ಚೆನ್ನೈ: ಸನ್ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ಕೋಚ್ ಆಗಿರುವ ಶ್ರೀಲಂಕಾದ ಲೆಜೆಂಡ್ ಮುತ್ತಯ್ಯ ಮುರಳೀಧರನ್ ಹೃದಯ ಸಂಬಂಧಿ ಸಮಸ್ಯೆಯಿಂದ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರತಿಷ್ಠಿತ ಕ್ರೀಡಾ ವೆಬ್ಸೈಟ್ ಇಎಸ್ಪಿಎನ್ ಮಾಹಿತಿಯ ಪ್ರಕಾರ ಮುರಳೀಧರನ್ ಆ್ಯಂಜಿಯೋಪಾಸ್ಟಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಅವರಿಗೆ ಸ್ಟಂಟ್ ಅಳವಡಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದ್ದು, ಅವರು ಡಿಸ್ಚಾರ್ಜ್ ಆದ ನಂತರ ಮತ್ತೆ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ. ಆದರೆ ಈ ಕುರಿತು ಆಸ್ಪತ್ರೆಯಿಂದ ಯಾವುದೇ ಹೆಲ್ತ್ ಬುಲೆಟಿನ್ ಪ್ರಕಟವಾಗಿಲ್ಲ.
ಮುರಳೀಧರನ್ ಪ್ರಸ್ತುತ ಹೈದರಾಬಾದ್ ತಂಡದೊಂದಿಗೆ ಚೆನ್ನೈನಲ್ಲಿದ್ದರು.