ETV Bharat / sports

'ನಮ್ಮಮ್ಮ ಒಬ್ಬ ಹುಡುಗನ ನೋಡ್ಕೋ ಅಂದಿದ್ದಾರೆ, ನನ್ನ ಮದುವೆ ಆಗ್ತೀರಾ ಶ್ರೇಯಸ್?​'

ಸೋಮವಾರ ಕೆಕೆಆರ್ ತಂಡ ರಾಜಸ್ಥಾನ್ ರಾಯಲ್ಸ್​ ವಿರುದ್ಧ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ರಾಯಲ್ಸ್ ಜಾಸ್ ಬಟ್ಲರ್​ ಅವರ ಶತಕದ ನೆರವಿನಿಂದ 217 ರನ್​ಗಳಿಸಿದರೆ, ಕೆಕೆಆರ್ ಶ್ರೇಯಸ್​ ಅಯ್ಯರ್ ಮತ್ತು ಆ್ಯರೋನ್ ಫಿಂಚ್ ಅವರ ಅರ್ಧಶತಕದ ಹೊರತಾಗಿಯೂ 7 ರನ್​ಗಳ ರೋಚಕ ಸೋಲು ಕಂಡಿತು.

KKR Captain Shreyas Iyer Gets Marriage Proposal From a Fan
ಶ್ರೇಯಸ್ಅಯ್ಯರ್​​ಗೆ ಅಭಿಮಾನಿ ಪ್ರಪೋಸ್​
author img

By

Published : Apr 19, 2022, 7:07 PM IST

ಮುಂಬೈ: ಶ್ರೇಯಸ್ ಅಯ್ಯರ್ ಭಾರತದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿರುವ ಕ್ರಿಕೆಟಿಗ. ಪ್ರಸ್ತುತ ಐಪಿಎಲ್​ನಲ್ಲಿ ಕೆಕೆಆರ್ ನಾಯಕನಾಗಿರುವ ಇವರು ಅಭಿಮಾನಿಗಳ ನೆಚ್ಚಿನ ಕ್ರಿಕೆಟಿಗರಲ್ಲಿ ಒಬ್ಬರು. ಸೋಮವಾರ ಕೆಕೆಆರ್ ತಂಡ ರಾಜಸ್ಥಾನ್ ರಾಯಲ್ಸ್​ ವಿರುದ್ಧ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ರಾಯಲ್ಸ್ ಜಾಸ್ ಬಟ್ಲರ್​ ಅವರ ಶತಕದ ನೆರವಿನಿಂದ 217 ರನ್​ಗಳಿಸಿದರೆ, ಕೆಕೆಆರ್ ಶ್ರೇಯಸ್​ ಅಯ್ಯರ್ ಮತ್ತು ಆ್ಯರೋನ್ ಫಿಂಚ್ ಅವರ ಅರ್ಧಶತಕದ ಹೊರತಾಗಿಯೂ 7 ರನ್​ಗಳ ರೋಚಕ ಸೋಲು ಕಂಡಿತು.

ಈ ಪಂದ್ಯಕ್ಕೂ ಮುನ್ನ ಅಭಿಮಾನಿಯೊಬ್ಬರು ಕೆಕೆಆರ್ ನಾಯಕ ಶ್ರೇಯಸ್​ ಅಯ್ಯರ್​ ಅವರಿಗೆ ವಿವಾಹದ ಪ್ರಸ್ತಾಪ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನಮ್ಮ ಅಮ್ಮ ನನಗೆ ಹುಡುಗನನ್ನು ಹುಡುಕಲು ಹೇಳಿದ್ದಾರೆ, ಹಾಗಾಗಿ ನೀವು ನನ್ನನ್ನು ಮದುವೆಯಾಗ್ತೀರಾ ಶ್ರೇಯಸ್​ ಅಯ್ಯರ್​? ಎಂದು ಬರೆದಿರುವ ಪೋಸ್ಟರ್​ ಹಿಡಿದುಕೊಂಡು ಒಬ್ಬ ಯುವತಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ಕೆಕೆಆರ್ ತನ್ನ ಅಧಿಕೃತ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದೆ.

ಈ ರೀತಿಯ ವಿಚಿತ್ರ ಬ್ಯಾನರ್​ ಹಿಡಿದು ಪೋಸ್​ ಕೊಡುತ್ತಿರುವುದು ಈ ಆವೃತ್ತಿಯ ಐಪಿಎಲ್​ನಲ್ಲಿ ಇದೇ ಮೊದಲೇನಲ್ಲ. ಅಭಿಮಾನಿಯೊಬ್ಬರು ಆರ್​ಸಿಬಿ ಟ್ರೋಫಿ ಗೆಲ್ಲುವವರೆಗೆ ನಾನು ಮದುವೆ ಆಗುವುದಿಲ್ಲ ಎಂದು ಬರೆದಿರುವ ಬ್ಯಾನರ್​​ ಹಿಡಿದ ಫೋಟೋ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಬಟ್ಟೆ ಟ್ರೋಲ್​ ಕೂಡ ಆಗಿತ್ತು.

ಇದನ್ನೂ ಓದಿ:ದಿನೇಶ್ ಕಾರ್ತಿಕ್​ ನನಗೆ ಮತ್ತೆ ಕ್ರಿಕೆಟ್​ ಆಡಬೇಕೆಂಬ ಭಾವನೆ ಮೂಡಿಸುತ್ತಿದ್ದಾರೆ: ಎಬಿ ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.