಆಗಿದೆ.

ಕಳೆದ ಎರಡು ವಿಶ್ವಕಪ್ ಪಂದ್ಯಾವಳಿಗಳ ರನ್ನರ್​​ಅಪ್​ ಆದ ನ್ಯೂಜಿಲೆಂಡ್ ಇದುವರೆಗೆ ಮಧ್ಯಮ ಓವರ್‌ಗಳನ್ನು ಸೂಕ್ತವಾಗಿ ಬಳಸಿಕೊಂಡಿದೆ. ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಅಸಾಧಾರಣ ಪ್ರದರ್ಶನದ ಹೊರತಾಗಿಯೂ. ಕಳೆದ ಐದು ಪಂದ್ಯಗಳಲ್ಲಿ, ಕಿವಿಸ್​ ಬ್ಯಾಟರ್ಸ್ ಮಧ್ಯಮ ಓವರ್‌ಗಳಲ್ಲಿ 97.15 ಸ್ಟ್ರೈಕ್ ರೇಟ್‌ನೊಂದಿಗೆ 171 ರನ್ ಸರಾಸರಿಯಲ್ಲಿ 853 ರನ್ ಗಳಿಸುವ ಮೂಲಕ ಮಧ್ಯಮ ಓವರ್‌ಗಳಲ್ಲಿ ಹೆಚ್ಚು ರನ್ ಗಳಿಸಿದ ತಂಡಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಎರಡು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಭಾರತವು ನಡೆಯುತ್ತಿರುವ ಆವೃತ್ತಿಯಲ್ಲಿ ಎಲ್ಲಾ ಐದು ಪಂದ್ಯಗಳನ್ನು ಗೆದ್ದು ಉತ್ತಮ ರನ್ ಗಳಿಸುತ್ತಿದೆ. ರೋಹಿತ್ ಅಂಡ್ ಕೋ 776 ರನ್‌ ಸಿಡಿಸಿದ್ದು, 155.2 ಸರಾಸರಿಯಲ್ಲಿ 95.45 ರಲ್ಲಿ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟಿಂಗ್​ ಮಾಡಿದ್ದಾರೆ.

ಐದು ಪಂದ್ಯಗಳಲ್ಲಿ ನಡುವಿನ 30-ಓವರ್‌ಗಳ ಅವಧಿಯಲ್ಲಿ 184 ಸರಾಸರಿಯಲ್ಲಿ 920 ರನ್‌ಗಳೊಂದಿಗೆ ಹರಿಣಗಳ ಪ್ರದರ್ಶನ ಉತ್ತಮವಾಗಿದೆ. 102.22ರ ಸ್ಟ್ರೈಕ್ ರೇಟ್‌ನಲ್ಲಿ ಹರಿಣಗಳ ಬ್ಯಾಟರ್​​ಗಳು ರನ್​ ಕಲೆ ಹಾಕಿದ್ದಾರೆ. ಬಲಿಷ್ಠ ಆಸ್ಟ್ರೇಲಿಯನ್ನರು ನಿರೀಕ್ಷೆಗೆ ತಕ್ಕಂತೆ ಆರಂಭಿಕ ಪಂದ್ಯದಲ್ಲಿ ಪ್ರದರ್ಶನ ನೀಡದಿದ್ದರೂ, ನಂತರದ ಮೂರು ಪಂದಯಗಳಲ್ಲಿ ಕಮ್​ಬ್ಯಾಕ್​ ಮಾಡಿದರು. ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ಮಧ್ಯಮ ಓವರ್​ಗಳಲ್ಲಿ ತಂಡ 199 ಮತ್ತು 177 ರನ್​ ಕಲೆಹಾಕಿ ಸೋಲುಂಡಿತ್ತು. ನಂತರ ಲಯಕ್ಕೆ ಮರಳಿರುವ ತಂಡ ಮಧ್ಯಮ ಓವರ್‌ಗಳಲ್ಲಿ 154.6 ಸರಾಸರಿಯಲ್ಲಿ 773 ರನ್ ಗಳಿಸಿದೆ.

11 ರಿಂದ 41ನೇ ಓವರ್​ನಲ್ಲಿ ತಂಡಗಳ ಬ್ಯಾಟಿಂಗ್​ ಅಂಕಿ-ಅಂಶ
ತಂಡಪಂದ್ಯಗಳುರನ್​ವಿಕೆಟ್​ ಪತನರನ್​ ಸರಾಸರಿ (ಇನ್ನಿಂಗ್ಸ್​​​​) ಸ್ಟ್ರೈಕ್​ ರೇಟ್​​
ನ್ಯೂಜಿಲೆಂಡ್​​58539170.697.15
ಭಾರತ577612155.295.45
ದಕ್ಷಿಣ ಆಫ್ರಿಕಾ592017184102.22
ಪಾಕಿಸ್ತಾನ 584420168.893.78
ಶ್ರೀಲಂಕಾ58001916098.28
ಆಸ್ಟ್ರೇಲಿಯಾ577321154.688.65
ಬಾಂಗ್ಲಾದೇಶ564820129.674.65
ಇಂಗ್ಲೆಂಡ್​575228150.4100
ಅಫ್ಘಾನಿಸ್ತಾನ565228130.476.53
ನೆದರ್ಲೆಂಡ್​​​561231122.477.86

ಬೌಲಿಂಗ್​ನಲ್ಲಿ: ಮಧ್ಯಮ ಓವರ್​ಗಳಲ್ಲಿ ನ್ಯೂಜಿಲೆಂಡ್ ತಂಡ ಉತ್ತಮ ನಿರ್ವಹಣೆ ಮಾಡಿದೆ. ಕಿವೀಸ್ 29.93 ಸ್ಟ್ರೈಕ್ ರೇಟ್‌ನೊಂದಿಗೆ 25.86 ಸರಾಸರಿಯೊಂದಿಗೆ 29 ವಿಕೆಟ್‌ಗಳನ್ನು ಪಡೆದಿದೆ. ಪ್ರತಿ ಓವರ್‌ಗೆ 4.83 ರನ್‌ಗಳ ಎಕಾನಮಿಯನ್ನು ಸಾಧಿಸಿದೆ. ಭಾರತೀಯ ಬೌಲರ್‌ಗಳು 31.52 ಸರಾಸರಿಯಲ್ಲಿ ಒಟ್ಟಾರೆಯಾಗಿ 23 ವಿಕೆಟ್‌ಗಳನ್ನು ಪಡೆದಿದ್ದಾರೆ. ಗಮನಾರ್ಹವೆಂದರೆ, ವೇಗಿ ಜಸ್ಪ್ರೀತ್ ಬುಮ್ರಾ 11 ವಿಕೆಟ್‌ಗಳೊಂದಿಗೆ ತಂಡದ ಪ್ರಮುಖ ವಿಕೆಟ್‌ ಟೇಕರ್‌ ಆಗಿದ್ದಾರೆ.

ಟೂರ್ನಮೆಂಟ್‌ನಲ್ಲಿ ಪ್ರತಿ 29.33 ಎಸೆತಗಳ ನಂತರ ಒಂದು ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ಬೌಲಿಂಗ್ ಮಾರಕವಾಗಿದೆ. ಮಧ್ಯಮ ಓವರ್‌ಗಳಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಹೊಂದಿರುವ ತಂಡಗಳ ಪಟ್ಟಿಯಲ್ಲಿ ಹರಿಣಗಳು ಎರಡನೇ ಸ್ಥಾನದಲ್ಲಿದ್ದಾರೆ. 27.59 ಸರಾಸರಿಯೊಂದಿಗೆ 27 ವಿಕೆಟ್‌ಗಳನ್ನು ಪಡೆದರು. ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾದ ಬೌಲಿಂಗ್ ಘಟಕವು ಕೇವಲ 30.71 ಸರಾಸರಿಯಲ್ಲಿ 24 ವಿಕೆಟ್‌ಗಳನ್ನು ಪಡೆದುಕೊಂಡಿದೆ.

ಮಧ್ಯಮ ಓವರ್​​ಗಳಲ್ಲಿ ಹೆಚ್ಚು ವಿಕೆಟ್​ ಪಡೆದ ತಂಡಗಳು
ತಂಡಪಂದ್ಯರನ್​ವಿಕೆಟ್ಎಕಾನಮಿಸರಾಸರಿಸ್ಟ್ರೈಕ್​ ರೇಟ್​​ಡಾಟ್​ ಬಾಲ್​
ನ್ಯೂಜಿಲೆಂಡ್​​5750295.1825.8629.93431
ದಕ್ಷಿಣ ಆಫ್ರಿಕಾ5745275.6427.5929.33451
ಆಸ್ಟ್ರೇಲಿಯಾ5737245.6330.7132.75360
ಭಾರತ5725234.8331.5239.13469
ನೆದರ್ಲೆಂಡ್​​5872195.8145.8947.37429
ಅಫ್ಘಾನಿಸ್ತಾನ5731185.2340.6146.56411
ಶ್ರೀಲಂಕಾ5841186.0646.7246.22391
ಬಾಂಗ್ಲಾದೇಶ5907176.1653.3552377
ಪಾಕಿಸ್ತಾನ5869176.1951.1249.59403
ಇಂಗ್ಲೆಂಡ್​5774135.8659.5460.92332

5ನೇ ಮತ್ತು 10ನೇ ಸ್ಥಾನದಲ್ಲಿರುವ ತಂಡಗಳು ಮಧ್ಯಮ ಓವರ್‌ಗಳಲ್ಲಿ 17+ ಕ್ಕೂ ಹೆಚ್ಚು ವಿಕೆಟ್‌ಗಳನ್ನು ಕಳೆದುಕೊಂಡಿವೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ದೈತ್ಯ ತಂಡಗಳಿಗೆ ಮಾರಕ ತಂಡವಾದ ಅಫ್ಘಾನಿಸ್ತಾನ 28 ವಿಕೆಟ್‌ಗಳನ್ನು ಕಳೆದುಕೊಂಡಿದೆ. ನೆದರ್ಲ್ಯಾಂಡ್ಸ್ ಮಧ್ಯಮ ಓವರ್‌ಗಳಲ್ಲಿ ಅತಿ ಹೆಚ್ಚು 31 ವಿಕೆಟ್‌, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಕ್ರಮವಾಗಿ 20, 20 ಮತ್ತು 19 ವಿಕೆಟ್ ಕಳೆದುಕೊಂಡಿವೆ.

ಒಟ್ಟಾರೆ ಮಧ್ಯಮ ಓವರ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುವ ತಂಡಗಳು ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನಗಳನ್ನು ಆಕ್ರಮಿಸಿಕೊಂಡಿದೆ. ಹೀಗಾಗಿ 11 ರಿಂದ 41 ರ ವರೆಗಿನ ಓವರ್​ಗಳು ಪಂದ್ಯದ ಫಲಿತಾಂಶದಲ್ಲಿ ಪ್ರಮುಖ ಪರಿಣಾಮ ಬೀರುತ್ತದೆ. ಪ್ರಬಲ ತಂಡಗಳಾಗಿದ್ದ ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾಕ್ಕೆ ಇನ್ನು ಒಂದು ಸೋಲು ಕಂಡರೂ ಟೂರ್ನಿಯಿಂದ ಹೊರ ಬೀಳಲಿವೆ ಅಲ್ಲಿಯವರಗೆ ಪ್ಲೇ ಆಫ್​ ಕನಸು ಜೀವಂತವಾಗಿರಲಿದೆ.

ಇದನ್ನೂ ಓದಿ: Cricket World Cup: ಹಿಮದ ನಾಡಲ್ಲಿ ರನ್​ಗಳ ಹೊಳೆ.. ಕಿವೀಸ್​ಗೆ ಬೃಹತ್​ ಟಾರ್ಗೆಟ್​ ನೀಡಿದ ಆಸೀಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.