ETV Bharat / sports

ಆ್ಯಂಜಿಯೋಪ್ಲಾಸ್ಟಿ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಮುರಳೀಧರನ್ - ಶ್ರೀಲಂಕಾ ಸ್ಪಿನ್​ ಲೆಜೆಂಡ್ ಮುರಳೀಧರನ್

ಮುರಳೀಧರನ್​ಗೆ ನಿನ್ನೆ ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಜಿ ಸೆಂಗೊಟ್ಟುವೇಲು ಅವರ ಸುಪರ್ದಿಯಲ್ಲಿ ಸ್ಟೆಂಟ್‌ಗಳನ್ನು ಅಳವಡಿಸುವುದರೊಂದಿಗೆ ಯಶಸ್ವಿ ಕರೋನರಿ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಅವರು ತಮ್ಮ ಸಾಮಾನ್ಯ ಚಟುವಟಿಕೆಗಳನ್ನು ಪುನಾರಂಭಿಸಬಹುದು..

ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಮುರಳೀಧರನ್
ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಮುರಳೀಧರನ್
author img

By

Published : Apr 19, 2021, 6:46 PM IST

ಚೆನ್ನೈ : ಶ್ರೀಲಂಕಾದ ಲೆಜೆಂಡರಿ ಬೌಲರ್​ ಮುತ್ತಯ್ಯ ಮುರಳೀಧರನ್​ ಕರೋನಾರಿ ಆ್ಯಂಜಿಯೋಪ್ಲಾಸ್ಟಿ ಬಳಿಕ ಸೋಮವಾರ ಚೆನ್ನೈನ ಅಪೋಲೋ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸನ್​ರೈಸರ್ಸ್​ ಹೈದರಾಬಾದ್​ ತಂಡದ ಕೋಚಿಂಗ್ ವಿಭಾಗದಲ್ಲಿರುವ 49 ವರ್ಷದ ಮಾಜಿ ಲಂಕಾದ ಸ್ಪಿನ್ನರ್​ ಭಾನುವಾರ ಹೃದಯ ಸಂಬಂಧಿ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು.

"ಮುರಳೀಧರನ್​ಗೆ ನಿನ್ನೆ ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಜಿ ಸೆಂಗೊಟ್ಟುವೇಲು ಅವರ ಸುಪರ್ದಿಯಲ್ಲಿ ಸ್ಟೆಂಟ್‌ಗಳನ್ನು ಅಳವಡಿಸುವುದರೊಂದಿಗೆ ಯಶಸ್ವಿ ಕರೋನರಿ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಅವರು ತಮ್ಮ ಸಾಮಾನ್ಯ ಚಟುವಟಿಕೆಗಳನ್ನು ಪುನಾರಂಭಿಸಬಹುದು" ಎಂದು ಅಪೋಲೋ ಆಸ್ಪತ್ರೆ ಹೇಳಿಕೆ ಬಿಡುಗಡೆ ಮಾಡಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಗರಿಷ್ಟ ವಿಕೆಟ್ ಪಡೆದ ದಾಖಲೆ ಹೊಂದಿರುವ ಮುರಳೀಧರನ್ 133 ಟೆಸ್ಟ್, 350 ಏಕದಿನ ಮತ್ತು 12 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​​ನಲ್ಲಿ 800 ವಿಕೆಟ್‌, ಏಕದಿನ ಕ್ರಿಕೆಟ್‌ನಲ್ಲಿ 534 ಮತ್ತು ಟಿ-20ಯಲ್ಲಿ 13 ವಿಕೆಟ್‌ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.