ETV Bharat / sports

ಸತತ 72 ಗಂಟೆ ಬ್ಯಾಟಿಂಗ್ ಅಭ್ಯಾಸ ಮಾಡಿ ದಾಖಲೆ ಬರೆದ ಮುಂಬೈ ಯುವಕ - ಸಿದ್ಧಾರ್ಥ್​ ಮೋಹಿತೆ ಗಿನ್ನೆಸ್ ದಾಖಲೆ

19 ವರ್ಷ ವಯಸ್ಸಿನ ಕ್ರಿಕೆಟಿಗ​ ಒಟ್ಟು 72 ಗಂಟೆ ಮತ್ತು ಐದು ನಿಮಿಷಗಳ ಕಾಲ ಬ್ಯಾಟಿಂಗ್ ಅಭ್ಯಾಸ ಮಾಡಿದ್ದಾರೆ. ಈ ಹಿಂದೆ ಸಿದ್ಧಾರ್ಥ್ ಅವರ ಸಹಪಾಠಿ ವಿರಾಗ್ ಮಾನೆ 50 ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿದ್ದರು.

Mumbai teen attempts record for batting longest, stays at crease for over 72 hours
ಸಿದ್ಧಾರ್ಥ್​ ಮೋಹಿತೆ
author img

By

Published : Mar 2, 2022, 6:34 PM IST

ಮುಂಬೈ: ಮುಂಬೈನ ಯುವ ಕ್ರಿಕೆಟಿಗ ಸಿದ್ಧಾರ್ಥ್ ಮೋಹಿತೆ ಮ್ಯಾರಥಾನ್​ ನೆಟ್​ ಸೆಶನ್​​ನಲ್ಲಿ 72 ಗಂಟೆಗಳಿಗೂ ಹೆಚ್ಚು ಸಮಯ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ದಾಖಲೆ ಬರೆದಿದ್ದು, ಅವರಿಗೆ ಗಿನ್ನೆಸ್ ವಿಶ್ವದಾಖಲೆಗೆ ಪಾತ್ರರಾಗುವ ಅವಕಾಶವಿದೆ.

19 ವರ್ಷ ವಯಸ್ಸಿನ ಕ್ರಿಕೆಟಿಗ​ ಒಟ್ಟು 72 ಗಂಟೆ ಮತ್ತು ಐದು ನಿಮಿಷಗಳ ಕಾಲ ಬ್ಯಾಟಿಂಗ್ ಅಭ್ಯಾಸ ಮಾಡಿದ್ದಾರೆ. ಈ ಹಿಂದೆ ಸಿದ್ಧಾರ್ಥ್ ಅವರ ಸಹಪಾಠಿ ವಿರಾಗ್ ಮಾನೆ 50 ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿದ್ದರು.

"ಈ ದಾಖಲೆಯಿಂದ ಸಂತಸವಾಗುತ್ತಿದೆ. ಬಹಳ ದಿನಗಳಿಂದ ಇದಕ್ಕಾಗಿ ಪ್ರಯತ್ನ ನಡೆಸಿದ್ದೆ. ಕೋವಿಡ್ ಲಾಕ್‌ಡೌನ್‌ನಿಂದಾಗಿ ನನ್ನ ಜೀವನದ ಎರಡು ಮಹತ್ವದ ವರ್ಷಗಳು ಕಳೆದುಹೋದವು. ಆದರೆ ವಿಶೇಷ ಸಾಧನೆ ಮಾಡುವ ಛಲದೊಂದಿಗೆ ಹಲವು ಅಕಾಡೆಮಿಗಳು ಮತ್ತು ಕೋಚ್‌ಗಳೊಂದಿಗೆ ಸಂವಾದ ನಡೆಸಿದೆ. ಅವರೆಲ್ಲರ ಸಹಯೋಗದಿಂದ ಇದು ಸಾಧ್ಯವಾಗಿದೆ" ಎಂದು ಮೋಹಿತೆ ಹೇಳಿದರು. ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಅವರಿಗೆ ತರಬೇತಿ ನೀಡಿರುವ ಜ್ವಾಲಾ ಸಿಂಗ್ ಅವರೇ ಮೋಹಿತೆಗೂ ಕೋಚ್ ಆಗಿದ್ದಾರೆ.

"ನಾನು ನಿರಂತವಾಗಿ ಪ್ರಯತ್ನಿಸುತ್ತಿದ್ದುದನ್ನು ಪೂರ್ಣಗೊಳಿಸಿದ್ದೇನೆ. ಈ ದಾಖಲೆಯಿಂದ ನನಗೆ ತುಂಬಾ ಸಂತೋಷವಾಗಿದೆ. ನನ್ನಲ್ಲಿ ಹೆಚ್ಚಿನ ಸಾಮರ್ಥ್ಯವಿದೆ ಎನ್ನುವುದನ್ನು ಜನರಿಗೆ ತೋರಿಸಲು ಇದು ಒಂದು ಮಾರ್ಗವಾಗಿದೆ" ಎಂದು ಮೋಹಿತೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಉಕ್ರೇನ್‌ ಮೇಲೆ ಮುಗಿಬಿದ್ದ ರಷ್ಯಾಗೆ ಯಾವ್ಯಾವ ಕ್ರೀಡೆಗಳಿಂದ ಏನು ನಿರ್ಬಂಧ..?

"ಕೋವಿಡ್​ ಲಾಕ್‌ಡೌನ್‌ನಿಂದಾಗಿ ನನ್ನ ಜೀವನದ ಎರಡು ಮಹತ್ವದ ಕ್ರಿಕೆಟ್ ವರ್ಷಗಳನ್ನು ಕಳೆದುಕೊಂಡೆ, ಅದು ನನ್ನ ಪಾಲಿನ ದೊಡ್ಡ ನಷ್ಟವಾಗಿತ್ತು. ಹಾಗಾಗಿ, ನಾನು ವಿಭಿನ್ನವಾಗಿ ಸಾಧನೆ ಮಾಡಲು ಯೋಚಿಸಿದೆ ಮತ್ತು ಯಾದೃಚ್ಛಿಕವಾಗಿ ನನಗೆ ಈ ಆಲೋಚನೆ ಬಂದಿತು. ನಂತರ ಕೋಚ್​ಗಳೊಂದಿಗೆ ಸಂವಾದ ನಡೆಸಿದೆ. ಅವರ ಸಹಯೋಗದಿಂದ ಅಂತಿಮವಾಗಿ ನಾನುಂದುಕೊಂಡ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದೆ" ಎಂದು ಮೋಹಿತೆ ಹೇಳಿದ್ದಾರೆ.

ಜ್ವಾಲಾ ಸಿಂಗ್ ಬೆಂಬಲ: ಭಾರತ ಅಂಡರ್ 19 ಸ್ಟಾರ್​ ಯಶಸ್ವಿ ಜೈಸ್ವಾಲ್​ಗೆ ಕೋಚ್​ ಆಗಿದ್ದ ಜ್ವಾಲಾ ಸಿಂಗ್ ಅವರೇ ಮೋಹಿತೆ ಅವರ ಮ್ಯಾರಥಾನ್​ ಪ್ರಯತ್ನಕ್ಕೆ ಬೆಂಬಲ ನೀಡಿದ್ದಾರೆ. ನನ್ನ ಈ ಪ್ರಯತ್ನವನ್ನು ಕೇಳಿ ಪ್ರತಿಯೊಬ್ಬರು ಬೇಡ ಎಂದರು, ನಾನು ಜ್ವಾಲಾ ಸರ್​ರನ್ನು ಸಂಪರ್ಕಿಸಿದೆ, ಅವರು ನನಗೆ ಬೆಂಬಲ ನೀಡಿದರು ಮತ್ತು ಅಗತ್ಯವಾದವುಗಳನ್ನೆಲ್ಲಾ ಒದಗಿಸಿಕೊಟ್ಟರು ಎಂದು ಮೋಹಿತೆ ಪಿಟಿಐಗೆ ತಿಳಿಸಿದ್ದಾರೆ.

ನಿಯಮಗಳೇನು?: ಮೂರು ದಿನಗಳ ಕಾಲ ನಿರಂತರ ಬ್ಯಾಟಿಂಗ್ ಮಾಡಿರುವ ಮೋಹಿತೆ ಅವರ ಈ ವಿಶೇಷ ಮೈಲುಗಲ್ಲಿಗೆ ಬೌಲರ್​ಗಳ ತಂಡವೊಂದು ನೆರವು ನೀಡಿದೆ. ಆಸಕ್ತಿದಾಯಕ ಅಂಶವೆಂದರೆ ಬ್ಯಾಟರ್​ ಈ ನೆಟ್​ ಸೆಷನ್​ ವೇಳೆ ಪ್ರತಿಯೊಂದು ಗಂಟೆಗೂ ಕೇವಲ 5 ನಿಮಿಷ ಮಾತ್ರ ವಿರಾಮ ತೆಗೆದುಕೊಳ್ಳಬೇಕಿತ್ತು.

ಇನ್ನು ಮೋಹಿತೆ ಅವರ ಈ ಮ್ಯಾರಾಥಾನ್​ ಇನ್ನಿಂಗ್ಸ್​ ವಿಡಿಯೋವನ್ನು ರೆಕಾರ್ಡ್​ ಮಾಡಿರುವ ಜ್ವಾಲಾ ಸಿಂಗ್​ ಗಿನ್ನೆಸ್​ ದಾಖಲೆಗೆ ಕಳುಹಿಸಿದ್ದಾರೆ ಎಂದು ಮೋಹಿತೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಕೀವ್‌ನಲ್ಲಿ ಸಿಲುಕಿ ಕೊನೆಗೂ ಪೋಲೆಂಡ್‌ ಗಡಿ ತಲುಪಿದ ಭಾರತೀಯ ಚೆಸ್‌ ಆಟಗಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.